India Weather: ಮುಂದಿನ ಎರಡು ದಿನ ದೇಶದ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

India Weather: ರಾಜ್ಯದ ಹಲವು ರಾಜ್ಯಗಳಲ್ಲಿ ಮಳೆರಾಯನ ಅಬ್ಬರಿಸಿ ಬೊಬ್ಬೆರೆಯುತ್ತಲೇ ಇದ್ದಾನೆ. ಅದರಲ್ಲೂ ಇದೀಗ ಉತ್ತರದಿಂದ ದಕ್ಷಿಣ ರಾಜ್ಯಗಳವರೆಗೂ ಮುಂಗಾರು ಚುರುಕು ಪಡೆದಿದೆ. ಹಾಗೆಯೇ ಮುಂದಿನ ಎರಡು ದಿನಗಳ ಕಾಲ ಈ ಭಾಗಗಳಲ್ಲಿ ಮಳೆ ಮತ್ತಷ್ಟು ಚುರುಕು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲ್ಲಿ ತಿಳಿಯಿರಿ.

ಮುಂದಿನ ಎರಡು ದಿನಗಳ ಕಾಲ, ಕರಾವಳಿ ಕರ್ನಾಟಕ, ಗೋವಾ, ಕೇರಳ, ಗುಜಾರಾತ್‌, ಮಹಾರಾಷ್ಟ್ರ ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರುಯುವ ಮುನ್ಸೂಚನೆ ನೀಡಿದೆ. ಅಲ್ಲದೆ, ಮೀನುಗಾರರಿಗೆ ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರಕ್ಕೆ ಇಳಿಯದಂತೆಯೂ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ನೀಡಿದೆ.

India Weather Heavy rainfall forecast In these states for the next two days from july 20

ಇದೀಗ ದೇಶದೆಲ್ಲೆಡೆ ಮುಂಗಾರು ಚುರುಕು ಪಡೆದಿದೆ. ಮತ್ತೊಂದೆಡೆ ಗುರುವಾರ ಗುಜರಾತ್‌ನ 33 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಶೇಕಡ 21ರಷ್ಟು ಮಳೆ ಕೊರತೆ ದಾಖಲಾಗಿದೆ. ಅಹಮದಾಬಾದ್‌ನಲ್ಲಿ ಶೇಕಡ 26ರಷ್ಟು ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮತ್ತೊಂದೆಡೆ, ಇನ್ನು ಶುಕ್ರವಾರ ಸಂಜೆವರೆಗೂ 36 ಗಂಟೆಗಳ ಅವಧಿಯಲ್ಲಿ, ಗುಜರಾತ್‌ನ ಪೋರ್‌ಬಂದರ್, ಜುನಾಗಢ್ ಮತ್ತು ದ್ವಾರಕಾ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಿದೆ. ಪೋರಬಂದರ್ ತಾಲೂಕು 565 ಮಿ.ಮೀ. ಮಳೆಯೊಂದಿಗೆ ಪ್ರವಾಹಕ್ಕೆ ಒಳಗಾಯಿತು. ಪರಿಣಾಮ ಇಲ್ಲಿನ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತವಾಗಿದ್ದು, ಟ್ರಾಫಿಕ್ ಮತ್ತು ಇತರ ಅಡೆತಡೆಗಳು ಉಂಟಾಗಿವೆ.

ಶನಿವಾರ ಬೆಳಗ್ಗೆ ಮುಂಬೈ ಮತ್ತು ಕರಾವಳಿ ಕೊಂಕಣ ಪ್ರದೇಶದ ಉಳಿದ ಭಾಗಗಳಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ದಾದರ್, ವಡಾಲಾ, ಪರೇಲ್ ಮತ್ತು ಕುರ್ಲಾ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆ ಹಿನ್ನೆಲೆ 4-5ಅಡಿಗಳಷ್ಟು ನೀರು ತುಂಬಿಕೊಂಡ ಕಾರಣ ಅಂಧೇರಿ ಸುರಂಗಮಾರ್ಗವನ್ನು ಮುಚ್ಚಲಾಗಿದೆ.

ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಗುಜರಾತ್-ಉತ್ತರ ಕೇರಳ ಕರಾವಳಿಯುದ್ದಕ್ಕೂ ಭಾರೀ ಮಳೆ ಸುರಿಯಲಿದೆ. ಇನ್ನು ಅರಬ್ಬೀ ಸಮುದ್ರದ ಮೇಲೆ ಚಂಡಮಾರುತದ ಪ್ರಭಾವ ಭೀರಲಿದ್ದು, ಇದರ ಪರಿಣಾಮ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಹೆಚ್ಚಿನ ಮಳೆಯನ್ನು ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತ ಹವಾಮಾನ ಇಲಾಖೆ ಪ್ರಕಾರ, ಜುಲೈ 21 & 22ರಂದು ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಬೀಳುವ ಸಾಧ್ಯತೆಯಿದೆ. ಹಾಗೆಯೇ ಭಾರೀ ಮಳೆ ಹಿನ್ನೆಲೆ ಜುಲೈ 20-22ರವರೆಗೆ ಗುಜರಾತ್‌ಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಜುಲೈ 20ರಂದು ಕೊಂಕಣ ಮತ್ತು ಮಧ್ಯ ಮಹಾರಾಷ್ಟ್ರಕ್ಕೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ನಂತರ ಮಳೆ ತುಸು ಕಡಿಮೆಯಾದರೆ, ಜುಲೈ 24ರವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+