ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ?

ಬೆಂಗಳೂರು; ಬಹಳ ದೂರದ ಮಾರ್ಗದಲ್ಲಿ ಪ್ರಯಾಣಿಸಲು ಜನರಿಗೆ ನೆರವಾಗಲು, ಆರಾಮದಾಯಕ ಸಾರಿಗೆ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆಯು ಮೊದಲ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Sleeper Train) ರೈಲನ್ನು ಪರಿಚಯಿಸಿದೆ. ಒಂದು ರೈಲು ಕಾರ್ಯಾಚರಣೆ ಮಾಡುತ್ತಿದ್ದು, ಬೆಂಗಳೂರು-ಮುಂಬೈ ಮಾರ್ಗದ ಸೇವೆ ಒಪ್ಪಿಗೆ ನೀಡಲಾಗಿದೆ. ಇದು ಸೇರಿ ಒಟ್ಟು 12 ಸ್ಲೀಪರ್ ವಂದೇ ಭಾರತ್ ರೈಲುಗಳನ್ನು ಪರಿಚಯಿಸಿಲು ಸರ್ಕಾರ ಸಜ್ಜಾಗುತ್ತಿದೆ. ಯಾವೆಲ್ಲ ಮಾರ್ಗಗಳಲ್ಲಿ ಈ ರೈಲುಗಳು ಸೇವೆಗೆ ನಿಯೋಜನೆಗೊಳ್ಳಲಿವೆ?

ಭಾರತೀಯ ರೈಲ್ವೆ ಇದೇ ವರ್ಷ ಡಿಸೆಂಬರ್ 2026ರ ವೇಳೆಗೆ 12 ಹೊಸ ವಂದೇ ಭಾರತ್ ಸ್ಲೀಪರ್ ರೇಕ್‌ಗಳನ್ನು ಪರಿಚಯಿಸಲಿದೆ. ಸದ್ಯ 16 ಬೋಗಿಗಳ ಸ್ಲೀಪರ್ ವಂದೇ ಭಾರತ್ ರೈಲನ್ನು ಕರ್ನಾಟಕದ ಬೆಂಗಳೂರು ಮತ್ತು ಮಹಾರಾಷ್ಟ್ರದ ಮುಂಬೈ ಮಧ್ಯೆ (Bengaluru-Mumbai route train) ಕಾರ್ಯಾಚರಣೆ ನಡೆಸಲು ಅನುಮೋದನೆ ನೀಡಿದೆ.

12 Vande Bharat Sleeper

ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಈ ಸೇವೆಗೆ ಅನುಮೋದನೆ ನೀಡಿದ್ದಾರೆ. 2026ರ ಅಂತ್ಯದ ವಿವಿಧ ಮಾರ್ಗಗಳಲ್ಲಿ 12 ಈ ಸ್ಲೀಪರ್‍‌ ರೈಲುಗಳ ಸೇವೆ ನಿರೀಕ್ಷಿಸಲಾಗಿದೆ. ಹೆಚ್ಚಾಗಿ ರಾತ್ರಿ ವೇಳೆ ದೂರದ ಪ್ರಯಾಣ ಮಾಡುವವರಿಗೆ ಈ ರೈಲು ಹೆಚ್ಚಿನ ಸೇವೆ, ಅನುಕೂಲ ಒದಗಿಸಲಿವೆ.

ಆಧುನಿಕ ಸೌಲಭ್ಯದ ಬೋಗಿಗಳು

ಈ ಸ್ಲೀಪರ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದೆ. ಅದರಲ್ಲಿ 11 ಎಸಿ 3-ಟೈರ್, 4 ಎಸಿ 2-ಟೈರ್, 1 ಎಸಿ ಫಸ್ಟ್ ಬೋಗಿಗಳ ಇವೆ. ಪ್ರತಿ ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. ಉತ್ತಮ ಗಾಳಿ ಬೆಳಕು ಬರುವಂತೆ ಕಿಟಿಗಳು, ಚಾರ್ಜಿಂಗ್ ಪೋರ್ಟ್, ಶೌಚಾಲಯ, ಸಿಸಿ ಟಿವಿ, ಸುಧಾರಿತ ಆಸನಗಳು, ಸ್ವಯಂಚಾಲಿತ ಬಾಗಿಲುಗಳು, ಸೆನ್ಸಾರ್ ಚಾಲಿ ಆಪರೇಟಿಂಗ್, ಅಗ್ನಿಶಾಮಕ ವ್ಯವಸ್ಥೆ ಹೀಗೆ ಎಲ್ಲ ವಿಧದಲ್ಲಿ ಅತ್ಯುತ್ತಮ ವಿನ್ಯಾಸ, ಸೌಲಭ್ಯಗಳನ್ನು ಒಳಗೊಂಡಿದೆ. ಹೀಗಾಗಿ ಈ ರೈಲಿನ ಸೇವೆ ಪಡೆಯಲು ಪ್ರಯಾಣಿಕರು ಕಾತರರಾಗಿದ್ದಾರೆ.

ಮೊದಲ ಸ್ಲೀಪರ್ ವಂದೇ ಭಾರತ್ ರೈಲು

ಮೊದಲ ಬಾರಿಗೆ ಕಾಮಾಕ್ಯ-ಹೌರಾ ಮಾರ್ಗದಲ್ಲಿ ಭಾರತೀಯ ರೈಲ್ವೆ ಇಲಾಖೆ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲನ್ನು ಆರಂಭಿಸಿತು. ಅದರ ಬೆನ್ನಲ್ಲೆ ಇದೀಗ ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ ನಡುವೆ ಹೊಸ ಸೇವೆ ಆರಂಭಿಸಲು ಅಧಿಕೃತ ಅನುಮೋದನೆ ನೀಡಿದೆ.

12 ಮಾರ್ಗಗಳಲ್ಲಿ ಸ್ಲೀಪರ್ ವಂದೇ ಭಾರತ್ ರೈಲುಗಳು

1. ಹೌರಾ - ಕಾಮಾಕ್ಯ ಮಾರ್ಗ (ಇಲ್ಲಿ ವಿಬಿ ಸ್ಲೀಪರ್ ರೈಲು ಆರಂಭವಾದ ಮಾರ್ಗ)

2. ಮುಂಬೈ - ಬೆಂಗಳೂರು ಮಾರ್ಗ (ಸಂಚಾರಕ್ಕೆ ಇತ್ತೀಚೆಗೆ ಅನುಮೋದನೆ ಆಗಿದೆ)

3. ದೆಹಲಿ - ಸೂರತ್ ಮಾರ್ಗ

4. ಹೌರಾ - ದೆಹಲಿ ಮಾರ್ಗ

5. ಹೈದರಾಬಾದ್ - ಅಹಮದಾಬಾದ್ ಮಾರ್ಗ

6. ಪಾಟ್ನಾ - ದೆಹಲಿ ರೂಟ್

7. ದೆಹಲಿ - ಗುವಾಹಟಿ ರೂಟ್

8. ಚೆನ್ನೈ - ಅಹಮದಾಬಾದ್ ಮಾರ್ಗ

9. ಭಾಗಲ್ಪುರ್ - ದೆಹಲಿ ಲೈನ್

10. ಮಾಲ್ಡಾ - ಸೂರತ್ ಮಾರ್ಗ

11. ಗಯಾ - ದಿಬ್ರುಗಢ ಮಾರ್ಗ

12. ದಿಯೋಘರ್ - ಕತ್ರಾ ಮಾರ್ಗಗಳಲ್ಲಿ ಸ್ಲೀಪರ್ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ಶೀಘ್ರವೇ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+