Stock Market: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ, ಇಸ್ರೇಲ್ & ಇರಾನ್ ಯುದ್ಧದ ಭಯ!
ಭಾರತೀಯ ಹೂಡಿಕೆದಾರರಿಗೆ ಇದೀಗ ಭಯ ಶುರುವಾಗಿದೆ, ಇಸ್ರೇಲ್ & ಇರಾನ್ ಯುದ್ಧದ ಕಾರ್ಮೋಡ ಇದೀಗ ಭಾರಿ ಆತಂಕ ಸೃಷ್ಟಿಯಾಗುವಂತೆ ಮಾಡಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದು ಆರ್ಥಿಕ ಕಂಪನಕ್ಕೂ ಕಾರಣವಾಗಿದ್ದು, ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ ಉಂಟಾಗಿದೆ. ಹಾಗಾದ್ರೆ ಹೂಡಿಕೆದಾರರಿಗೆ ಇದರಿಂದ ಉಂಟಾಗಿರುವ ನಷ್ಟ ಎಷ್ಟು? ಬನ್ನಿ ತಿಳಿಯೋಣ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಹೂಡಿಕೆದಾರರು ಮಾನಸಿಕವಾಗಿ ಕುಸಿದರು. ಅಂದಹಾಗೆ ಇಸ್ರೇಲ್ & ಇರಾನ್ ಸಂಘರ್ಷ ಕೊತ ಕೊತ ಕುದಿಯುತ್ತಿದೆ. ಅತ್ತ ಇಸ್ರೇಲ್ ಕೂಡ ನಾವು ದಾಳಿ ಮಾಡ್ತೀವಿ, ನಾವು ರಿವೇಂಜ್ ತೆಗೆದುಕೊಳ್ತೀವಿ ಅಂತಿದೆ. ಇತ್ತ ಇರಾನ್ ಕೂಡ ನಾವು ಕೂಡ ಮತ್ತೆ ದಾಳಿ ಮಾಡ್ತೀವಿ ಅಂತಾ ಹೇಳ್ತಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ಘರ್ಷಣೆ ಜಾಗತಿಕ ಆರ್ಥಿಕತೆ ಬುಡಕ್ಕೆ ಬಾಂಬ್ ಇಡುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಸಿಕ್ಕಿದ್ದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಕಂಪನ ಉಂಟಾಗಿದೆ. ಈ ಕಾರಣಕ್ಕೆ ಇಂದು ಭಾರತೀಯ ಷೇರು ಮಾರುಕಟ್ಟೆ ಬಿದ್ದು ಹೋಗಿದ್ದು, ಮಾಹಿತಿಗಾಗಿ ಮುಂದೆ ಓದಿ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ...
ಮುಂಬೈ ಷೇರು ಪೇಟೆಯಲ್ಲಿ ಇಂದು ಪರಿಸ್ಥಿತಿ ಹೇಗಿತ್ತು ಅಂದ್ರೆ ಕೆಲವೇ ಕ್ಷಣಗಳಲ್ಲಿ ಎಲ್ಲಾ ಬಿದ್ದು ಹೋಗಿತ್ತು. ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 1700 ಅಂಕ ಕುಸಿತ ಕಂಡಿದ್ದು, ನಿಫ್ಟಿ-50 ಕೂಡ 500 ಅಂಕಗಳ ಕುಸಿತ ದಾಖಲಿಸಿದೆ. ಬ್ಯಾಂಕ್ ನಿಫ್ಟಿ ಸುಮಾರು 1100 ಅಂಕಗಳಷ್ಟು ಕುಸಿದು ಹೋಗಿದ್ದು, ಮಿಡ್‌ಕ್ಯಾಪ್ ನಿಫ್ಟಿ ಕೂಡ 350 ಅಂಕ ಕುಸಿತ ಕಂಡಿದ್ದು, ಇದಿಷ್ಟೂ ಇತ್ತೀಚಿನ ಮಾಹಿತಿಯಾಗಿದೆ. ಷೇರು ಮಾರುಕಟ್ಟೆ ವಹಿವಾಟು ಮುಗಿಸುವ ಸಮಯಕ್ಕೆ ಮತ್ತಷ್ಟು ಕುಸಿತ ಕಾಣುವ ಭಯ ಆವರಿಸಿದೆ.
ಕಚ್ಚಾ ತೈಲದ ಬೆಲೆ ಭರ್ಜರಿ ಏರಿಕೆ!
ಇಸ್ರೇಲ್ & ಇರಾನ್ ಯುದ್ಧದ ಭಯದಿಂದಾಗ ಇದೀಗ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದ್ದರೆ, ಮತ್ತೊಂದು ಕಡೆ ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯು ಕಂಡುಬರುತ್ತಿದೆ. ಇರಾನ್ & ಇಸ್ರೇಲ್ ದೇಶಗಳ ನಡುವೆ ಹೊತ್ತಿಕೊಂಡಿರುವ ಬೆಂಕಿ ದೊಡ್ಡ ಸಮಸ್ಯೆ ತಂದು ಇಟ್ಟಿದೆ ಇಸ್ರೇಲ್ ಅಕಸ್ಮಾತ್ ನಮ್ಮ ಮೇಲೆ ಪ್ರತಿದಾಳಿ ನಡೆಸಿದ್ದೇ ಆದಲ್ಲಿ ಭಾರಿ ಪ್ರಮಾಣದ ಅಟ್ಯಾಕ್ ಗ್ಯಾರಂಟಿ ಅಂತಿದೆ ಇರಾನ್. ಹೀಗಾಗಿ ಜಾಗತಿಕ ತೈಲ ಮಾರುಕಟ್ಟೆ ಬುಡ ಅಲುಗಾಡಿದೆ. ಬಹು ದೊಡ್ಡ ಗ್ಯಾಪ್ ಬಳಿಕ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್‌ಗೆ 75 ಡಾಲರ್‌ಗೆ ತಲುಪಿದೆ.












Click it and Unblock the Notifications