Inflation Spike: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಶೇ.5.54ಕ್ಕೆ ಏರಿಕೆ! ಈರುಳ್ಳಿ, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ
Inflation Spike: ಭಾರತದ ಚಿಲ್ಲರೆ ಹಣದುಬ್ಬರವು ವಾರ್ಷಿಕ ಆಧಾರದ ಮೇಲೆ (YoY) ಶೇ. 5.54ಕ್ಕೆ ಏರಿಕೆಯಾಗಿದೆ. ಇದು ಕಳೆದ ಎರಡು ತಿಂಗಳ ಹಿಂದಿನಕ್ಕಿಂತಲೂ ಅಧಿಕವಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಸೋಮವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಬಹಿರಂಗಗೊಂಡಿದೆ. ಹಂತ ಹಂತವಾಗಿ ಹೆಚ್ಚಾಗುತ್ತಿರುವ ಹಣದುಬ್ಬರ ಪರಿಣಾಮವು ಜನರ ಮೇಲಾಗುತ್ತಿದ್ದು, ದಿನಬಳಕೆಯ ಪದಾರ್ಥಗಳ ಬೆಲೆ ಗಗನಕ್ಕೇರಿಕೆ ಆಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
NSO ಪ್ರಕಾರ, ಆಹಾರ ಪದಾರ್ಥಗಳ ಬೆಲೆ ಹೆಚ್ಚಳವು 2026ರ ಆಗಸ್ಟ್ ತಿಂಗಳಿಗಿಂತ ಸೆಪ್ಟೆಂಬರ್‍ನಲ್ಲಿ ಏರಿಕೆ ಆಗಿದೆ. ಆಗಸ್ಟ್ ನಲ್ಲಿ ಶೇ. 4.83 ರಷ್ಟಿದ್ದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್‍ನಲ್ಲಿ 5.54ಕ್ಕೆ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಹಣದುಬ್ಬರ ದರವು ಶೇ. 5ರ ಗಡಿ ದಾಟಿದೆ!. ಇದರಿಂದ ದೇಶದ ಬಡವರು, ಮಧ್ಯಮ ವರ್ಗದ ಜನರ ಆರ್ಥಿಕತೆ ಮೇಲೆ, ದೈನಂದಿನ ನಿರ್ವಹಣಾ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ ಎಂದು NDTV ವರದಿ ಮಾಡಿದೆ.

ಆಹಾರ ಹಣದುಬ್ಬರ ಹೆಚ್ಚಾಗಿದ್ದೆಷ್ಟು?
ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಹಣಕಾಸು ನೀತಿ ಸಮಿತಿಯು (MPC) ಸದರಿ ಏರುಗತಿಯ ಹಣದುಬ್ಬರ ನಿಯಂತ್ರಿಸಲು ಮುಖ್ಯ ಸಾಲದ ದರ ಅಥವಾ ರೆಪೊ ದರ 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದೆರ ಶೇ.5.50ಕ್ಕೆ ಹೆಚ್ಚಿಸಿತು. ಇದೆಲ್ಲ ಆದ ಮರು ದಿನವೇ ಈ NSO ವರದಿ ಬಿಡುಗಡೆ ಆಗಿದ್ದು, ಆರ್ಥಿಕ ಆಘಾತ ಎದುರಾದಂತಾಗಿದೆ. ಆಹಾರ ಹಣದುಬ್ಬರುವ ಆಗಸ್ಟ್ ತಿಂಗಳಿಗಿಂತ (ಶೇ. 5.97) ಸೆಪ್ಟೆಂಬರ್‌ನಲ್ಲಿ ಶೇ. 7.74ಕ್ಕೆ ಹೆಚ್ಚಾಗಿದೆ. ಇದರ ಪರಿಣಾಮ ಆಹಾರ ಪದಾರ್ಥಗಳ ಬೆಲೆಯ ಮೇಲಾಗಿದೆ.
ಯಾವೆಲ್ಲ ಪದಾರ್ಥಗಳ ಬೆಲೆ ಏರಿಕೆ?
ಈಗಾಗಲೇ ಈರುಳ್ಳಿ ಬೆಲೆ ಹೆಚ್ಚಾಗಿದೆ. 20 ರಿಂದ 40ಕ್ಕೇರಿತ್ತು, ಇದೀಗ ಕೆಜಿಗೆ 70 ರೂಪಾಯಿ ಆಸುಪಾಸು ಇದೆ. ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ಹಣ್ಣುಗಳು ಅತಿ ಹೆಚ್ಚು ಹಣದುಬ್ಬರ ದರವನ್ನು ಕಂಡಿವೆ. ಇವುಗಳ ಬೆಲೆ ಗಗನಕ್ಕೇರಿದ್ದು, ಜನ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಈರುಳ್ಳಿ ಹಣದುಬ್ಬರ ಆಗಸ್ಟ್‌ನಲ್ಲಿ ಶೇ. 48.78, ಸೆಪ್ಟೆಂಬರ್‌ನಲ್ಲಿ ಶೇ. 108.09ಕ್ಕೆ ಹೆಚ್ಚಾಗಿದೆ. ಬೆಳ್ಳುಳ್ಳಿ ಹಣದುಬ್ಬರ ಕ್ರಮವಾಗಿ ಶೇ. 43.60ರಿಂದ ಶೇ. 54.62ಕ್ಕೆ ಹಾಗೂ ನಿಂಬೆ ಹಣ್ಣಿನ ಹಣದುಬ್ಬರ ಕ್ರಮವಾಗಿ ಶೇ. 15.15ರಿಂದ ಶೇ. 36.41ಕ್ಕೆ ಹೆಚ್ಚಾಗಿದೆ. ಇದರೊಂದಿಗೆ ಸಾರಿಗೆ, ದೈನಂದಿನ ವೈಯಕ್ತಿಕ ಆರೈಕೆ, ಆರೋಗ್ಯ, ಸರಕು, ಸೇವೆಗಳು ಒಳಗೊಳ್ಳುತ್ತವೆ. ಒಟ್ಟಾರೆಯಾಗಿ ಬರಗಾಲದ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳು ಗಗನಕುಸುಮದಂತಾಗಿವೆ.
2024ರ ಆಧಾರವಾಗಿಟ್ಟುಕೊಂಡು 'ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ' (CPI) ಆಧರಿಸಿದ ಹಣದುಬ್ಬರ ದರ ಸೆಪ್ಟೆಂಬರ್ 2025ಕ್ಕೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್ ತಿಂಗಳಿಗೆ ಬರೋಬ್ಬರಿ ಶೇಕಡಾ 5.54ರಷ್ಟಿದೆ (ತಾತ್ಕಾಲಿಕ) ಏರಿಕೆ ಗಿದೆ ಎಂದು ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ. ಅದರಲ್ಲಿ ಗ್ರಾಮೀಣ, ನಗರ ಪ್ರದೇಶಗಳ ಹಣದುಬ್ಬರ ಕೊಂಚ ವ್ಯತ್ಯಾಸವಾಗುತ್ತದೆ.
ಇನ್ನೂ ಜಾಗತಿಕವಾಗಿ ಬಡ್ಡಿ ಆದಾಯದ ಏರಿಕೆ ನಡುವೆ ವ್ಯತ್ಯಾಸ ಕಂಡು ಬರುತ್ತಿದೆ. ಆರ್‌ಬಿಐ (RBI) ಬಡ್ಡಿ ದರಗಳನ್ನು ಹೆಚ್ಚಿಸುವ ನಿರೀಕ್ಷೆಗಳು ಕಾಣಿಸುತ್ತಿವೆ. ಈಗಾಗಲೇ ಎರಡು ಬಾರಿ ದರ ಏರಿಕೆ ಆಗಿದೆ. ಸಮಾಧಾನಕರ ವಿಷಯವೆಂದರೆ ಖಾರಿಫ್ ಬೆಳೆಗಳು ಮಾರುಕಟ್ಟೆ ಪ್ರವೇಶಿಸಿವೆ. ತರಕಾರಿ ಬೆಲೆ ನಿಯಂತ್ರಿಸುವ ಜೊತೆಗೆ ಕಚ್ಚಾ ತೈಲ ಬೆಲೆ ಸ್ಥಿರ/ಇಳಿಕೆಯಿಂದ ಒಂದಷ್ಟು ನಿರೀಕ್ಷಿತ ಆರ್ಥಿಕ ಹೊರೆಯಿಂದ ತಪ್ಪಿಸಿಕೊಂಡಂತಾಗಿದೆ.


Click it and Unblock the Notifications
