ಭಾರತದಲ್ಲಿ ಒಂದೇ ದಿನ 24879 ಕೊರೊನಾ ಕೇಸ್ ಪತ್ತೆ, 487 ಸಾವು

ದೆಹಲಿ, ಜುಲೈ 9: ದೇಶದಲ್ಲಿ ಒಂದೇ ದಿನ 24879 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,67,296 ಲಕ್ಷಕ್ಕೆ ಏರಿಕೆಯಾಗಿದೆ.

Recommended Video

      WHO ಹಾಡಿ ಹೊಗಳಿದ ಚೀನಾ | Oneindia Kannada

      ಕಳೆದ 24 ಗಂಟೆಯಲ್ಲಿ 24879 ಮಂದಿಗೆ ಸೋಂಕು ತಗುಲಿದ್ದು, 487 ಜನರು ಸೋಂಕಿನಿಂದ ಪ್ರಾಣಬಿಟ್ಟಿದ್ದಾರೆ. ಈವರೆಗೂ ಒಟ್ಟು ಮೃತಪಟ್ಟವರ ಸಂಖ್ಯೆ 21129 ಕ್ಕೆ ಜಿಗಿದಿದೆ.

      ಇಂದಿನ ವರದಿ ಬಳಿಕ ದೇಶದಲ್ಲಿ 2,69,789 ಕೊರೊನಾ ವೈರಸ್ ಪ್ರಕರಣಗಳು ಸಕ್ರಿಯವಾಗಿದೆ. 4,76,378 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      ಕಳೆದ 24 ಗಂಟೆಯಲ್ಲಿ ದಾಖಲಾದ ಕೇಸ್‌ಗಳ ಪೈಕಿ ರಾಜ್ಯವಾರು ಅಂಕಿ ಅಂಶ ಗಮನಿಸಿದರೆ, ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಸಂಜೆಯವರೆಗೂ ಮಹಾರಾಷ್ಟ್ರದಲ್ಲಿ 6,603 ಜನರಿಗೆ ಸೋಂಕು ತಗುಲಿದೆ. ತಮಿಳುನಾಡಿನಲ್ಲಿ 3,756 ಕೇಸ್, ದೆಹಲಿಯಲ್ಲಿ 2,033 ಸೋಂಕು, ಕರ್ನಾಟಕದಲ್ಲಿ 2062 ಸೋಂಕು ದೃಢವಾಗಿದೆ.

      India reports 24879 new COVID19 cases today

      ಇನ್ನು ಜಗತ್ತಿನಲ್ಲಿ ಹೊಸ ಕೇಸ್‌ಗಳನ್ನು ಗಮನಿಸಿದರೆ ಭಾರತಕ್ಕೂ ಇಂದು ಸಹ ಮೂರನೇ ಸ್ಥಾನ. ಅಮೆರಿಕದಲ್ಲಿ ಹೊಸದಾಗಿ 61,848 ಕೇಸ್ ದಾಖಲಾಗಿದೆ. ಬ್ರೆಜಿಲ್‌ನಲ್ಲಿ 41,541 ಕೇಸ್ ವರದಿಯಾಗಿದೆ. ಭಾರತದಲ್ಲಿ 24879 ಪ್ರಕರಣ ಪತ್ತೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+