ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ದೇಶವನ್ನು ಹಿಂದಿಕ್ಕಿದ ಭಾರತ

ದೆಹಲಿ, ಜುಲೈ 23: ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಗೆ ಹೋಲಿಸಿಕೊಂಡರೆ, ಮೃತಪಟ್ಟವರ ಸಂಖ್ಯೆಯ ಪ್ರಮಾಣ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳುತ್ತಿದೆ.

Recommended Video

      America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

      ಆದರೆ, ಕೊವಿಡ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಕಳೆದ 24 ಗಂಟೆಯಲ್ಲಿ 1,129 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ.

      ಇಂದಿನ ವರದಿ ಬಳಿಕ ಸ್ಪೇನ್ ದೇಶವನ್ನು ಭಾರತ ಹಿಂದಿಕ್ಕಿದೆ. ಸ್ಪೇನ್‌ನಲ್ಲಿ ಇದುವರೆಗೂ 28,426 ಜನರು ಕೊವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇದೀಗ, ಈ ಸಂಖ್ಯೆಯನ್ನು ಭಾರತ ಹಿಂದಿಕ್ಕಿದೆ. ಕೊರೊನಾ ಸಾವಿನ್ ಸಂಖ್ಯೆಯಲ್ಲಿ ಸ್ಪೇನ್ ಹಿಂದಿಕ್ಕರುವ ಭಾರತ ಫ್ರಾನ್ಸ್ ದೇಶವನ್ನು ಹಿಂದಿಕ್ಕುವತ್ತಾ ಸಾಗಿದೆ.

      India Passed Spain in COVID 19 death numbers

      ಫ್ರಾನ್ಸ್‌ನಲ್ಲಿ ಇದುವರೆಗೂ 30,172 ಜನರು ಕೊವಿಡ್‌ಗೆ ಬಲಿಯಾಗಿದ್ದಾರೆ. ಬಹುಶಃ ಜುಲೈ 24ರ ವರದಿ ಬಂದ ಬಳಿಕ ಫ್ರಾನ್ಸ್ ದೇಶವನ್ನು ಸಹ ಭಾರತ ಹಿಂದಿಕ್ಕುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕಂದ್ರೆ, ಫ್ರಾನ್ಸ್ ದೇಶದಲ್ಲಿ ಸಾವಿನ ಪ್ರಮಾಣ ಸಂಪೂರ್ಣವಾಗಿ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 7 ಜನರು ಮಾತ್ರ ಮೃತಪಟ್ಟಿದ್ದಾರೆ.

      ಜಗತ್ತಿನಲ್ಲಿ ಒಟ್ಟು 629,346 ಜನರು ಕೊವಿಡ್‌ನಿಂದ ಸಾವನ್ನಪ್ಪಿದ್ದು, ಅಮೆರಿಕ ಮೊದಲ ಸ್ಥಾನದಲ್ಲಿದೆ. ಯುಎಸ್‌ನಲ್ಲಿ 146,183 ಸಾವು, ಬ್ರೆಜಿಲ್‌ನಲ್ಲಿ 82,890 ಸಾವು, ಯುಕೆದಲ್ಲಿ 45,501 ಸಾವು, ಮೆಕ್ಸಿಕೋದಲ್ಲಿ 40,400 ಸಾವು, ಇಟಲಿಯಲ್ಲಿ 35,082 ಸಾವು ಹಾಗೂ ಫ್ರಾನ್ಸ್‌ನಲ್ಲಿ 30,172 ಜನರು ಪ್ರಾಣ ಕಳೆದುಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+