LPG Price: ಎಲ್ಪಿಜಿ ದರದ ಬಗ್ಗೆ ಹೊಸ ಸುದ್ದಿ ಹಂಚಿಕೊಂಡ ಕೇಂದ್ರ
ಕೇಂದ್ರ ಸರ್ಕಾರವು ಎಲ್ಪಿಜಿ ದರಗಳ ಬಗ್ಗೆ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದೆ. ಡಿಸೆಂಬರ್ ಆರಂಭದಲ್ಲೇ ವಾಣಿಜ್ಯ ಬಳಕೆ ಸಿಲಿಂಡರ್ ದರ ಕಡಿಮೆಯಾಗಿತ್ತು. ಅಲ್ಲದೆ ಇತ್ತೀಚೆಗೆ ಭಾರತವು ಅಮೇರಿಕಾದೊಂದಿಗೆ ಎಲ್ಪಿಜಿ ಆಮದು ಮಾಡಿಕೊಳ್ಳಲು ಒಪ್ಪಂದ ಕೂಡ ಮಾಡಿಕೊಂಡಿತ್ತು. ಇದರ ನಡುವೆ ಕೇಂದ್ರವು ಎಲ್ಪಿಜಿ ದರಗಳ ಬಗ್ಗೆ ಗ್ರಾಹಕರಿಗೆ ಮಹತ್ವದ ವಿಚಾರವನ್ನು ಹಂಚಿಕೊಂಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲೇ ಎಲ್ಪಿಜಿ ದರ ಕಡಿಮೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಂಸತ್ಗೆ ತಿಳಿಸಿದ್ದಾರೆ.
ನಮ್ಮ ಪಕ್ಕದ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ನೇಪಾಳಕ್ಕಿಂತ ಭಾರತದಲ್ಲಿ ಗ್ರಾಹಕರಿಗೆ ಎಲ್ಪಿಜಿ ಬೆಲೆ ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಈ ವರ್ಷದ ನವೆಂಬರ್ 1ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆ.ಜಿ ತೂಕದ ಎಲ್ಸಿಲಿಂಡರ್ನ ಪರಿಣಾಮಕಾರಿ ಬೆಲೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ 553 ರೂಪಾಯಿ ಇತ್ತು ಎಂದು ವಿವರಿಸಿದ್ದಾರೆ.

ಪಾಕಿಸ್ತಾನ-ಶ್ರೀಲಂಕಾದಲ್ಲಿ ಎಲ್ಪಿಜಿ ದುಬಾರಿ
ಇನ್ನು ನೆರೆಯ ಪಾಕಿಸ್ತಾನದ ಲಾಹೋರ್ನಲ್ಲಿ ಪ್ರತಿ ಸಿಲಿಂಡರ್ಗೆ 902.20 ರೂಪಾಯಿ ಇದೆ. ಶ್ರೀಲಂಕಾದ ಕೊಲಂಬೊದಲ್ಲಿ ಸಿಲಿಂಡರ್ ಬೆಲೆ 1,227.58 ರೂಪಾಯಿ ಹಾಗೂ ನೇಪಾಳದ ಕಠ್ಮಂಡುವಿನಲ್ಲಿ 1,205.72 ರೂಪಾಯಿಯಷ್ಟಿದೆ. ಹೀಗಾಗಿ ಚಾಲ್ತಿಯಲ್ಲಿರುವ ಬೆಲೆಗಳಿಗಿಂತ ಭಾರತದಲ್ಲಿ ಎಲ್ಪಿಜಿ ದರ ಕಡಿಮೆ ಇದೆ ಎಂದಿದ್ದಾರೆ.
ಭಾರತವು ಈಗ ತನ್ನ ಒಟ್ಟು ಎಲ್ಪಿಜಿಯಲ್ಲಿ ಶೇ 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದಕ್ಕೆ ಅನುಗುಣವಾಗಿ ದೇಶದಲ್ಲಿ ಎಲ್ಪಿಜಿ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅದರ ಬೆಲೆಗಳಿಗೆ ಸಂಬಂಧಿಸಿವೆ. ಸೌದಿಯ ಎಲ್ಪಿಜಿ ಬೆಲೆ ನಿಗದಿಗೆ ಅಂತರರಾಷ್ಟ್ರೀಯ ಮಾನದಂಡ ನೋಡಿದರೆ ಜುಲೈ 2023ರಿಂದ ನವೆಂಬರ್ 2025ರವರೆಗೆ ಸರಾಸರಿ ಶೇ 21ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲೂ ಗೃಹಬಳಕೆ ಎಲ್ಪಿಜಿ ಬೆಲೆಗಳು ಸುಮಾರು ಶೇ 22ರಷ್ಟು ಕಡಿಮೆಯಾಗಿ 1,103 ರೂಪಾಯಿಯಿಂದ 853 ರೂಪಾಯಿಗೆ ಕಡಿಮೆಯಾಗಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ಹಂಚಿಕೊಂಡಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ದೇಶದಾದ್ಯಂತ ಗ್ರಾಮೀಣ ಭಾಗಗಳಲ್ಲಿ ಅಡುಗೆಗೆ ಎಲ್ಪಿಜಿ ಒದಗಿಸುವ ಸಲುವಾಗಿ 2016ರಿಂದ 2025ರವರೆಗೆ 8,017 ವಿತರಣಾ ಕೇಂದ್ರಗಳನ್ನು ನಿಯೋಜಿಸಿವೆ. ಅವುಗಳಲ್ಲಿ 7,420 ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿವೆ. ಈ ನವೆಂಬರ್ 1ರ ಹೊತ್ತಿಗೆ, ದೇಶದಾದ್ಯಂತ ಒಟ್ಟು 25,587 ಎಲ್ಪಿಜಿ ವಿತರಣಾ ಕೇಂದ್ರಗಳಿವೆ. ಇವುಗಳನ್ನು ದೇಶಾದ್ಯಂತ ಇರುವ ಒಎಂಸಿಗಳ 214 ಎಲ್ಪಿಜಿ ಬಾಟ್ಲಿಂಗ್ ಸ್ಥಾವರಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ದೇಶದ ಮೂಲೆ ಮೂಲೆಗೆ ಎಲ್ಪಿಜಿ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ ಎಂದಿದ್ದಾರೆ.
2025-26ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಪಿಎಂಯುವೈ ಗ್ರಾಹಕರಿಗೆ 14.2 ಕೆ.ಜಿ ಸಿಲಿಂಡರ್ನ 9 ಮರುಪೂರಣಗಳಿಗೆ 14.2 ಕೆ.ಜಿ ಸಿಲಿಂಡರ್ಗೆ 300 ರೂಪಾಯಿಗಳ ಸಬ್ಸಿಡಿ ಒದಗಿಸುತ್ತಿದೆ. ಉಜ್ವಲ ಯೋಜನೆಯ ಗ್ರಾಹಕರಿಗೆ, ಗೃಹಬಳಕೆ ಎಲ್ಪಿಜಿಯ ಪರಿಣಾಮಕಾರಿ ಬೆಲೆಯನ್ನು ಆಗಸ್ಟ್ 2023ರಲ್ಲಿ 903 ರೂಪಾಯಿಗಳಿಗಿಂತ 2025ರ ನವೆಂಬರ್ನಲ್ಲಿ 553 ರೂಪಾಯಿಗಳಿಗೆ, ಅಂದರೆ ಸುಮಾರು ಶೇ 39ರಷ್ಟು ಕಡಿಮೆಯಾಗಿದೆ ಎಂದು ವಿವರಿಸಿದ್ದಾರೆ.
-
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications