ಮೋದಿ ಯಾರ ಮಗ? ಎಂದ ಕಾಂಗ್ರೆಸ್ ಮುಖಂಡನಿಗೆ ಬಿತ್ತು ಮಾತಿನ ತಿರುಗೇಟು!

Recommended Video

      ನರೇಂದ್ರ ಮೋದಿಯನ್ನ ಟ್ವಿಟ್ಟರ್ ನಲ್ಲಿ ಟ್ರೊಲ್ ಮಾಡಿದ ಯುವ ಕಾಂಗ್ರೆಸ್ ಮುಖಂಡ | Oneindia Kannada

      ಲುನವಾಡ(ಗುಜರಾತ್), ಡಿಸೆಂಬರ್ 09: ಮಣಿಶಂಕರ್ ಅಯ್ಯರ್ ರಿಂದ 'ನೀಚ' ಎಂಬ ಪದಪ್ರಯೋಗವಾಗಿ ನಾಲ್ಕು ದಿನ ಕಳೆದಿಲ್ಲ, ಆದರೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ಅವಾಚ್ಯ ಭಾಷೆಯಿಂದ ಮಾತನಾಡಿ ಸುದ್ದಿಯಾಗಿದ್ದಾರೆ. ಸಲ್ಮಾನ್ ನಿಜಾಮಿ ಎಂಬ ಕಾಂಗ್ರೆಸ್ಸಿಗ, ನಿಮ್ಮ ತಂದೆ ಯಾರು ಎಂದು ಪ್ರಶ್ನಿಸಿ ಮೋದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

      ಪ್ರಧಾನಿ ನರೇಂದ್ರ ಮೋದಿ ಅವರ ತಂದೆ-ತಾತ, ಮತ್ತವರ ಹಿನ್ನೆಲೆ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಅವರಿಗೆ ಗುಜರಾತಿನ ಲುನವಾಡದಲ್ಲಿ, ಮೋದಿ ತಿರುಗೇಟು ಸಹ ನೀಡಿದ್ದಾರೆ.

      'India is my everything': PM Modi responds to Youth Congress leader's Twitter

      "ನನ್ನನ್ನು ಪದೇ ಪದೇ ಹಿಯಾಳಿಸುವ, ನನ್ನ ಬಡ ಕುಟುಂಬವನ್ನು ಅಣಕಿಸುವ, ನನ್ನ ಪಾಲಕರು ಯಾರೆಂದು ಕೇಳುವ ಎಲ್ಲ ಕಾಂಗ್ರೆಸ್ ನಾಯಕರಿಗೂ ನಾನೊಂದು ಮಾತನ್ನು ಹೇಳುತ್ತೇನೆ, ನನಗೆ ಈ ದೇಶವೇ ಎಲ್ಲ, ಅದೇ ನನ್ನ ಕುಟುಂಬ. ನನ್ನ ಬದುಕಿನ ಪ್ರತಿ ಘಳಿಗೆಯೂ ಈ ದೇಶಕ್ಕೆ ಮತ್ತು ದೇಶದ 125 ಕೋಟಿ ಜನರಿಗೆ ಸಮರ್ಪಣೆಯಾಗಿದೆ" ಎಂದು ಮೋದಿ ಹೇಳಿದ್ದಾರೆ."ಯುವ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜಾಮಿ ಎಂಬುವವರು ರಾಹುಲ್ ಗಾಂಧಿಯವರ ತಂದೆ, ಅಜ್ಜಿಯ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಅದರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಅದರೊಂದಿಗೆ, ಮೋದಿ, ನಿಮ್ಮ ತಾತ ಯಾರು, ತಂದೆ ಯಾರು ಎಂಬುದನ್ನು ನಮಗೆ ಹೇಳಿ' ಎಂದು ಸಹ ಬರೆದಿದ್ದಾರೆ. ಇಂಥ ಭಾಷೆಯನ್ನು ಯಾರೂ ತಮ್ಮ ಶತ್ರುವಿಗೂ ಬಳಸುವುದಿಲ್ಲ' ಎಂದು ನರೇಂದ್ರ ಮೋದಿಯವರು ವಿಷಾದದಿಂದ ನುಡಿದರು.

      ಸಲ್ಮಾನ್ ನಿಜಾಮಿ, ತಮ್ಮ ಟ್ವಿಟ್ಟರ್ ನಲ್ಲಿ 'ರಾಹುಲ್ ಗಾಂಧಿಯವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜೀವ್ ಗಾಂಧಿಯವರ ಪುತ್ರ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಇಂದಿರಾ ಗಾಂಧಿಯವರ ಮೊಮ್ಮಗ. ಅಷ್ಟೇ ಅಲ್ಲ, ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜವಹರಲಾಲ್ ನೆಹರು ಅವರ ಮೊಮ್ಮಗ... ಆದರೆ ಮೋದಿ ಯಾರು? ಯಾರ ಮಗ? ಯಾರ ಮೊಮ್ಮಗ...?' ಎಂದು ಪ್ರಶ್ನಿಸಿ ಟ್ವಿಟ್ಟಿಗರ ಕೆಂಗಣ್ಣಿಗೂ ಪಾತ್ರರಾಗಿದ್ದರು.

      ಎಂಥ ವಿಪರ್ಯಾಸ?!

      ಪ್ರಧಾನಿ ಮೋದಿಯವರ ತಂದೆ-ತಾತ ಯಾರು ಎಂದು ಪ್ರಶ್ನಿಸಿದ್ದ ಮೂಲಭೂತವಾದಿ ಮುಸ್ಲಿಂ, ಭಯೋತ್ಪಾದಕರ ಬೆಂಬಲಿಗ ಸಲ್ಮಾನ್ ನಿಜಾಮಿ ಗುಜರಾತಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಎಂಥ ವಿಪರ್ಯಾಸ ಎಂಬರ್ಥದಲ್ಲಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

      ಕಾಂಗ್ರೆಸ್ ಗೆ ಇಂಥವರ ಸಹಾಯ ಬೇಕಿತ್ತೆ?

      ಕಾಂಗ್ರೆಸ್ ಮುಖಂಡ ಮತ್ತು ರಾಹುಲ್ ಗಾಂಧಿಯವರ ಆಪ್ತ ಸಲ್ಮಾನ್ ನಿಜಾಮಿ, ಮೋದಿಯವರನ್ನು ನಿಮ್ಮ ತಂದೆ ಯಾರು ಎಂದು ಪ್ರಶ್ನಿಸಿದ್ದಾರೆ. ಒಂದು ಕಾಲದಲ್ಲಿ ಅಫ್ಜಲ್ ಗುರು ಪ್ರತಿಮನೆಯಲ್ಲೂ ಹುಟ್ಟುತ್ತಾನೆ ಎಂದಿದ್ದ ದೇಶದ್ರೋಹಿ ಈತ. ಸೈನಿಕರನ್ನು ಅತ್ಯಾಚಾರಿಗಳು ಎಂದವನು. ಕಾಂಗ್ರೆಸ್ ಗೆಲುವಿಗೆ ಇಂಥವರ ನೆರವು ಬೇಡಬೇಕೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

      ಕಾಂಗ್ರೆಸ್ ಅವನನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ?

      ಸಲ್ಮಾನ್ ನಿಜಾಮಿ ಒಬ್ಬ ಮೂಲಭೂತವಾದಿ. ಆತ ಸಂಸತ್ ಮೇಲೆ ದಾಳಿ ಮಾಡಿದ ಭಯೋತ್ಪಾದಕ ಅಫ್ಜಲ್ ಗುರುವಿನ ಬೆಂಬಲಿಗ. ಆತನ ಟ್ವೀಟ್ ಗಳು ನಕಲಿ ಖಾತೆಯಿಂದ ಬಂದವಲ್ಲ, ಆತನ ಅಧಿಕೃತ ಖಾತೆಯಿಂದಲೇ ಬರುವಂಥವು. ಇಂಥವನನ್ನು ಕಾಂಗ್ರೆಸ್ ಅದ್ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಆದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿದ್ದಾರೆ.

      ಕಾಂಗ್ರೆಸ್ ಸಮಜಾಯಿಷಿ

      "ಯಾರು ಈ ಸಲ್ಮಾನ್ ನಿಜಾಮಿ? ನನಗಂತೂ ಈ ಹೆಸರಿನವರ್ಯಾರೂ ಗೊತ್ತಿಲ್ಲ. ಆತ ನಮ್ಮ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ನಾವೂ ಸುಮ್ಮ ಸುಮ್ಮನೆ ಬಿಜೆಪಿಯ ರಾಮ್ ಲಾಲ್ ಎಂಬುವವರು ಹೀಗೆಂದರು, ಹಾಗೆಂದರು ಎಂದು ಸುದ್ದಿ ಮಾಡಿದರೆ ನಂಬುತ್ತೀರಾ?" ಎಂದು ಕಾಂಗ್ರೆಸ್ ಮುಖಂಡ ರಾಜೀಶ್ ಶುಕ್ಲಾ ಸಮಜಾಯಿಷಿ ನೀಡಿದ್ದಾರೆ..

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+