ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಿ ಕೊರೊನಾ ತಳಿ ಪ್ರತ್ಯೇಕಿಸಿ ಸಂಸ್ಕರಿಸಿದ ಮೊದಲ ರಾಷ್ಟ್ರ ಭಾರತ

|
Google Oneindia Kannada News

ನವದೆಹಲಿ, ಜನವರಿ 03:ಬ್ರಿಟನ್ ರೂಪಾಂತರಿ ಕೊರೊನಾ ವೈರಸ್‌ ತಳಿಯನ್ನು ಪ್ರತ್ಯೇಕಿಸಿ, ಸಂಸ್ಕರಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಐಸಿಎಂಆರ್ ನೀಡಿರುವ ಮಾಹಿತಿಯ ಪ್ರಕಾರ ಈ ವರೆಗೂ ಬೇರೆ ಯಾವುದೇ ದೇಶವೂ ಇದನ್ನು ಯಶಸ್ವಿಯಾಗಿ ನಿರ್ವಹಿಸಿಲ್ಲ. ಭಾರತದಲ್ಲಿ ಬ್ರಿಟನ್ ರೂಪಾಂತರಿ ವೈರಸ್ ಸೋಂಕು ತಗುಲಿರುವ 29 ಪ್ರಕರಣಗಳು ಈ ವರೆಗೂ ವರದಿಯಾಗಿವೆ.

Coronavirus

ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ನ ಅಧ್ಯಯನ, ನಿಯಂತ್ರಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ, ಬ್ರಿಟನ್ ನಿಂದ ವಾಪಸ್ಸಾದವರಲ್ಲಿ ಪಡೆಯಲಾಗಿದ್ದ ಕ್ಲಿನಿಕಲ್ ಸ್ಪೆಸಿಮನ್ ಗಳ ಮೂಲಕ ಹೊಸ ಮಾದರಿಯ ಕೊರೊನಾ ಜೀವಕೋಶಗಳನ್ನು ಪ್ರತ್ಯೇಕಿಸಿ ಸಂಸ್ಕರಣೆ (ಕಲ್ಚರ್)ಯನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ ಎಂದು ಐಸಿಎಂಆರ್ ಟ್ವೀಟ್ ನಲ್ಲಿ ಮಾಹಿತಿ ನೀಡಿದೆ.

"ಏಕಕಾಲಕ್ಕೆ 4 ಕೊರೊನಾ ಲಸಿಕೆ ಸಿದ್ಧವಾಗುತ್ತಿರುವ ಏಕೈಕ ದೇಶ ಭಾರತ"

ಭಾರತದಲ್ಲಿ ಕೋವಿಡ್-19 ಹರಡುವುದಕ್ಕೆ ಪ್ರಾರಂಭವಾದಾಗಿನಿಂದಲೂ ಕೋವಿಡ್ ಹರಡುವ Sars-CoV-2 ವೈರಾಣುವನ್ನು ದೇಶಾದ್ಯಂತ ಇರುವ ಐಸಿಎಂಆರ್ ಪ್ರಯೋಗಾಲಯಗಳಲ್ಲಿ ಟ್ರ್ಯಾಕ್ ಮಾಡಲಾಗುತ್ತಿತ್ತು. ಈಗ ಐಸಿಎಂಆರ್-ಎನ್ಐವಿ ವಿಜ್ಞಾನಿಗಳು ಬ್ರಿಟನ್ ಮಾದರಿಯ ವೈರಾಣುವನ್ನು ಸಂಸ್ಕರಣೆ (ಕಲ್ಚರ್)ಗೆ ಒಳಪಡಿಸುವುದಕ್ಕೆ ವೆರೋ ಸೆಲ್ ಲೈನ್ ಗಳನ್ನು ಬಳಕೆ ಮಾಡಿದ್ದಾರೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಶನಿವಾರದಿಂದ ಭಾರತದ ಎಲ್ಲಾ ರಾಜ್ಯಗಳಲ್ಲಿ ಕೊರೊನಾ ಲಸಿಕೆ ಪೂರ್ವಾಭ್ಯಾಸ ಆರಂಭವಾಗಿದೆ. ಕೊರೊನಾ ಸೋಂಕಿನ ವಿರುದ್ಧ ನಾಲ್ಕು ಲಸಿಕೆಗಳನ್ನು ಏಕಕಾಲಕ್ಕೆ ಅಭಿವೃದ್ಧಿಪಡಿಸುತ್ತಿರುವ ಏಕೈಕ ದೇಶ ಭಾರತ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಈಗಾಗಲೇ ಫೈಜರ್ ಹಾಗೂ ಆಸ್ಟ್ರಾಜೆನೆಕಾ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಅಮೆರಿಕದಲ್ಲಿ ಫೈಜರ್ ಲಸಿಕೆಗೆ ಅನುಮತಿ ನೀಡಲಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಈಗಾಗಲೇ ಮೂರು ಅರ್ಜಿಗಳು ಬಂದಿವೆ. ಹೀಗಾಗಿ ತುರ್ತು ಬಳಕೆಗೆ ಒಂದಕ್ಕಿಂತ ಹೆಚ್ಚಿನ ಲಸಿಕೆಗಳು ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

English summary
India became the first country in the world to successfully isolate and culture the new, mutated strain of the novel coronavirus, the Indian Council of Medical Research (ICMR) said in a tweet on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X