ಮುಂದಿನ ವಾರದೊಳಗೆ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ

ನವದೆಹಲಿ, ಡಿಸೆಂಬರ್ 23: ಮುಂದಿನ ವಾರದ ಒಳಗೆ ಭಾರತದಲ್ಲಿ ಆಕ್ಸ್ ಫರ್ಡ್/ಆಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆಯುವುದಾಗಿ ತಿಳಿದುಬಂದಿದೆ. ಲಸಿಕೆ ತಯಾರಕ ಕಂಪನಿ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆ ಕುರಿತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಹೆಚ್ಚಿನ ಅಂಕಿ ಅಂಶಗಳನ್ನು ಒದಗಿಸಿದ್ದು, ಕೆಲವೇ ದಿನಗಳಲ್ಲಿ ತುರ್ತು ಬಳಕೆಗೆ ಅನುಮತಿ ದೊರೆಯುವುದಾಗಿ ತಿಳಿದುಬಂದಿದೆ.

ಆಸ್ಟ್ರಾಜೆನೆಕಾ ಲಸಿಕೆ ಕುರಿತು ಪ್ರಯೋಗಗಳು ಮುಂದುವರೆಯುತ್ತಿದ್ದು, ನಿರೀಕ್ಷಿತ ಫಲ ದೊರೆತ ಹಿನ್ನೆಲೆಯಲ್ಲಿ ಭಾರತದಲ್ಲಿ ತುರ್ತು ಬಳಕೆಗೆ ಸೆರಂ ಇನ್ ಸ್ಟಿಟ್ಯೂಟ್ ಅರ್ಜಿ ಸಲ್ಲಿಸಿತ್ತು. ಇದೀಗ ಅನುಮತಿ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಮುಂದೆ ಓದಿ...

 ಫೈಜರ್, ಬಯೋಟೆಕ್ ಗೂ ಅನುಮತಿ?

ಫೈಜರ್, ಬಯೋಟೆಕ್ ಗೂ ಅನುಮತಿ?

ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ದೇಶವಾಗಿರುವ ಭಾರತ ಮುಂದಿನ ತಿಂಗಳಿನಲ್ಲೇ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲು ನಿರ್ಧರಿಸಿದೆ. ಹೀಗಾಗಿ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾದೊಂದಿಗೆ ಫೈಜರ್ ಹಾಗೂ ಭಾರತ್ ಬಯೋಟೆಕ್ ನ ಲಸಿಕೆಗಳ ತುರ್ತು ಬಳಕೆಗೂ ಅನುಮತಿ ನೀಡುವ ಕುರಿತು ಆಲೋಚಿಸುತ್ತಿರುವುದಾಗಿ ತಿಳಿದುಬಂದಿದೆ.

 ಕಡಿಮೆ, ಮಧ್ಯಮ ಆದಾಯದ ದೇಶಗಳಿಂದ ಬೇಡಿಕೆ

ಕಡಿಮೆ, ಮಧ್ಯಮ ಆದಾಯದ ದೇಶಗಳಿಂದ ಬೇಡಿಕೆ

ವಿಶ್ವದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡನೇ ದೇಶ ಹಾಗೂ ಹೆಚ್ಚು ಸೋಂಕಿತರನ್ನು ಹೊಂದಿರುವ ಭಾರತದಲ್ಲಿ ಲಸಿಕೆ ನೀಡುವುದು ಮಹತ್ವದ ಹೆಜ್ಜೆಯಾಗಲಿದೆ. ಕಡಿಮೆ ಅಥವಾ ಮಧ್ಯಮ ಆದಾಯದ ದೇಶಗಳನ್ನು ಉದ್ದೇಶವಾಗಿಟ್ಟುಕೊಂಡು ರೂಪಿಸಿರುವುದರಿಂದ ಆಸ್ಟ್ರಾಜೆನಿಕಾ ಆಕ್ಸ್ ಫರ್ಡ್ ಲಸಿಕೆಗೆ ಬೇಡಿಕೆಯೂ ಹೆಚ್ಚಿದೆ. ಲಸಿಕೆಯ ಸಾಗಣೆ ಸುಲಭವಾಗಿದ್ದು, ಸಾಮಾನ್ಯ ಉಷ್ಣತೆಯಲ್ಲಿ ಶೇಖರಿಸಿಡಬಹುದಾಗಿರುವುದು ಲಸಿಕೆಯ ಧನಾತ್ಮಕ ಅಂಶಗಳಾಗಿವೆ.

 ಹೆಚ್ಚುವರಿ ಅಂಕಿಅಂಶ ಕೇಳಿದ್ದ ಸಂಸ್ಥೆ

ಹೆಚ್ಚುವರಿ ಅಂಕಿಅಂಶ ಕೇಳಿದ್ದ ಸಂಸ್ಥೆ

ಭಾರತೀಯ ಕೇಂದ್ರ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ (India's Central Drugs Standard Control Organization) ಡಿಸೆಂಬರ್ 9ರಂದು ಮೂರು ಅರ್ಜಿಗಳನ್ನು ಪರಿಶೀಲಿಸಿದ್ದು, ಎಲ್ಲಾ ಕಂಪನಿಗಳಿಂದಲೂ ಹೆಚ್ಚುವರಿ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಒದಗಿಸುವಂತೆ ಕೇಳಿತ್ತು. ಸೆರಂ ಇನ್ ಸ್ಟಿಟ್ಯೂಟ್, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಒದಗಿಸಿರುವುದಾಗಿ ತಿಳಿದುಬಂದಿದೆ. ಫೈಜರ್ ಹಾಗೂ ಭಾರತ್ ಬಯೋಟೆಕ್ ನಿಂದ ಇನ್ನಷ್ಟು ಮಾಹಿತಿ ನಿರೀಕ್ಷಿಸಿದ್ದು, ಶೀಘ್ರವೇ ಆ ಕಂಪನಿಗಳೂ ಮಾಹಿತಿ ಒದಗಿಸಲಿರುವುದಾಗಿ ತಿಳಿದುಬಂದಿದೆ.

 50ರಿಂದ 60 ಮಿಲಿಯನ್ ಡೋಸ್ ತಯಾರಿಗೆ ಸೆರಂ ಸಿದ್ಧ

50ರಿಂದ 60 ಮಿಲಿಯನ್ ಡೋಸ್ ತಯಾರಿಗೆ ಸೆರಂ ಸಿದ್ಧ

ಆಸ್ಟ್ರಾಜೆನೆಕಾ ಲಸಿಕಾ ತಯಾರಕರೊಂದಿಗೆ ಭಾರತದ ಆರೋಗ್ಯಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ವಾರದ ಒಳಗೆ, ಡಿ.28 ಅಥವಾ 29ರಷ್ಟರಲ್ಲಿ ಅನುಮತಿ ದೊರೆಯುವ ಬಲವಾದ ಸೂಚನೆ ಸಿಕ್ಕಿದೆ. ಬ್ರಿಟನ್ ಹಾಗೂ ಬ್ರೆಜಿಲ್ ನಲ್ಲಿ ಡಿಸೆಂಬರ್ ಮೊದಲಿನಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಪ್ರಯೋಗಗಳು ನಡೆದಿದ್ದು, ಪ್ರಯೋಗ ಶೇ. 62ರಷ್ಟು ಫಲ ನೀಡಿದ್ದರಿಂದ ಅನುಮತಿ ದೊರೆಯುವ ಲಕ್ಷಣ ಕಂಡುಬಂದಿದೆ.
ಸೆರಂ ಇನ್ ಸ್ಟಿಟ್ಯೂಟ್, ಸದ್ಯಕ್ಕೆ 50ರಿಂದ 60 ಮಿಲಿಯನ್ ಡೋಸ್ ಗಳನ್ನು ಪೂರೈಸಲು ಸಿದ್ಧವಿದ್ದು, ಜುಲೈನಲ್ಲಿ ಸುಮಾರು 400 ಮಿಲಿಯನ್ ಡೋಸ್ ಗಳನ್ನು ತಯಾರಿಸುವ ಸಿದ್ಧತೆಯಲ್ಲಿರುವುದಾಗಿ ತಿಳಿದುಬಂದಿದೆ.

CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಪಡೆಯುವುದು ಸಲೀಸು ಮಾಡಿಕೊಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+