Get Updates
Get notified of breaking news, exclusive insights, and must-see stories!

India EU Trade Deal Explained: ಐರೋಪ್ಯ ಒಕ್ಕೂಟದೊಂದಿಗೆ ಭಾರತದ ಒಪ್ಪಂದ: ಭಾರತಕ್ಕೆ ಹೇಗೆ, ಯಾವ ಕ್ಷೇತ್ರಗಳಿಗೆ ಬಂಪರ್

India EU Trade Deal Explained: ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದವಾಗಿದ್ದು, ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವ ವಿವರ ಈ ಲೇಖನದಲ್ಲಿದೆ. ಭಾರತವು ಕಳೆದ ಎರಡು ವರ್ಷಗಳಿಂದಲೂ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ಹಾಗೂ ಒಪ್ಪಂದದಲ್ಲಿ ಕೆಲವೊಂದು ಸವಾಲುಗಳನ್ನು ಎದುರಿಸುತ್ತಿದೆ. ಮುಖ್ಯವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ದುಬಾರಿ ಸುಂಕವನ್ನು ವಿಧಿಸುತ್ತಿರುವುದು ಸಂಕಷ್ಟವನ್ನು ತಂದೊಡ್ಡಿದೆ. ಇದು ಕೇವಲ ಭಾರತದ ಮೇಲೆ ಮಾತ್ರವಲ್ಲ ವಿಶ್ವದ ವಿವಿಧ ರಾಷ್ಟ್ರಗಳಿಗೂ ನುಂಗಲಾರದ ಬಿಸಿ ತುಪ್ಪವಾಗಿತ್ತು. ಇದೀಗ ಭಾರತ ಮತ್ತು ಐರೋಪ್ಯ ಒಕ್ಕೂಟವು ಇದಕ್ಕೊಂದು ಪರ್ಯಾಯ ಮಾರ್ಗ ಕಂಡುಕೊಂಡಿವೆ. ಇದು ಭಾರತಕ್ಕೆ ಭರ್ಜರಿ ಲಾಭವನ್ನೇ ತರಲಿದೆ.

ಭಾರತ ಮತ್ತು ಐರೋಪ್ಯ ಒಕ್ಕೂಟವು ಜನವರಿ 27ರಂದು ವಿಶೇಷ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ನಿರ್ಧರಿಸಿವೆ. ಹೆಚ್ಚುತ್ತಿರುವ ಬಿಕ್ಕಟ್ಟು ಎದುರಿಸುತ್ತಿರುವ ಜಾಗತಿಕ ವ್ಯಾಪಾರ ವಾತಾವರಣದಲ್ಲಿ ಈ ಒಪ್ಪಂದವು ಅತ್ಯಂತ ಮಹತ್ವದ್ದಾಗಿದೆ. ಭಾರತವು ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿಪರೀತವಾಗಿ ಸುಂಕ ವಿಧಿಸಿದ್ದಾರೆ. ಡೊನಾಲ್ಡ್‌ ಟ್ರಂಪ್ ಅವರ ಏಕಮುಖ ನಿರ್ಧಾರಕ್ಕೆ ಕೆಲವೊಂದು ರಾಷ್ಟ್ರಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿವೆ. ಇದೀಗ ಭಾರತ ಹಾಗೂ ಐರೋಪ್ಯ ಒಕ್ಕೂಟವು ಸೇರಿ ಹೊಸ ಭಾಷ್ಯ ಬರೆದಿದೆ.

India EU Trade Deal Explained

ಎರಡೂ ಕಡೆಯವರು ಆರ್ಥಿಕ ಪಾಲುದಾರಿಕೆಗಳನ್ನು ಹೇಗೆ ಸಮೀಪಿಸುತ್ತಾರೆ ಎಂಬುದರಲ್ಲಿ ನಿರ್ಣಾಯಕ ಬದಲಾವಣೆಯನ್ನು ಸೂಚಿಸುತ್ತದೆ. ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವಿನ ಹೊಸ ಒಪ್ಪಂದವು ಅಮೆರಿಕಗೆ ಶಾಕ್ ನೀಡಿದೆ. ದೀರ್ಘಕಾಲದ ಚರ್ಚೆಗಳ ನಂತರ ಈ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದವು ವಿಶ್ವದ ಎರಡು ದೊಡ್ಡ ಆರ್ಥಿಕತೆಯನ್ನು ಒಂದೇ ವೇದಿಕೆಗೆ ತಂದಂತೆ ಆಗಿದೆ.

ಪ್ರಮುಖ ದೇಶಗಳ ವ್ಯಾಪಾರದ ಮೇಲೆ ಈ ಒಪ್ಪಂದವು ಪ್ರಭಾವ ಬೀರಲಿದ್ದು, ಭಾರತಕ್ಕೆ ಲಾಭವಾಗಲಿದೆ. ಒಟ್ಟಾರೆಯಾಗಿ ಭಾರತ ಮತ್ತು ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳ ಒಪ್ಪಂದವು ಜಾಗತಿಕವಾಗಿ ಸಂಚಲನಕ್ಕೆ ಕಾರಣವಾಗಿದೆ. ಐರೋಪ್ಯ ಒಕ್ಕೂಟವು ಜಾಗತಿಕ ಆರ್ಥಿಕ ಉತ್ಪಾದನೆಯ ಸುಮಾರು ಕಾಲು ಭಾಗದಷ್ಟು ಮತ್ತು ಸರಿಸುಮಾರು ಎರಡು ಶತಕೋಟಿ ಜನರ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತದೆ ಎನ್ನುವುದು ವಿಶೇಷವಾಗಿದೆ.

ಸರಕುಗಳ ಸಾಗಾಟದ ವಿಷಯದಲ್ಲಿ ದ್ವಿಪಕ್ಷೀಯ ವ್ಯಾಪಾರವು ಈಗಾಗಲೇ ಅಮೆರಿಕನ್ ಡಾಲರ್‌ 136 ಬಿಲಿಯನ್ ದಾಟಿದೆ. ಇದೀಗ ಹೊಸ ಒಪ್ಪಂದವು ವೆಚ್ಚಗಳ ಕಡಿಮೆಗೆ ಕಾರಣವಾಗಲಿದೆ. ಜಾಗತಿಕ ಉತ್ಪಾದನೆ ಮತ್ತು ರಫ್ತು ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಹಾಗೂ ಐರೋಪ್ಯ ಒಕ್ಕೂಟ ಒಪ್ಪಂದ ಭಾರತಕ್ಕೆ ಹೇಗೆ ಲಾಭ

ಭಾರತ ಮತ್ತು ಐರೋಪ್ಯ ಒಕ್ಕೂಟದ ಒಪ್ಪಂದವು ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್ ಎಂದು ವ್ಯಾಖ್ಯಾನಿಸಲಾಗಿದೆ. ಈ ಒಪ್ಪಂದದಿಂದ ಭಾರತಕ್ಕೆ ಆರ್ಥಿಕ, ಕೈಗಾರಿಕಾ ಮತ್ತು ತಂತ್ರಜ್ಞಾನ ಮಟ್ಟದಲ್ಲಿ ಮಹತ್ವದ ಲಾಭಗಳಾಗಲಿವೆ. ಈ ಒಪ್ಪಂದದಿಂದ ಭಾರತದಲ್ಲಿ ತಯಾರಾದ ಪ್ರಮುಖ ವಸ್ತುಗಳು, ಔಷಧ, ವಸ್ತ್ರ, ಐಟಿ ಸೇವೆಗಳು, ಆಟೋ ಭಾಗಗಳು ಮತ್ತು ಕೃಷಿ ಉತ್ಪನ್ನಗಳನ್ನು ಯುರೋಪ್ ಮಾರುಕಟ್ಟೆಯಲ್ಲಿ ಕಡಿಮೆ ತೆರಿಗೆಯಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಸಿಗಲಿದೆ.

ಭಾರತವು ಐರೋಪ್ಯ ಒಕ್ಕೂಟಗಳಿಗೆ ಆಮದು ಮಾಡುವುದು ಹೆಚ್ಚಳವಾಗುವುದರಿಂದಾಗಿ ಸಹಜವಾಗಿಯೇ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಐರೋಪ್ಯದಿಂದ ನೇರ ವಿದೇಶಿ ಹೂಡಿಕೆ (FDI) ಹೆಚ್ಚಾಗಿ ಉತ್ಪಾದನಾ ಕ್ಷೇತ್ರ ಬಲಗೊಳ್ಳುವ ಸಾಧ್ಯತೆ ಇದೆ. ಗ್ರೀನ್ ಎನರ್ಜಿ, ಹವಾಮಾನ ತಂತ್ರಜ್ಞಾನ, ಡಿಜಿಟಲ್ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿ ಆಗಲಿದೆ. ಒಟ್ಟಾರೆಯಾಗಿ ಈ ಒಪ್ಪಂದವು ಭಾರತವನ್ನು ಜಾಗತಿಕ ಪೂರೈಕೆಯ ಸರಪಳಿಯಲ್ಲಿ ಪ್ರಮುಖ ಸ್ಥಾನಕ್ಕೇರಿಸಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಹುಚ್ಚಾಟಕ್ಕೆ ಬ್ರೇಕ್ ಬೀಳಲಿದೆ.

ಭಾರತಕ್ಕೆ ಈ ಒಪ್ಪಂದ ಯಾಕೆ ಅತ್ಯವಶ್ಯವಾಗಿತ್ತು ?

ಐರೋಪ್ಯ ಒಕ್ಕೂಟಗಳೊಂದಿಗಿನ ಈ ಒಪ್ಪಂದವು ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತದ ಮೇಲೆ ವಿಪರೀತ ಸುಂಕವನ್ನು ವಿಧಿಸುತ್ತಿದ್ದಾರೆ. ಭಾರತವು - ಚೀನಾದೊಂದಿಗೆ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಬಾಂಗ್ಲಾದೇಶ - ಪಾಕಿಸ್ತಾನದ ಚಕರಾರು ಮುಂದುವರಿದಿದೆ. ಈ ರೀತಿಯ ಸಂದರ್ಭದಲ್ಲಿ ಭಾರತಕ್ಕೂ ಮತ್ತೊಂದು ವ್ಯಾಪಾರ ಆಯ್ಕೆ ಅತ್ಯಂತ ಅವಶ್ಯವಾಗಿತ್ತು. ಈ ಎಲ್ಲಾ ಕಾರಣಗಳಿಗೆ ಈ ಒಪ್ಪಂದವು ಮಹತ್ವ ಪಡೆದುಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+