India And European Union: ಭಾರತ ಮತ್ತು ಯುರೋಪ್ ಒಕ್ಕೂಟದ ವ್ಯಾಪಾರ ಒಪ್ಪಂದಕ್ಕೆ ಡೊನಾಲ್ಡ್ ಟ್ರಂಪ್ ಗರಂ?
ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದ ಮಾತುಕತೆ ದೊಡ್ಡ ಗೆಲುವು ಕಂಡಿದೆ. ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಬೆಂಬಲ ನೀಡಲು ಇದೀಗ ಯುರೋಪ್ ಒಕ್ಕೂಟ ಕೂಡ ಮುಂದಾಗಿದೆ. ಅಮೆರಿಕ ಮತ್ತು ಯುರೋಪ್ ನಡುವಿನ ಸಂಬಂಧ ಕೆಲ ತಿಂಗಳಿಂದ ಮಸುಕಾಗುತ್ತಿರುವ ಸಮಯದಲ್ಲೇ, ಭಾರಿ ದೊಡ್ಡ ಒಪ್ಪಂದಕ್ಕೆ ಭಾರತದ ಜೊತೆ ಇಂದು ಯುರೋಪ್ ಒಕ್ಕೂಟದ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಅಮೆರಿಕ, ಈ ಒಪ್ಪಂದ ನೋಡಿ ಗರಂ ಆಗಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಒಪ್ಪಂದ ಒಪ್ಪಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಯುರೋಪ್ ಒಕ್ಕೂಟದ ದೇಶಗಳು ರಫ್ತು ಮಾಡುವ ವಸ್ತುಗಳ ಮೇಲೆ ಅಮೆರಿಕ ಹೆಚ್ಚಿನ ತೆರಿಗೆ ಹೇರಿಕೆ ಮಾಡುತ್ತಾ ಇರುವ ಕಾರಣಕ್ಕೆ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಅದರಲ್ಲೂ ಈ ಪೈಕಿ ಯುರೋಪ್‌ನ ಬಲಶಾಲಿ ದೇಶಗಳಿಗೆ ಕೂಡ ಸಮಸ್ಯೆ ಎದುರಾಗಿ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುವ ವಾತಾವರಣ ನಿರ್ಮಾಣ ಆಗಿದೆ. ದಿನದಿಂದ ದಿನಕ್ಕೆ ಯುರೋಪ್ ಮತ್ತು ಅಮೆರಿಕ ತೆರಿಗೆ ತಿಕ್ಕಾಟ ಜೋರಾಗುತ್ತಿದೆ. ಅದು ಭವಿಷ್ಯದಲ್ಲಿ ಬೇರೆಯದ್ದೇ ತಿರುವು ಪಡೆಯಬಹುದು ಎಂಬ ಆತಂಕ ಕೂಡ ಯುರೋಪ್ ಒಕ್ಕೂಟದ ನಾಯಕರಿಗೆ ಕಾಡುತ್ತಿದೆ. ಇಷ್ಟೆಲ್ಲದರ ನಡುವೆಯೇ ಭಾರತದ ಜೊತೆಗೆ ವ್ಯಾಪಾರ ಸಂಬಂಧ ಭದ್ರ ಮಾಡಿಕೊಂಡಿದ್ದಾರೆ ಯುರೋಪಿಯನ್ ಯುನಿಯನ್ ಲೀಡರ್ಸ್.

ಭಾರತ ಮತ್ತು ಯುರೋಪ್ ಒಪ್ಪಂದಕ್ಕೆ ಟ್ರಂಪ್ ಗರಂ?
ಹೌದು, ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ಐತಿಹಾಸಿಕ ವ್ಯಾಪಾರ ಒಪ್ಪಂದ ಬಿಲ್‌ಕುಲ್ ಇಷ್ಟ ಇಲ್ಲ ಎನ್ನಲಾಗಿದೆ. ಅಲ್ಲದೇ ಅಮೆರಿಕ ಈ ಒಪ್ಪಂದಕ್ಕೆ ಬೇಸರ ವ್ಯಕ್ತಪಡಿಸಿದೆ, ತಮ್ಮ ಜೊತೆಯಲ್ಲಿ ಇಷ್ಟುದಿನ ವ್ಯಾಪಾರ ಮಾಡುತ್ತಿದ್ದ ಯುರೋಪ್ ದಿಢೀರ್ ಭಾರತದ ಜೊತೆಗೆ ಕೈಜೋಡಿಸಿರುವುದು ಸಹಜವಾಗಿ ಟ್ರಂಪ್ ಅವರಿಗೆ ತಾಳ್ಮೆ ಕೆಡಿಸಿದೆ. ಆದರೆ ಪದೇ ಪದೇ ತಮ್ಮ ತೆರಿಗೆ ತಿಕ್ಕಾಟದ ಮೂಲಕ ಯುರೋಪ್ ದೇಶಗಳ ನಿದ್ದೆಗೆಡಿಸಿದ್ದ ಟ್ರಂಪ್ ಅವರಿಗೆ ಈಗ ನಷ್ಟದ ಚಿಂತೆ ಎದುರಾದಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ ತಜ್ಞರು. ಹೀಗಿದ್ದಾಗ ಭಾರತದ ವಿರುದ್ಧ ಕೂಡ ಡೊನಾಲ್ಡ್ ಟ್ರಂಪ್ ಅವರು ಗರಂ ಆಗುವ ಸಾಧ್ಯತೆ ದಟ್ಟವಾಗಿದೆ.
20 ವರ್ಷಗಳಿಂದ ನಡೆಯುತ್ತಿದ್ದ ಮಾತುಕತೆ
ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದ ಚರ್ಚೆಯು ಇಂದು ಅಥವಾ ನಿನ್ನೆಯಿಂದ ಶುರುವಾಗಿಲ್ಲ. ಈ ಚರ್ಚೆ ಶುರುವಾಗಿ ಬರೋಬ್ಬರಿ 20 ವರ್ಷ ಕಳೆದಿದೆ, ಆದರೆ ಇದೀಗ ಜಾಗತಿಕ ಮಟ್ಟದಲ್ಲಿ ಯುರೋಪ್ ಒಕ್ಕೂಟ ಭಾರಿ ದೊಡ್ಡ ಸವಾಲು ಎದುರಿಸುತ್ತಿದೆ. ಇದೇ ಕಾರಣಕ್ಕೆ ಈಗ ಓಡಿ ಬಂದು ಭಾರತದ ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಭಾರತ ಮತ್ತು ಯುರೋಪ್ ಒಕ್ಕೂಟದ ಶೃಂಗಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಅಮೆರಿಕ ಮಾತ್ರ ಈ ಒಪ್ಪಂದ ಒಪ್ಪಿಕೊಳ್ಳದೆ ಹೊಸ ಕಿರಿಕ್ ಶುರು ಮಾಡಿದೆ.
ಈ ಒಪ್ಪಂದ ಇಂದು ಸಂಪೂರ್ಣವಾಗಿದ್ದರೂ ಅದು ಜಾರಿಗೆ ಬರಲು ಇನ್ನೂ ಕೆಲವು ತಿಂಗಳು ಅಗತ್ಯವಿದೆ. ಭಾರತದಲ್ಲಿ ಕೇಂದ್ರ ಸಚಿವ ಸಂಪುಟ ಇದನ್ನು ಅಂಗೀಕರಿಸಬೇಕಿದೆ ಹಾಗೂ ಯುರೋಪ್ ಒಕ್ಕೂಟದ ಪಾರ್ಲಿಮೆಂಟ್ ಕೂಡ ಇದನ್ನು ಅಂಗೀಕರಿಸಬೇಕು. ಹೀಗಿದ್ದಾಗಲೇ ಅಮೆರಿಕ ಮಾತ್ರ ಭಾರತ ಹಾಗೂ ಯುರೋಪ್ ಒಕ್ಕೂಟದ ಒಪ್ಪಂದ ಕಂಡು ಬೇಸರ ಹೊರ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ಈಗಾಗಲೇ ಅಮೆರಿಕ ಬೇರೆ ಬೇರೆ ದೇಶಗಳ ವ್ಯಾಪಾರ ಒಪ್ಪಂದಕ್ಕೂ ಅಪಸ್ವರ ಎತ್ತಿರುವ ಹಲವು ಉದಾಹರಣೆ ಇದೆ. ಈ ರೀತಿ ಈಗ ಭಾರತದ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಆಡಳಿತ ಕಿರಿಕ್ ತೆಗೆದು ಚರ್ಚೆಗೆ ವೇದಿಕೆ ಒದಗಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications