ದೇಶಾದ್ಯಂತ 24 ವಿಮಾನ ನಿಲ್ದಾಣಗಳು ಬಂದ್; ಇಲ್ಲಿದೆ ಪಟ್ಟಿ
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ವಾಯು ದಾಳಿ ಮಾಡಿದ್ದು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದುಹಾಕಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ಡ್ರೋನ್, ಕ್ಷಿಪಣಿ ಮೂಲಕ ದಾಳಿ ಮಾಡುವ ಪ್ರಯತ್ನ ಮಾಡಿದ್ದು ಭಾರತದ ರಕ್ಷಣಾ ಪಡೆಗಳು ಅದನ್ನು ವಿಫಲಗೊಳಿಸಿವೆ.
ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿ ಪ್ರಯತ್ನದ ಬೆನ್ನಲ್ಲೇ ಭಾರತದಲ್ಲಿನ 24 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಗುರುವಾರದಿಂದಲೇ ಈ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದ್ದು ಮುಂದಿನ ಆದೇಶದವರೆಗೆ ಕಾರ್ಯ ನಿರ್ವಹಿಸುವ ಸಾಧ್ಯತೆ ಇಲ್ಲ.

ಯಾವ ವಿಮಾನ ನಿಲ್ದಾಣಗಳು ಬಂದ್
1) ಚಂಡೀಗಢ
2) ಶ್ರೀನಗರ
3) ಅಮೃತಸರ
4) ಲೂಧಿಯಾನ
5) ಭುಂಟರ್
6) ಕಿಶೆನ್‌ಗಢ
7) ಪಟಿಯಾಲ
8) ಶಿಮ್ಲಾ
9) ಕಾಂಗ್ರಾ-ಗಗ್ಗಲ್
10) ಭಟಿಂಡಾ
11) ಜೈಸಲ್ಮೇರ್
12) ಜೋಧ್‌ಪುರ
13) ಬಿಕಾನೇರ್
14) ಹಲ್ವಾರಾ
15) ಪಠಾಣ್‌ಕೋಟ್
16) ಜಮ್ಮು
17) ಲೆಹ್
18) ಮುಂದ್ರಾ
19) ಜಾಮ್‌ನಗರ
20) ಹಿರಾಜ್‌ಕೋಟ್
21) ಪೋರಬಂದರು
22) ಕೆಶೋದ್
23) ಕಾಂಡ್ಲಾ
24) ಭುಜ್
ದೆಹಲಿಯಲ್ಲಿ ಕಟ್ಟೆಚ್ಚರ
ಪಾಕಿಸ್ತಾನದಿಂದ ಡ್ರೋನ್, ಕ್ಷಿಪಣಿ ದಾಳಿ ಯತ್ನದ ಬೆನ್ನಲ್ಲೇ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು, ಚಲನವಲನಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿರುವುದಕ್ಕೆ ದೆಹಲಿ ಸರ್ಕಾರಿ ನೌಕರರಿಗೆ ರಜೆಯನ್ನು ರದ್ದುಗೊಳಿಸಲಾಗಿದೆ.












Click it and Unblock the Notifications