10 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಒಪ್ಪಿದ ಹರ್ಯಾಣದ ನ್ಯಾಯಾಲಯ
ಹರ್ಯಾಣದಲ್ಲಿ ನಡೆದ ಒಂದು ಅಪರೂಪದ ಘಟನೆಯಲ್ಲಿ ತನ್ನ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ, ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯೊಬ್ಬಳಿಗೆ ಗರ್ಭಪಾತ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
ಹರ್ಯಾಣ, ಮೇ 17: ಹರ್ಯಾಣದಲ್ಲಿ ನಡೆದ ಒಂದು ಅಪರೂಪದ ಘಟನೆಯಲ್ಲಿ 10 ವರ್ಷದ ಬಾಲಕಿಯೊಬ್ಬಳಿಗೆ ಗರ್ಭಪಾತ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
ತನ್ನ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿಯ ಕುಟುಂಬ ಆಕೆಗೆ ಗರ್ಭಪಾತ ಮಾಡುವಂತೆ ವೈದ್ಯರನ್ನು ವಿನಂತಿಸಿತ್ತು. ಭಾರತದಲ್ಲಿ ಗರ್ಭಪಾತ ನಿಷೇಧವಾಗಿರುವುದರಿಂದ ಮತ್ತು ತಾಯಿಗೆ ಅಥವಾ ಭ್ರೂಣಕ್ಕೆ ಏನಾದರೂ ಸಮಸ್ಯೆ ಇದೆ ಎಂದಾದರೆ ಗರ್ಭಧರಿಸಿದ 20 ತಿಂಗಳೊಳಗಾಗಿ ಕಾನೂನಿನ ಅನುಮತಿ ಪಡೆದೇ ಗರ್ಭಪಾತ ಮಾಡಿಸಬೇಕೆಂಬ ನಿಯಮವಿರುವುದರಿಂದ ವೈದ್ಯರು ಹುಡುಗಿಗೆ ಗರ್ಭಪಾತ ಮಾಡುವಂತಿರಲಿಲ್ಲ.[ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!]

ಆದ್ದರಿಂದ ಈ ಕುರಿತು ಚರ್ಚೆ ನಡೆಸಿದ ಹತ್ತು ಜನರ ವೈದ್ಯರ ತಂಡ ಸ್ಥಳೀಯ ನ್ಯಾಯಾಲಯದಲ್ಲಿ ಈ ಕುರಿತು ಮನವಿ ಸಲ್ಲಿಸಿತ್ತು. ವಿಚಾರಣೆಯ ನಂತರ ಘಟನೆಯನ್ನು ಕೂಲಂಕಷವಾಗಿ ಅಭ್ಯಸಿಸಿದ ನ್ಯಾಯಾಲಯ ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಗರ್ಭಪಾತಕ್ಕೆ ಅವಕಾಶ ಮಾಡಿಕೊಟ್ಟಿತು.[ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ]
ತನ್ನ ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾದ ಮುಗ್ಧ ಬಾಲಕಿ ಗರ್ಭಪಾತ ಮಾಡಿಸಿಕೊಂಡು ಹೊಸ ಭವಿಷ್ಯ ಕಾಣಲಿದ್ದಾಳೆ.












Click it and Unblock the Notifications