ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಬನ್ನಿ

ತಿರುವನಂತಪುರಂ, ಡಿ.5: ದೇವರನಾಡು ಕೇರಳದಲ್ಲಿ ಈಗ ಸ್ವಾಮಿ ಅಯ್ಯಪ್ಪ ದೇವರ ಸೀಸನ್ ಜೋರಾಗಿ ನಡೆದಿದೆ. ದಕ್ಷಿಣ ಭಾರತದ ನೆಚ್ಚಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಕೊಡಗು ಮೇಲಕ್ಕೆ ಬಂದು ಮುನ್ನಾರ್ ಕೆಳಗಿಳಿದ ಬೆನ್ನಲ್ಲೇ ದೇಗುಲಗಳ ಪ್ರವಾಸೋದ್ಯಮಕ್ಕೆ ಕೇರಳ ಹೆಚ್ಚಿನ ಮಹತ್ವ ನೀಡುತ್ತಿದೆ.

ಈ ಸೀಸನ್ ನಲ್ಲಿ ಹೆಚ್ಚಿನ ಒತ್ತು ಮೂಲ ಸೌಕರ್ಯಗಳಿಗೆ ನೀಡಲಾಗುತ್ತಿದೆ. ಚೆನ್ನೈ, ಮಂಗಳೂರು ಕಡೆಯಿಂದ 90ಕ್ಕೂ ಅಧಿಕ ವಿಶೇಷ ರೈಲುಗಳನ್ನು ಕೇರಳದ ಕಡೆಗೆ ಬಿಡಲಾಗಿದೆ. ಕಾರ್ತಿಕ ಮಾಸದಲ್ಲಿ ಲಕ್ಷಾಂತರ ಭಕ್ತಾದಿಗಳು ದಟ್ಟಾರಣ್ಯದಲ್ಲಿರುವ ದೇಗುಲಕ್ಕೆ ಆಗಮಿಸುತ್ತದೆ.

ಇರುಮುಡಿ ಹೊತ್ತು ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿಕೊಂಡು ಭಕ್ತಾದಿಗಳು ಶಬರಿಮಲೆ ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪವಿತ್ರ ಮಂಡಲಕಾಲ ಸಮಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಾರತದ ವಿವಿಧ ಕಡೆಗಳಿಂದ ಮತ್ತು ವಿದೇಶಗಳಿಂದಲೂ ಭಕ್ತರ ದಂಡು ಶಬರಿಮಲೆಯತ್ತ ಧಾವಿಸಿ ಬರುತ್ತದೆ. ಶಬರಿಮಲೆ ವೆಬ್ ತಾಣದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ.

ನವೆಂಬರ್ 15ರಂದು ಆರಂಭಗೊಂಡ ಮಂಡಲಪೂಜೆ ಮಹೋತ್ಸವ ಡಿ.26ರಂದು ಕೊನೆಗೊಳ್ಳಲಿದೆ. ಮಕರವಿಲಿಕ್ಕು ಸಂಭಮ ಡಿ. 30 ರಂದು ಆರಂಭಗೊಂಡು ಜನವರಿ 20 ರಂದು ಕೊನೆಗೊಳ್ಳಲಿದೆ. ಮಕರ ಜ್ಯೋತಿ ದರ್ಶನ ಜನವರಿ 14ರಂದು ನಡೆಯಲಿದೆ.ಶಬರಿಮಲೆ ದರ್ಶನಾರ್ಥಿಗಳ ಉತ್ಸವ, ಪಾರಂಪರಿಕ ಸೇವೆಗಳು, ಸಂಪ್ರದಾಯಿಕ ಕ್ರಿಯೆಗಳ ಚಿತ್ರಗಳು ನಿರೀಕ್ಷಿಸಿ...

ದಟ್ಟಾರಣ್ಯದಲ್ಲಿದೆ

ದಟ್ಟಾರಣ್ಯದಲ್ಲಿದೆ

ಕೇರಳ ಪದನಮತಿಟ್ಟ ಜಿಲ್ಲೆಯ ಪೂರ್ವದಲ್ಲಿ ನೆಲೆ ನಿಂತಿರುವ ಶಬರಿಮಲೆ, ಕೇರಳದ ಸೌಂದರ್ಯವನ್ನು ಹೆಚ್ಚಿಸಿದ ಸಂರಕ್ಷಿತ ಪೆರಿಯಾರ್ ಹುಲಿ ಸಂರಕ್ಷಣಾ ಅರಣ್ಯದಲ್ಲಿ ಈ ದೇಗುಲವಿದೆ.

ಕಟ್ಟುನಿಟ್ಟಿನ ನಿಯಮ

ಕಟ್ಟುನಿಟ್ಟಿನ ನಿಯಮ

ಶಬರಿಮಲೆಯಲ್ಲಿ ಅಧಿದೇವತೆ ಸ್ವಾಮಿ ಅಯ್ಯಪ್ಪಯನ್ನು ಕಾಣಲು. ಶಬರಿಮಲೆಗೆ ತೀರ್ಥಯಾತ್ರೆಗೆ ಬರಲು ಇಚ್ಚಿಸುವ ಭಕ್ತರು ಕಡ್ಡಾಯವಾಗಿ ಮಾಂಸಾಹಾರವನ್ನು ತ್ಯಜಿಸಬೇಕು ಮತ್ತು 41 ದಿನಗಳ ಕಠಿಣ ವ್ರತಾಚರಣೆ ನಡೆಸಬೇಕು.

ಲಕ್ಷಾಂತರ ಭಕ್ತರು

ಲಕ್ಷಾಂತರ ಭಕ್ತರು

ಪ್ರತಿವರ್ಷ ಸರಿಸುಮಾರು 45-50 ದಶಲಕ್ಷ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದು, ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚು ವಾರ್ಷಿಕ ಭಕ್ತರು ಭೇಟಿ ನೀಡುವ ತೀರ್ಥಕ್ಷೇತ್ರಗಳಲ್ಲಿ ಒಂದೆನಿಸಿದೆ.

ಬೆಟ್ಟಗಳ ಸಾಲು

ಬೆಟ್ಟಗಳ ಸಾಲು

ಶಬರಿಮಲ ದೇವಸ್ಥಾನ ಪರ್ವತಗಳ ಸಾಲು ಹಾಗೂ ದಟ್ಟ ಅರಣ್ಯಗಳಿಂದ ಸುತ್ತುವರಿದಿದ್ದು ಸಮುದ್ರ ಮಟ್ಟದಿಂದ 1535 ಅಡಿ ಎತ್ತರದಲ್ಲಿದೆ. ಸುಮಾರು 18ಕ್ಕೂ ಅಧಿಕ ಬೆಟ್ಟಗಳ ಸಾಲು ಇಲ್ಲಿದೆ.

ದೇವಸ್ಥಾನ ಮಂಡಳಿ

ದೇವಸ್ಥಾನ ಮಂಡಳಿ

ಶಬರಿಮಲೆಯು ಸರ್ಕಾರಿ ಸ್ವಾಮ್ಯದ ತಿರುವಾಂಕೂರ್ ದೇವಸ್ಥಾನ ಮಂಡಳಿಯ ಆಡಳಿತದಲ್ಲಿದೆ.

ಯಾತ್ರೆ ಅವಧಿ

ಯಾತ್ರೆ ಅವಧಿ

ನವೆಂಬರ್ ತಿಂಗಳ ಮಧ್ಯಭಾಗದಿಂದ ಶುರುವಾಗುವ ತೀರ್ಥಯಾತ್ರೆಯ ಸಮಯ ಜನವರಿ ತಿಂಗಳ ನಾಲ್ಕನೇ ವಾರದ ತನಕ ನಡೆಯುತ್ತದೆ

ಪ್ರಮುಖ ಹಬ್ಬಗಳು

ಪ್ರಮುಖ ಹಬ್ಬಗಳು

ಮಂಡಲಪೂಜೆ ಮತ್ತು ಮಕರವಿಳಕ್ಕು ಶಬರಿಮಲೆಯ ಪ್ರಮುಖ ಹಬ್ಬದ ಅವಧಿಗಳು. ಮುಸ್ಲಿಂ ಸಂತ ವಾವರ ಸ್ವಾಮಿಯ ಪುಣ್ಯ ಸ್ಥಳವೂ ಇಲ್ಲಿದ್ದು ಪೂಜೆ ಸಲ್ಲಿಸಲಾಗುತ್ತಿದ್ದು ಧಾರ್ಮಿಕ ಸಹಿಷ್ಣುತೆ ಮತ್ತು ಏಕತೆ

ಪ್ರಮುಖ ಹಬ್ಬಗಳು

ಪ್ರಮುಖ ಹಬ್ಬಗಳು

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ

ಪ್ರಮುಖ ಹಬ್ಬಗಳು

ಪ್ರಮುಖ ಹಬ್ಬಗಳು

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+