ರಾಹುಲನ್ನ ಪೋಲ್ ಬೂತಲ್ಲಿ ಬಿಟ್ಟೋರು ಯಾರು?
ಬೆಂಗಳೂರು, ಮೇ.7: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಣದಲ್ಲಿರುವ ಅಮೇಥಿ ಸೇರಿದಂತೆ ದೇಶದ ಸೇರಿದಂತೆ ದೇಶದ ಪ್ರಮುಖ ರಾಜಕೀಯರು, ಸಾರ್ವಜನಿಕರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಮೇಥಿಯ ಮತಗಟ್ಟೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ರಾಹುಲ್ ಗಾಂಧಿ ಉಪಸ್ಥಿತರಿದ್ದ ಚಿತ್ರಗಳು ಸದ್ದು ಮಾಡುತ್ತಿವೆ. ರಾಹುಲ್ ಅವರು ಮತಗಟ್ಟೆಯಲ್ಲಿ ಅಕ್ರಮ ಪ್ರವೇಶದಿಂದ ಸೆಕ್ಷನ್ 126, 130 ಅನ್ವಯ ಪ್ರಕರಣ ದಾಖಲಿಸಿಕೊಳ್ಳುವಂತೆ ವಿಪಕ್ಷಗಳು ಆಗ್ರಹಿಸಿವೆ.
ರಾಹುಲ್ ಗಾಂಧಿ (ಅಮೇಥಿ), ಸ್ಮೃತಿ ಇರಾನಿ (ಅಮೇಥಿ), ವರುಣ್ ಗಾಂಧಿ (ಸುಲ್ತಾನ್ ಪುರ), ಬೇನಿ ಪ್ರಸಾದ್ ವರ್ಮಾ (ಗೊಂಡಾ), ಮೊಹಮ್ಮದ್ ಕೈಫ್ (ಫೂಲ್ ಪುರ್), ರಾಮ್ ವಿಲಾಸ್ ಪಾಸ್ವಾನ್ (ಹಾಜೀಪುರ), ರಾಬ್ರಿ ದೇವಿ ಮತ್ತು ರಾಜೀವ್ ಪ್ರತಾಪ್ ರೂಡಿ (ಸಾರನ್), ಅನುರಾಗ್ ಠಾಕೂರ್ (ಹಮೀರ್ ಪುರ್) ಮುಂತಾದವರು ಕಣದಲ್ಲಿರುವ ಕ್ಷೇತ್ರಗಳು ಸೇರಿದಂತೆ ಏಳು ರಾಜ್ಯಗಳ 64 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ.
ಎಂಟನೇ ಹಂತದಲ್ಲಿ ಒಟ್ಟು 79 ಮಹಿಳಾ ಅಭ್ಯರ್ಥಿಗಳೂ ಸೇರಿದಂತೆ 997 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜನನಾಯಕರು ಸೇರಿದಂತೆ ಮೊದಲ ಬಾರಿ ಮತದಾನ ಮಾಡುತ್ತಿರುವ ಯುವ ಜನತೆ ಬೆಳ್ಳಂಬೆಳ್ಳಗೆ ಮತಗಟ್ಟೆಗಳತ್ತ ತೆರಳುತ್ತಿದ್ದರೆ, ಹಲವೆಡೆ ಇನ್ನೂ ಮತದಾನ ಚುರುಕುಗೊಳ್ಳಬೇಕಿದೆ. ಸೆಲೆಬ್ರಿಟಿಗಳು, ಸೇರಿದಂತೆ ಜನ ಸಾಮಾನ್ಯರ ವೋಟ್ ಪವರ್ ಚಿತ್ರಗಳು ಮುಂದಿದೆ...

ಆಯೋಗದ ಕಣ್ಣಿಗೆ ಈ ಚಿತ್ರ ಕಾಣುತ್ತಾ
ಚುನಾವಣಾ ಆಯೋಗದ ಕಣ್ಣಿಗೆ ಈ ಚಿತ್ರ ಕಾಣುತ್ತಾ? ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ. ಮತಗಟ್ಟೆಯಲ್ಲಿ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದು ಹೇಗೆ? ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಚಿತ್ರಕೃಪೆ: ಎಎನ್ ಐ

ಕ್ರಿಕೆಟರ್ ಕಮ್ ಕಾಂಗ್ರೆಸ್ ಅಭ್ಯರ್ಥಿ ಕೈಫ್
ಕ್ರಿಕೆಟರ್ ಕಮ್ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಕೈಫ್ ಅವರು ಪತ್ನಿ ಪೂಜಾ ಯಾದವ್ ಜತೆಗೂಡಿ ಫುಲ್ ಪೂರ್ ನಲ್ಲಿ ಮತದಾನ ಮಾಡಿದರು.

ಮತದಾನದ ದಿನ ರಜಾ, ಕ್ರಿಕೆಟ್ ಮಜಾ
ಅಲಹಾಬಾದ್ ನಲ್ಲಿ ಯುವಕರು ಮತದಾನದ ದಿನ ರಜಾ ಮಜಾವನ್ನು ಕ್ರಿಕೆಟ್ ಆಡುವ ಮೂಲಕ ಅನುಭವಿಸುತ್ತಿದ್ದಾರೆ.

ಯುವತಿಯರಿಂದ ಮೊದಲ ಮತದಾನದ ಖುಷಿ
ಉತ್ತರ ಪ್ರದೇಶದಲ್ಲಿ ಯುವತಿಯರು ಮೊದಲ ಬಾರಿಗೆ ಮತದಾನದ ಖುಷಿಯಲ್ಲಿ ಬೆರಳೆತ್ತಿ ತೋರಿಸುತ್ತಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮತದಾನ
ಹಿಮಾಚಲ ಪ್ರದೇಶದಲ್ಲಿ ಮತದಾನಕ್ಕೂ ಮುನ್ನ ಇವಿಎಂ ಹೊತ್ತು ಸಾಗುತ್ತಿರುವ ಅಧಿಕಾರಿಗಳು. ಲಹೊಲ್, ಸ್ಪಿತಿ ಪ್ರಾಂತ್ಯದಲ್ಲಿ ಪ್ರತಿಕೂಲ ಹವಾಮಾನದ ನಡುವೆಯೂ ಮತದಾನ ಸಾಗಿದೆ.

ನಟಿ ಮೂನ್ ಮೂನ್ ಸೇನ್ ರಿಂದ ಮತದಾನ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿ, ನಟಿ ಮೂನ್ ಮೂನ್ ಸೇನ್ ಅವರಿಂದ ಮತದಾನ

ಉತ್ತರಪ್ರದೇಶದಲ್ಲಿ ಸಾಧು ಸಂತರಿಂದ ಮತದಾನ
ಉತ್ತರಪ್ರದೇಶದಲ್ಲಿ ಶಂಕರಾಚಾರ್ಯ ಸ್ವಾಮಿ ವಸುದೇವಾನಂದ ಸರಸ್ವತಿ ಇನ್ನಿತರ ಸಾಧು ಸಂತರಿಂದ ಮತದಾನ

ಉತ್ತರಪ್ರದೇಶದಲ್ಲಿ ಮುಸ್ಲಿಮರಿಂದ ಮತದಾನ
ಉತ್ತರಪ್ರದೇಶದಲ್ಲಿ ಮುಸ್ಲಿಮ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.

'ರೋಪ್ ವೇ' ಮೂಲಕ ಸಾಗುತ್ತಿರುವ ಮತದಾರರು
ಹಿಮಾಚಲ ಪ್ರದೇಶದ ಛಂಬಾದಲ್ಲಿ ಚುನಾವಣೆಯಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲು 'ರೋಪ್ ವೇ' ಮೂಲಕ ನದಿ ದಾಟುತ್ತಿದ್ದಾರೆ. ಪಿಟಿಐ ಚಿತ್ರ

ವಯೋವೃದ್ಧೆಯಿಂದ ಮತದಾನ
Handwaraದಲ್ಲಿ ವಯೋವೃದ್ಧೆಯಿಂದ ಮತದಾನ

ಅಲಹಾಬಾದಿನಲ್ಲಿ ಬಿಗಿ ಭದ್ರತೆ
ಅಲಹಾಬಾದಿನಲ್ಲಿ ಬಿಗಿ ಭದ್ರತೆ ನಡುವೆ ಮತದಾನ

ಮಿಡ್ನಾಪುರದ ಮತದಾರರು
ಪಶ್ಚಿಮ ಬೆಂಗಾಳದ ಮಿಡ್ನಾಪುರದ ಮತದಾರರು

ಹಮೀರ್ ಪುರದ ಮೊದಲ ಮತದಾನದ ಖುಷಿ
ಹಮೀರ್ ಪುರದ ಮೊದಲ ಮತದಾರರ ಖುಷಿ

ನವ ವಿವಾಹಿತ ಹಾಗೂ ಆತನ ತಂದೆ
ಪಲಮ್ ಪುರದಲ್ಲಿ ನವ ವಿವಾಹಿತ ಹಾಗೂ ಆತನ ತಂದೆ ಮತದಾನ ಮಾಡಿದ ನಂತರದ ಚಿತ್ರ











Click it and Unblock the Notifications