ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ 69ನೇ ಸ್ವಾತಂತ್ರ್ಯ ದಿನದ ಸಂಭ್ರಮ ಹೇಗಿತ್ತು?

|
Google Oneindia Kannada News

ನವದೆಹಲಿ, ಆ.15 : ಸಂಭ್ರಮ, ಸಡಗರ, ಅಭೂತಪೂರ್ವ ಭದ್ರತೆಯ ನಡುವೆ ದೇಶಾದ್ಯಂತ ಶನಿವಾರ 69ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರು.

ಮಕ್ಕಳು, ಸೈನಿಕರು, ಆಟೋ ಚಾಲಕರು, ನಾಗರಿಕರು ಸೇರಿಂದತೆ ಎಲ್ಲರೂ ಸ್ವಾತಂತ್ರ್ಯನ ದಿನವನ್ನು ಆಚರಣೆ ಮಾಡಿದರು. ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತದ ಕಲ್ಪನೆಯನ್ನು ಪುನರುಚ್ಚಾರ ಮಾಡಿದರು.[ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ಹೈಲೆಟ್ಸ್]

ಎಲ್ಲೆಲ್ಲಿಯೂ ದೇಶ ಭಕ್ತಿ ಗೀತೆಗಳ ನಾದ, ತ್ರಿವರ್ಣ ಧ್ವಜದ ಹಾರಾಟ. ರಂಗು ರಂಗಿನ ವೇಷ ಭೂಷಣ, ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳು ಕಣ್ಣಿಗೆ ಬಿದ್ದವು. [ಪಿಟಿಐ ಚಿತ್ರಗಳು]

ಬೆಂಗಳೂರಿನಲ್ಲಿ ಚಿಣ್ಣರ ಸಡಗರ

ಬೆಂಗಳೂರಿನಲ್ಲಿ ಚಿಣ್ಣರ ಸಡಗರ

ಬೆಂಗಳೂರಿನ ಶಾಲೆಯೊಂದರಲ್ಲಿ ಬೆಳಗ್ಗೆಯೇ ಶುಭ್ರ ಬಟ್ಟೆ ಧರಿಸಿ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು.

ನರೇಂದ್ರ ಮೋದಿ ಭಾಷಣ

ನರೇಂದ್ರ ಮೋದಿ ಭಾಷಣ

ಭಾರತೀಯರು ಪಾರದರ್ಶಕ ಆಡಳಿತ ಬಯಸುತ್ತಿದ್ದು ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಲು ಸರ್ಕಾರ ಬದ್ಧವಾಗಿದೆ ಎಂದು ದೆಹಲಿ ಕೆಂಪುಕೋಟೆಯ ಭಾಷಣದಲ್ಲಿ ಹೇಳಿದ ನರೇಂದ್ರ ಮೋದಿ.

ಕೆಂಪು ಕೋಟೆ ಮೇಲೆ ಹಾರಾಡಿದ ರಾಷ್ಟ್ರಧ್ವಜ

ಕೆಂಪು ಕೋಟೆ ಮೇಲೆ ಹಾರಾಡಿದ ರಾಷ್ಟ್ರಧ್ವಜ

69ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ನವದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೇಲೆ ಹಾರಾಡಿದ ತ್ರಿವರ್ಣ ಧ್ವಜ ಕಂಡಿದ್ದು ಹೀಗೆ.

ದೇಶ ಭಕ್ತಿ ಮೆರೆದ ಬಾಲಕರು

ದೇಶ ಭಕ್ತಿ ಮೆರೆದ ಬಾಲಕರು

ಭುವನೇಶ್ವರದಲ್ಲಿ ದೇಶಭಕ್ತಿ ರೂಪಕಳನ್ನು ಪ್ರದರ್ಶಿಸಿ ಭಾರತದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಮತ್ತು ಹಿರಿಮೆನನ್ನು ಸಾರಿದ ಬಾಲಕರು.

ಕೆಂಪುಕೋಟೆಯಲ್ಲಿ ಮಕ್ಕಳ ಸಂಭ್ರಮ

ಕೆಂಪುಕೋಟೆಯಲ್ಲಿ ಮಕ್ಕಳ ಸಂಭ್ರಮ

ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಸಂಭ್ರಮಿಸಿದ್ದು ಹೀಗೆ.

ಗಡಿಯಲ್ಲಿ ಸೈನಿಕರ ಶುಭಾಶಯ

ಗಡಿಯಲ್ಲಿ ಸೈನಿಕರ ಶುಭಾಶಯ

ಭಾರತ ಮತ್ತು ಪಾಕಿಸ್ತಾನದ ಗಡಿಭಾಗವಾದ ಅಟಾರಿಯಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೈನಿಕರು ಸಂಭ್ರಮಿಸಿದ್ದು ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.

ಜಮ್ಮು ಕಾಶ್ಮೀರ

ಜಮ್ಮು ಕಾಶ್ಮೀರ

ಜಮ್ಮು ಕಾಶ್ಮೀರದಲ್ಲಿ ದೇಶಭಕ್ತಿ ಗೀತ ಗಾಯನಗಳನ್ನು ಪ್ರಸ್ತುತಪಡಿಸಿ ಭಾರತದ ಇತಿಹಾಸವನ್ನು ತೆರೆದಿಟ್ಟ ಮಕ್ಕಳು.

ಮಕ್ಕಳೊಂದಿಗೆ ಮೋದಿ

ಮಕ್ಕಳೊಂದಿಗೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಹಿಸಿದ್ದ ಮಕ್ಕಳೊಂದಿಗೆ ತಾವು ಸಂಭ್ರಮಿಸಿದರು.

ಕಟ್ಟುವೆವು ನಾವು ಹೊಸ ನಾಡೊಂಧ್ದನ್ನು

ಕಟ್ಟುವೆವು ನಾವು ಹೊಸ ನಾಡೊಂಧ್ದನ್ನು

ಸ್ವಾತಂತ್ರ್ಯ ದಿನದಲ್ಲಿ ಶಿಸ್ತಿನಿಂದ ಭಾಗವಹಿಸಿದ್ದ ಮಕ್ಕಳನ್ನು ನರೇಂದ್ರ ಮೋದಿ ಮಾತನಾಡಿಸುತ್ತ ತೆರಳಿದರು.

ಸೋನಿಯಾ ಹಾಜರಿ

ಸೋನಿಯಾ ಹಾಜರಿ

ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ. ಮೋದಿ ಭಾಷಣದ ಕುರಿತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಪಸ್ವರ ಎತ್ತಿದ್ದು ಭಾಷಣದಲ್ಲಿ ರಾಜಕಾರಣದ ಅಂಶಗಳು ಇರಬಾರದಿತ್ತು ಎಂದು ಹೇಳಿದ್ದಾರೆ.

English summary
In Pics: Prime Minister Narendra Modi on Saturday hoisted the National Flag from the ramparts of Red Fort on the ocassion of 69th Independence Day. In his second Independence Day speech after taking oath as country's PM, Modi lauded Team India - a team of 125 crore Indians - for their efforts in the prosperity of the country and said the team will take the nation to new heights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X