ಇಂದೋರ್‌ನಲ್ಲಿ ಅಪರಿಚಿತ ವೈರಾಣು ಪತ್ತೆ: 64 ಮಂದಿ ಬಲಿ
ಇಂದೋರ್, ಜನವರಿ 28: ದಿನದಿಂದ ದಿನಕ್ಕೆ ಗೊತ್ತಿಲ್ಲದಿರುವ ಜೀವಕ್ಕೆ ಕುತ್ತು ತರುವಂತಹ ವೈರಾಣುಗಳು ಪತ್ತೆಯಾಗುತ್ತಿವೆ. ಕರ್ನಾಟಕದಲ್ಲಿ ಮಂಗನ ಕಾಯಿಲೆಯಾದರೆ ಇಂದೋರ್‌ನಲ್ಲಿ ಹಂದಿ ಜ್ವರದ ರೀತಿಯ ವೈರಾಣು ಪತ್ತೆಯಾಗಿದೆ.
ಇದುವರೆಗೂ 64 ಮಂದಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ಜ್ವರ ಕಾಣಿಸಿಕೊಳ್ಳುತ್ತಿದೆ.ಈ ವೈರಾಣು ಅವರ ರೋಗನಿರೋಧಕ ಶಕ್ತಿ ಕ್ಷೀಣಿಸುವಂತೆ ಮಾಡುತ್ತದೆ. ಇದರಿಂದಾಗಿ ರೋಗಿಗಳು ಮೃತಪಡುತ್ತಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಈ ವೈರಾಣು ಸ್ವತಃ ರೂಪಾಂತರಗೊಂಡು ತನ್ನ ಜೀನ್ನಲ್ಲಿ ಬದಲಾವಣೆ ಮಾಡಿಕೊಂಡಿತು. ಇದನ್ನು ಮಿಚಿಗನ್ ಹಂದಿಜ್ವರ ವೈರಾಣು ಎಂದು ಹೆಸರಿಸಲಾಗಿತ್ತು. ಆದರೆ ಪ್ರಸ್ತುತ ಅಪರಿಚಿತವಾಗಿ ಉಳಿದಿರುವ ವೈರಾಣು ಹಂದಿಜ್ವರ ಅಥವಾ ಡೆಂಗ್ಯೂ ವೈರಾಣು ಲಕ್ಷಣಗಳನ್ನು ತೋರುತ್ತಿಲ್ಲವಾದ್ದರಿಂದ, ಅದನ್ನು ಸ್ಪಷ್ಟವಾಗಿ ಗುರುತಿಸಲು ಕಷ್ಟವಾಗುತ್ತಿದೆ ಎಂದು ವಿವರಿಸಿದ್ದಾರೆ.

ಹಂದಿಜ್ವರದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ರೋಗಿಗಳ ರಕ್ತ ಮಾದರಿಯನ್ನು ಸಂಗ್ರಹಿಸಿ ಭೋಪಾಲ್ನ ವೈರಾಣು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇವರ ಪೈಕಿ 39 ಜನರಿಗೆ ಹಂದಿಜ್ವರ ತಗುಲಿರುವುದು ಖಚಿತವಾಗಿದೆ. 13 ಜನರು ಮೃತಪಟ್ಟಿದ್ದಾರೆ.
350 ಡೆಂಗ್ಯೂ ಪ್ರಕರಣಗಳು ಖಚಿತಪಟ್ಟಿದ್ದು ಒಬ್ಬರು ಮೃತಪಟ್ಟಿದ್ದಾರೆ. ಆದರೆ, ಅದಾವುದೋ ಅಪರಿಚಿತ ವೈರಾಣುವಿನಿಂದಾಗಿ 64 ಜನರು ಮೃತಪಟ್ಟಿದ್ದಾರೆ. ಆ ವೈರಾಣು ಯಾವುದು ಎಂಬುದು ಇನ್ನೂ ಖಚಿತವಾಗುತ್ತಿಲ್ಲ ಎಂದು ಐಡಿಎಸ್ಪಿ ಅಧಿಕಾರಿ ಡಾ. ಅಮಿತ್ ಮಾಲಕಾರ್ ಹೇಳಿದ್ದಾರೆ.
ಹಂದಿಜ್ವರ ಉಂಟು ಮಾಡುವ ವೈರಾಣು ಪ್ರತಿವರ್ಷವೂ ತನ್ನ ಜೀನ್ಗಳನ್ನು ಬದಲಿಸಿಕೊಳ್ಳುತ್ತದೆ. 2015ರಲ್ಲಿ ಮೊದಲ ಬಾರಿಗೆ ಈ ರೋಗ ಕಾಣಿಸಿಕೊಂಡಾಗ ಇದಕ್ಕೆ ಕ್ಯಾಲಿಫೋರ್ನಿಯಾ ಹಂದಿಜ್ವರ ವೈರಾಣು ಎಂದು ಗುರುತಿಸಲಾಗಿತ್ತು.












Click it and Unblock the Notifications