IMD Weather Report: ಚಂಡಮಾರುತ ಪ್ರಸರಣ; ಹಿಂಗಾರು ಬಿರುಸು: ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ ಮುನ್ಸೂಚನೆ
ಹಿಂಗಾರು ಮಳೆಯ ಪ್ರಭಾವ ವಿವಿಧ ಭಾಗಗಳಲ್ಲಿ ಚುರುಕು ಪಡೆದುಕೊಂಡಿದ್ದು, ಕರ್ನಾಟಕವೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಹಾಗೂ ಚಳಿ ಪ್ರಮಾಣ ಹೆಚ್ಚಾಗಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಮುರಸು ಚಂಡಮಾರುತದ ಪ್ರಭವಾವವು ಇನ್ನೂ ಮುಂದುವರಿದಿದೆ. ಭಾರತದಾದ್ಯಂತ ಹವಾಮಾನ ಹೇಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪೂರ್ವ ತೆಲಂಗಾಣ ಮತ್ತು ಪಕ್ಕದ ಕರಾವಳಿ ಆಂಧ್ರಪ್ರದೇಶದ ಮೇಲೆ ನೆಲೆಗೊಂಡಿದ್ದ "ಡಿಪ್ರೆಶನ್' (ತೀವ್ರ ಚಂಡಮಾರುತ ಮುರಸುವಿನ ಪ್ರಭಾವವು) ಕಳೆದ 6 ಗಂಟೆಗಳಲ್ಲಿ ಗಂಟೆಗೆ 6 ಕಿ.ಮೀ ವೇಗದಲ್ಲಿ ಬಹುತೇಕ ಉತ್ತರದ ಕಡೆಗೆ ನಿಧಾನವಾಗಿ ಚಲಿಸಿದೆ. ನವೆಂಬರ್ 4ರಂದು ಖಮ್ಮಂನಿಂದ (ತೆಲಂಗಾಣ) ನೈಋತ್ಯಕ್ಕೆ ಸುಮಾರು 10 ಕಿ.ಮೀ, ನಂದಿಗಾಮದಿಂದ (ಆಂಧ್ರಪ್ರದೇಶ) ಉತ್ತರ-ವಾಯುವ್ಯಕ್ಕೆ 50 ಕಿ.ಮೀ, ರಂಟಚಿಂತಲದಿಂದ (ಆಂಧ್ರಪ್ರದೇಶ) ವಾಯುವ್ಯಕ್ಕೆ 90 ಕಿ.ಮೀ, ನಲ್ಗೊಂಡದಿಂದ (ತೆಲಂಗಾಣ) ಪೂರ್ವ- ಈಶಾನ್ಯಕ್ಕೆ 90 ಕಿ.ಮೀ, ವಿಜಯವಾಡದಿಂದ (ಆಂಧ್ರಪ್ರದೇಶ) ವಾಯುವ್ಯಕ್ಕೆ 90 ಕಿ.ಮೀ ಮತ್ತು ಭದ್ರಾಚಲಂನಿಂದ (ತೆಲಂಗಾಣ) ಪಶ್ಚಿಮ-ನೈಋತ್ಯಕ್ಕೆ 100 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಇದು ಬಹುತೇಕ ಉತ್ತರದ ಕಡೆಗೆ ಚಲಿಸುವುದನ್ನು ಮುಂದುವರಿಸಲಿದ್ದು, ಮುಂದಿನ 6 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಂಡು 'ವೆಲ್ ಮಾರ್ಕ್ ಲೋ ಪ್ರೆಶರ್ ಏರಿಯಾ' (ಸ್ಪಷ್ಟವಾಗಿ ಗುರುತಿಸಬಹುದಾದ ಕಡಿಮೆ ಒತ್ತಡದ ಪ್ರದೇಶ) ಆಗಿ ಬದಲಾಗುವ ಸಾಧ್ಯತೆಯಿದೆ.
ಕೊಂಕಣ ಮತ್ತು ಗೋವಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲ್ಮ ವಾಯು ಚಂಡಮಾರುತ ಪರಿಚಲನೆ ಮುಂದುವರಿದಿದ್ದು, ಪ್ರಸ್ತುತ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿದೆ. ದಕ್ಷಿಣ ತಮಿಳುನಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದವರೆಗೆ ಮೇಲ್ಮ ವಾಯು ಚಂಡಮಾರುತ ಪರಿಚಲನೆ ಮುಂದುವರಿದಿದೆ.
ಲಕ್ಷದ್ವೀಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇಲೆ ವಾಯು ಚಂಡಮಾರುತ ಪರಿಚಲನೆ ಮುಂದುವರಿದಿದ್ದು, ಪ್ರಸ್ತುತ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ. ನವೆಂಬರ್ 4 ರ ಬುಧವಾರ ದಕ್ಷಿಣ ಮತ್ತು ಪೂರ್ವ ಭಾರತದ ಕೆಲವು ಭಾಗಗಳಲ್ಲಿ ಮಳೆ ಮುಂದುವರಿದಿದೆ. ತೀವ್ರ ಚಂಡಮಾರುತ ಮುರಸು ಆಂಧ್ರಪ್ರದೇಶದ ಕರಾವಳಿಯನ್ನು ದಾಟಿದ ನಂತರ ಒಳನಾಡಿಗೆ ಚಲಿಸುತ್ತಿದೆ. ಆಂಧ್ರಪ್ರದೇಶದ ಕರಾವಳಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಏತನ್ಮಧ್ಯೆ, ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಒಣಹವೆ ಮುಂದುವರಿದಿದೆ. ರಾಯಲಸೀಮಾ ಮತ್ತು ತೆಲಂಗಾಣದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ, ಆದರೆ ದಕ್ಷಿಣ ಛತ್ತೀಸ್‌ಗಢದಲ್ಲಿ ಮಳೆ ಮುಂದುವರಿದಿದೆ.
IMD Weather Report: ದಕ್ಷಿಣ ಭಾರತದಲ್ಲಿ ಮಳೆ ಆರ್ಭಟ
ಇನ್ನು ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲೂ ಮಳೆ ಆರ್ಭಟ ಮುಂದುವರಿದಿದೆ. ನವೆಂಬರ್ 4 ರಿಂದ 8 ರವರೆಗೆ ಕೇರಳ ಮತ್ತು ಮಾಹೆಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಪ್ರತ್ಯೇಕ ಅಥವಾ ಚದುರಿದ ಮಳೆಯಾಗುವ ಸಾಧ್ಯತೆ ಇದೆ.
ನವೆಂಬರ್ 5 ರಿಂದ 8 ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 4 ಮತ್ತು 5 ರಂದು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ ಸಹ ಸಾಕಷ್ಟು ವ್ಯಾಪಕ ಮಳೆ ಆಗಲಿದೆ. ಆಂಧ್ರಪ್ರದೇಶದ ಕರಾವಳಿ ಮತ್ತು ರಾಯಲಸೀಮಾದ ಕೆಲವು ಭಾಗಗಳಲ್ಲಿ ಹಗಲಿನಲ್ಲಿ ಬಿರುಗಾಳಿ ಬೀಸಲಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ವರದಿಯು ಮುನ್ಸೂಚನೆ ನೀಡಿದೆ.


Click it and Unblock the Notifications
