Rain Alert: ಚಂಡಮಾರುತ ಪ್ರಸರಣ, ದಕ್ಷಿಣ ಭಾರತಕ್ಕೆ 3 ದಿನ ಧಾರಾಕಾರ ಮಳೆ ಎಚ್ಚರಿಕೆ! ಕೇರಳ ಮಳೆಗೆ ಭೂಕುಸಿತ

IMD Weather Forecast: ದೇಶದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯಗಳು ಉಲ್ಭಣಿಸಿವೆ. ಮುಂದಿನ ಮೂರು ದಿನಗಳಲ್ಲಿ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತ ಪರಿಚಲನೆಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗುವ ಕಾರಣ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಸಕ್ರಿಯವಾಗಲಿದೆ. ತೀವ್ರ ಬಿಸಿಲಿಗೆ ತುತ್ತಾಗಿದ್ದ ದೆಹಲಿಯಲ್ಲಿ ಬೆಳಗ್ಗೆ ಮತ್ತು ರಾತ್ರಿ ವೇಳೆ ಹಗುರ ಮಳೆ ಆಗುತ್ತಿದೆ. ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಕೇರಳದಲ್ಲಿ ಸುರಿದ ಮಳೆಗೆ ಭೂಕುಸಿತ ಉಂಟಾಗಿ, ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಐಎಂಡಿ ನೀಡಿರುವ ಮಳೆ ಮುನ್ಸೂಚನೆಯ ಪ್ರಕಾರ, ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ, ಗುಡುಗು ಸಹಿತ ಮಳೆ ಆಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಿರುಗಾಳಿ ಮಳೆ ಆಗಲಿದೆ. ಈ ಭಾಗದ ಸಮುದ್ರ ಮಟ್ಟದಲ್ಲ, ಆಗ್ನೇಹ ಬಂಗಾಳಕೊಲ್ಲಿ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಪ್ರತ್ಯೇಕ ಕಡೆ ಚಂಡಮಾರುತ ಪ್ರಸರಣ ಪರಿಚಲನೆ ನಿರ್ಮಾಣವಾಗಿದೆ. ಇದರ ಪ್ರಭಾವದಿಂದ ದಕ್ಷಿಣ ಭಾರತದಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದೆ.

IMD Weather Forecast

ತಿಂಗಳ ಕೊನೆ ವಾರ ಹೇಗಿರುತ್ತೆ ಹವಾಮಾನ

ಅಕ್ಟೋಬರ್ ಕೊನೆಯ ವಾರದ ದೇಶದಲ್ಲಿ ಕೆಲವೆಡೆ ಬಿರು ಬಿಸಿಲು ಕಂಡು ಬಂದರೆ, ಉಳಿದೆಡೆ ಭಾರೀ ಮಳೆ ಆಗಲಿದೆ. ಹಿಮಾಲಯ ಪ್ರದೇಶಗಳಲ್ಲಿ ಹಿಮಪಾತವೂ ಆಗಲಿದೆ. ದೆಹಲಿಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿದೆ. ಆಗಾಗ ಮಳೆ ಆಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ವಾತಾವರಣ ಮುಂದುವರಿಯಲಿದೆ.

ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕದ ಕೆಲವು ಪ್ರದೇಶ, ಓಡಿಶಾ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಸೌಥ್ ಇಂಡಿಯಾ ವಿವಿಧ ಕಡೆಗಳಲ್ಲಿ ಇಂದಿನಿಂದ (ಅಕ್ಟೋಬರ್ 22) ಮೂರು ದಿನ (ಅ.25) ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

ಕೇರಳ ಸೇರಿ ವಿವಿಧೆಡೆ ಧಾರಾಕಾರ ಮಳೆ ಮುನ್ಸೂಚನೆ

ಕೇರಳದಲ್ಲಿ ಮಾತ್ರ ಅಕ್ಟೋಬರ್ 27 ರವರೆಗೂ ಜೋರು ಮಳೆ ಆಗಲಿದೆ. ಲಕ್ಷದ್ವೀಪ, ಕರಾವಳಿ ರಾಜ್ಯಗಳಲ್ಲಿ ಮಳೆ ಆಗಲಿದ್ದು, ಜನಜೀವನ ಎಚ್ಚರ ವಹಿಸಬೇಕಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಜೋರು ಮಳೆಗೆ ಸಂಚಾರ ಅಸ್ತವ್ಯಸ್ತ ಸಾಧ್ಯತೆ ಇದೆ. ಮಳೆಗೆ ರಸ್ತೆಗಳು ಪ್ರವಾಹದಂತಾಗಿ ಸಮಸ್ಯೆ ಸೃಷ್ಟಿಸಲಿವೆ. ಓಡಿಶಾದಲ್ಲಿ ಅಕ್ಟೋಬರ್ 26 ಮತ್ತು 27 ರಂದು ಎರಡು ಧಾರಾಕಾರ ಮಳೆ ಸುರಿಯಲಿದೆ. ಇತ್ತ ವಾಯುವ್ಯ, ಮಧ್ಯ ಮತ್ತು ಈಶಾನ್ಯ ಭಾರತದ ರಾಜ್ಯಗಳ ಹವಾಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ವಾತಾವರಣ ಸಹಜವಾಗಿರಲಿದ್ದು, ಒಣಹವೆ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇನ್ನೂ ಗೋವಾ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಎದುರಾಗಲಿದೆ. ಇನ್ನೂ ಹರಿಯಾಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಣಿಪುರ, ಸಿಕ್ಕಿಂದಲ್ಲೂ ಮಳೆ ನಿರೀಕ್ಷೆ ಇದೆ.

ಮಳೆಗೆ ಕೇರಳದಲ್ಲಿ ಭೂಕುಸಿತ, ರೈಲು ಸಂಚಾರಕ್ಕೆ ಅಫೆಕ್ಟ್

ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಿರುವನಂತಪುರಂ ಜಿಲ್ಲೆಯ ಪರಸ್ಸಲ ರೈಲು ನಿಲ್ದಾಣದ ಬಳಿ ಗುರುವಾರ ಮುಂಜಾನೆ ಭೂಕುಸಿತ ಸಂಭವಿಸಿದೆ. ಬಿಲಾಸ್ಪುರ್-ತಿರುನೆಲ್ವೇಲಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದೆ. ಇದರಿಂದಾಗಿ ಇತರ ರೈಲುಗಳ ಸೇವೆಯು ಅಸ್ತವ್ಯಸ್ತಗೊಂಡಿವೆ. ಬೆಳಗಿನ ಜಾವ 2.19 ಕ್ಕೆ ಈ ಘಟನೆ ಸಂಭವಿಸಿದೆ. ಎಲ್ಲಾ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+