IMD Weather Alert: ಚಂಡಮಾರುತ ಪ್ರಸರಣ, ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ ಎಚ್ಚರಿಕೆ
ನವದೆಹಲಿ: ಸಮುದ್ರ ಮಟ್ಟದಲ್ಲಿ ಹವಾಮಾನ ತೀವ್ರ ಸ್ವರೂಪದಲ್ಲಿ ಬದಲಾವಣೆ ಆಗುತ್ತಿದೆ. ವಾಯುಭಾರ ಕುಸಿತ, ಚಂಡಮಾರುತ ಪ್ರಸರಣ ಉದ್ಭವಿಸಿದೆ. ಮುಖ್ಯವಾಗಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಬಿರುಗಾಳಿ ಮಳೆ ಆಗುತ್ತಿದೆ. ಒಂದೆಡೆ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದಾಗಿ, ಉತ್ತರ ಭಾರತದಲ್ಲಿ ಶೀತ ವಾತವರಣ ಹೆಚ್ಚಾಗಿದೆ. ಮುಂದಿನ 5 ದಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ತಕ್ಕಮಟ್ಟಿಗೆ ಚುರುಕಾಗಿದೆ. ಈ ಭಾಗದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ವಾಯುವ್ಯ, ಮಧ್ಯ, ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ.

ವಾಯುಭಾರ ಕುಸಿತ, ಭಾರೀ ಮಳೆ
ಅಕ್ಟೋಬರ್ 22ರಂದು ಬಂಗಾಳಕೊಲ್ಲಿಯ ನೈಋತ್ಯ ಮತ್ತು ಅದರ ಪಕ್ಕದಲ್ಲಿರುವ ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಲಿದೆ. ಇದರಿಂದಾಗಿ ಅಕ್ಟೋಬರ್ 26 ರವರೆಗೆ ತಮಿಳುನಾಡು, ಕೇರಳ, ಕರ್ನಾಟಕದ ಒಳನಾಡು ಜಿಲ್ಲೆಗಳು, ಪುದುಚೇರಿ, ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಕರ್ನಾಟಕದಲ್ಲಿ ಅಕ್ಟೋಬರ್ 24 ರವರೆಗೆ ಭಾರೀ ಮಳೆ ಎಚ್ಚರಿಕೆ ಕೊಡಲಾಗಿದೆ.
ಅದೇ ರೀತಿ ಆಂಧ್ರ ಪ್ರದೇಶ ಕರಾವಳಿ ಮತ್ತು ರಾಯಲಸೀಮಾದಲ್ಲಿ ಬುಧವಾರ ಭಾರೀ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳು ಕೆಲವು ಭಾಗಗಳಲ್ಲಿಯೂ ಧಾರಾಕಾರ ಮಳೆ ಮುಂದುವರಿಯಲಿದೆ. ಮುಂಗಾರು ಅಂತ್ಯದೊಂದಿಗೆ ಹಿಂಗಾರು ಭರ್ಜರಿ ಆರಂಭ ಪಡೆದಿದೆ. ಈ ಬಾರಿ ನಿರೀಕ್ಷೆಯಂತೆ ಹಿಂಗಾರು ಮಳೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.
ದೆಹಲಿ, ಪಂಜಾಬ್, ಹರಿಯಾಣದಲ್ಲಿ ಮಳೆ
ಕೆಲವು ದಿನಗಳಿಂದ ಹೆಚ್ಚಾಗಿ ಶುಷ್ಕ ವಾತಾವಣ ಅನುಭವಿಸುತ್ತಿರುವ ದೆಹಲಿ-ಎನ್‌ಸಿಆರ್‌ನಲ್ಲಿ ಗರಿಷ್ಠ ತಾಪಮಾನ 31-33 ಡಿ.ಸೆ. ಮತ್ತು ಕನಿಷ್ಠ ತಾಪಮಾನ 18-20 ಡಿ.ಸೆ. ಇರುತ್ತದೆ. ಈ ವಾರದ ಕೊನೆಯಲ್ಲಿ ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಅಕ್ಟೋಬರ್ 24-25 ರಂದು ಎರಡು ದಿನ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ.
ಹವಾಮಾನ ವೈಪರೀತ್ಯದ ಬಿರುಗಾಳಿಯು ಉತ್ತರ ಅಂಡಮಾನ್ ಸಮುದ್ರದತ್ತ ಚಲಿಸುವ ಸಾಧ್ಯತೆಯಿದೆ. ಅಕ್ಟೋಬರ್ 23ರ ಹೊತ್ತಿಗೆ ಸಮುದ್ರ ಭಾಗದಿಂದ ಬಂಗಾಳಕೊಲ್ಲಿಯ ಆಗ್ನೇಯ ಭಾಗದಿಂದ ಸಾಗಲಿದೆ. ಪಕ್ಕದ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಲಿದೆ. ಈ ಚಂಡಮಾರತದ ಪ್ರಸರಣವು ಅದು ವಾಯುವ್ಯ ದಿಕ್ಕಿಗೆ ಚಲಿಸಿದರೆ ಅನೇಕ ಕಡೆಗಳಲ್ಲಿ ಮತ್ತೆ ಮಳೆ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
#WATCH | Tamil Nadu: Amid the heavy rain warning issued for Thoothukudi district, unusually rough sea conditions are being witnessed along the Thoothukudi Port beach.In view of the rough sea conditions, fishermen operating from the Thoothukudi Port beach area will not venture into the sea for fishing today as a precautionary measure.
— ANI (@ANI) October 21, 2026


Click it and Unblock the Notifications
