ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್' ಕಾರಣ: ಸ್ಫೋಟಕ ಮಾಹಿತಿ
Recommended Video

ಕೊಡಗು, ಆಗಸ್ಟ್ 22: ಕೊಡಗಿನ ಪ್ರವಾಹಕ್ಕೆ ಕಾರಣ ಏನಿರಬಹುದು ಎಂದು ಎಲ್ಲರಲ್ಲೂ ಕುತೂಹಲ, ಕೆಲವರು ಪ್ರಕೃತಿ ವಿರುದ್ಧವಾಗಿ ಕೊಡಗಿನಲ್ಲಿ ನಡೆದ ಕಾರ್ಯಗಳೇ ಕಾರಣ ಎಂದರೆ ಇನ್ನು ಕೆಲವರು ಅಲ್ಲಲ್ಲ ಈ ಬಾರಿ ತುಂಬಾ ಮಳೆಯಾಗಿದೆ, ಜತೆಗೆ ಕೇರಳದಲ್ಲೂ ಮಳೆಯಾಗಿದ್ದರಿಂದ ಇಲ್ಲಿಗೆ ನೀರು ಬಂದಿದೆ ಎನ್ನುತ್ತಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ಕಾರಣ ನೀಡುತ್ತಿದ್ದಾರೆ.
ಆದರೆ ನಿಜವಾದ ಕಾರಣವನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕೇರಳ, ಕೊಡಗು ಭೂಕುಸಿತಕ್ಕೆ ಸೋಮಾಲಿ ಜೆಟ್ ಚಂಡಮಾರುತವೇ ಕಾರಣ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ಚಂಡಮಾರುತದಿಂದಲೇ ಕೇರಳ ಮತ್ತು ಕೊಡಗಿನಲ್ಲಿ ಸಾವು ನೋವು ಸಂಭವಿಸಿದೆ. ಅರಬ್ಬಿ ಸಮುದ್ರದಲ್ಲಿ ಎದ್ದ ಬಿರುಗಾಳಿ, ದಿಕ್ಕು ಬದಲಾಯಿಸಿ ಬಂಗಾಳ ಕೊಲ್ಲಿಗೆ ಲಗ್ಗೆ ಇಟ್ಟಿತ್ತು, ಕರಾವಳಿ, ಪಶ್ಚಿಮದಲ್ಲಿ ಸೋಮಾಲಿ ಜೆಟ್‌ನಿಂದ ಭಾರಿ ಮಳೆ ಜೊತೆಗೆ ಪ್ರವಾಹದಂತಹ ಅನಾಹುತಕ್ಕೂ ಕಾರಣವಾಯಿತು, ಇದರಿಂದ ಕೊಡಗು, ಕೇರಳ ಸೇರಿ ಹಲವೆಡೆ ಹಾನಿ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸೋಮಾಲಿ ಜೆಟ್ ಚಂಡ ಮಾರುತ ಎಂದರೇನು? ತಿಳಿಯಲು ಕುತೂಹಲವಿದ್ದರೆ ಲೇಖನ ನಿರೀಕ್ಷಿಸಿ...












Click it and Unblock the Notifications