Mosnoon Rain: ಮುಗಿಯಿತು ಸಂಕಷ್ಟ! ಈ ಬಾರಿ ರಾಜ್ಯಕ್ಕೆ ಭರ್ಜರಿ ಮಳೆ ಗ್ಯಾರಂಟಿ
ಎಲ್ ನಿನೋ ಕಾರಣದಿಂದ ಭೀಕರ ಬರಗಾಲ, ತಾಪಮಾನ ಹೆಚ್ಚಳ ಕರ್ನಾಟಕ ಸೇರಿ ಭಾರತದ ಹಲವು ರಾಜ್ಯಗಳನ್ನು ಹೈರಾಣಾಗಿಸಿದೆ. ರಾಜ್ಯದಲ್ಲಿ ಈ ಬಾರಿ ತೀವ್ರ ಬರಗಾಲ ಮತ್ತು ಭಾರಿ ಬಿಸಿಲು ಜನರನ್ನು ಕಂಗೆಡಿಸಿದೆ. ಆದರೆ, ಮುಂಗಾರು ಆರಂಭಕ್ಕೆ ಮುನ್ನವೇ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಆರಂಭವಾಗಿದ್ದು ಭರ್ಜರಿ ಮುಂಗಾರಿನ ಮುನ್ಸೂಚನೆ ಕೊಟ್ಟಿದೆ.
ಸ್ಕೈಮೆಟ್ ವರದಿಯ ಪ್ರಕಾರ, ಎಲ್ ನಿನೋದಿಂದಾಗಿ ಮಳೆ ಕಡಿಮೆಯಾಗಿತ್ತು, ಈ ವರ್ಷ ಜೂನ್ ಮೊದಲ ವಾರದಿಂದ ಎಲ್ ನಿನೋ ಲಾ ನಿನಾಗೆ ಬದಲಾಗುತ್ತದೆ. ಇದು ಉತ್ತಮ ಮುಂಗಾರು ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಈ ವರ್ಷ ದೇಶದಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮಾಹಿತಿ ನೀಡಿದೆ. ಜೂನ್ ಮತ್ತು ಸೆಪ್ಟೆಂಬರ್ ನಡುವಿನ ನಾಲ್ಕು ತಿಂಗಳಲ್ಲಿ ಮುಂಗಾರು ಮಳೆಯು ಶೇಕಡಾ 102 ರಷ್ಟು ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆ (IMD) ಸಹ 96 ರಿಂದ 104 ಪ್ರತಿಶತದಷ್ಟು ಮಳೆಯನ್ನು ಸರಾಸರಿ ಅಥವಾ ಸಾಮಾನ್ಯ ಎಂದು ಪರಿಗಣಿಸುತ್ತದೆ.
ನಾಲ್ಕು ತಿಂಗಳ ಮುಂಗಾರು ಹಂಗಾಮಿನಲ್ಲಿ ದೀರ್ಘಾವಧಿಯ ಸರಾಸರಿ (ಎಲ್‌ಪಿಎ) 868.6 ಮಿಮೀ ಎಂದು ಸಂಸ್ಥೆ ಹೇಳಿದೆ. ಭಾರತದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಸ್ಕೈಮೇಟ್ ಮಾಹಿತಿ ನೀಡಿದೆ. ಅದರಲ್ಲೂ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಮಳೆಯಾದರೆ, ಈಶಾನ್ಯ ಭಾರತ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹೇಳಿದೆ.
ತಿಂಗಳುವಾರು ಮಳೆ ಪ್ರಮಾಣ
ಸ್ಕೈಮೆಟ್ ವರದಿಯ ಪ್ರಕಾರ, ಎಲ್ ನಿನೋ ಮಳೆಯ ಮೇಲೆ ಪರಿಣಾಮ ಬೀರುತ್ತದೆ, ಆದರೆ ಜೂನ್ ಮೊದಲ ವಾರದಿಂದ ಎಲ್‌ನಿನೋ ವೇಗವಾಗಿ ಲಾ ನಿನಾಗೆ ಬದಲಾಗುತ್ತದೆ. ಲಾ ನಿನಾ ಉತ್ತಮ ಮುಂಗಾರು ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಈ ಬದಲಾವಣೆ ಈ ಬಾರಿ ಮುಂಗಾರು ಆರಂಭದಲ್ಲಿ ವಿಳಂಬವನ್ನು ಉಂಟುಮಾಡಬಹುದು. ಆದರೂ, ಅನೇಕ ಪ್ರದೇಶಗಳಲ್ಲಿ ಸಾಧಾರಣ ಮಳೆ ಮುಂದುವರಿಯುತ್ತದೆ. ಜೂನ್‌ನಲ್ಲಿ 95 ಪ್ರತಿಶತ ಎಲ್‌ಪಿಎ, ಜುಲೈನಲ್ಲಿ 105 ಪ್ರತಿಶತ, ಆಗಸ್ಟ್‌ನಲ್ಲಿ 98 ಪ್ರತಿಶತ ಮತ್ತು ಸೆಪ್ಟೆಂಬರ್‌ನಲ್ಲಿ 110 ಪ್ರತಿಶತದಷ್ಟು ಎಲ್‌ಪಿಎ ಸ್ವೀಕರಿಸಲಾಗುವುದು ಎಂದು ವರದಿ ನೀಡಿದೆ.
20 ರಾಜ್ಯಗಳಲ್ಲಿ ಉತ್ತಮ ಮಳೆ
ಸ್ಕಮೇಟ್ ಪ್ರಕಾರ ದೇಶದ 20 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಲಕ್ಷದ್ವೀಪಗಳಲ್ಲಿ ಮುಂಗಾರು ಮಳೆ ಉತ್ತಮವಾಗಿರಲಿದೆ.
ಈ ರಾಜ್ಯಗಳಿಗೆ ಸಾಧಾರಣ ಮಳೆ
ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂನಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು.












Click it and Unblock the Notifications