IMD Weather Forecast: ಈ ಭಾಗಗಳಲ್ಲಿ ರಣಮಳೆ ಎಚ್ಚರಿಕೆ, ಶಾಲೆಗಳಿಗೆ ರಜೆ ಘೋಷಣೆ ನಿರೀಕ್ಷೆ

ಮುಂಗಾರು ಮಳೆ ಆರ್ಭಟ ಕೆಲವು ಕಡೆಗಳಲ್ಲಿ ತಣ್ಣಗಾದಂತೆ ಕಂಡರೂ ಸಹಿತ ಇನ್ನು ಹಲವೆಡೆ ಅಬ್ಬರ ಶುರುವಿಟ್ಟುಕೊಂಡಿದೆ. ಮೂರು ಕಡೆಗಳಲ್ಲಿ ಉಂಟಾಗಿದ್ದ ಹವಾಮಾನ ವೈಪರೀತ್ಯ ಪ್ರಭಾವ ಇಳಿಕೆ ಆದರೂ ಸಹಿತ ಒಂದು ಕಡೆಗಿನ ಚಂಡಮಾರುತ ಪರಿಚಲನೆ ಮಾತ್ರ ಯಥಾ ಸ್ಥಿತಿಯಲ್ಲಿದೆ. ಇದರ ಬಿರುಗಾಳಿ ವೇಗವು ಮುಂಗಾರು ಭಾರೀ ಮಳೆಗೆ ಕಾರಣವಾಗಿದೆ. ಮುಂದಿನ ಮೂರು ದಿನ ದೇಶದ ನಾನಾ ರಾಜ್ಯಗಳಲ್ಲಿ ಅತ್ಯಧಿಕ ಮಳೆ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ಸೋಮವಾರ ಮತ್ತು ಮಂಗಳವವಾರ ನೀಡಲಾಗಿದ್ದ 11 ಜಿಲ್ಲೆಗಳ ಶಾಲೆಗಳಿಗೆ ರಜೆ ಮುಂದುವರಿಯುವ ನಿರೀಕ್ಷೆ ಇದೆ.

ವಾಯುವ್ಯ ಮಧ್ಯಪ್ರದೇಶ ಮತ್ತು ನೆರೆಹೊರೆಯಲ್ಲಿ ಇಂದು ಮಂಗಳವಾರ (ಜುಲೈ 29) ರಂದು ಕಡಿಮೆ ಒತ್ತಡದ ಪ್ರದೇಶವು ಉಂಟಾಗಿದೆ. ಇದರ ಪ್ರಭಾವ ಮುಂದುವರಿದಿದೆ. ಈ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್ ವರೆಗೆ ವಿಸ್ತರಿಸಿದೆ. ಇದು ತನ್ನ ಮೂಲ ಸ್ಥಳದಿಂದ ನೈಋತ್ಯ ಮಾರ್ಗದತ್ತ ಸಂಚರಿಸಲಿದೆ.

IMD Heavy Rain Alert for Many Parts of India In This States Schools May get Holidays

ಸರಾಸರಿ ಸಮುದ್ರ ಮಟ್ಟದಲ್ಲಿ ಸ್ಟ್ರಫ್ ಬಿರುಗಾಳಿಯು ದೆಹಲಿಯ ಗಂಗಾನಗರದ ಮೂಲಕ ಹಾದುಹೋಗಲಿದೆ. ವಾಯುವ್ಯ ಮಧ್ಯಪ್ರದೇಶ, ಜಮ್‌ಶೆಡ್ ಪುರ ದಿಘಾದ ಮೇಲೆ ಕಡಿಮೆ ಒತ್ತಡದ ಪ್ರದೇಶದ ಕೇಂದ್ರಿಕೃತವಾಗಿದೆ. ಅಲ್ಲಿಂದ ಪೂರ್ವ-ಆಗ್ನೇಯಕ್ಕೆ ಬಂಗಾಳಕೊಲ್ಲಿಯ ಈಶಾನ್ಯಕ್ಕೆ ತಲುಪುವ ಸಂಬವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಪ್ರವಾಹ ಉಂಟಾಗುತ್ತಿದೆ. ಅನೇಕ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕಾಗಿರುವುದರಿಂದ ರಾಜಸ್ಥಾನ ಕೆಲವು ಭಾಗಗಳಲ್ಲಿ ಭಾರೀ ಮಳೆ ಕಾರಣಕ್ಕೆ ಇವತ್ತು ಸಹ 'ರೆಡ್ ಅಲರ್ಟ್' ನೀಡಲಾಗಿದೆ.

11 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಈ ವೈಪರೀತ್ಯ, ಅತ್ಯಧಿಕ ಮಳೆ ಕಾರಣಕ್ಕೆ ರಾಜಸ್ಥಾನದ ಸುಮಾರು 11 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಸೋಮವಾರ ಮತ್ತು ಮಂಗಳವಾರ ರಜೆ ನೀಡಲಾಗಿತ್ತು. ಮಳೆ ಮುಂದುವರಿಯುವ ಕಾರಣಕ್ಕೆ ಈ ರಜೆಯನ್ನು ಬುಧವಾರ (ಜುಲೈ 30) ಮತ್ತು ಗುರುವಾರವರೆಗೂ (ಜುಲೈ 31) ಮುಂದುವರಿಸುವ ನಿರೀಕ್ಷೆ ಇದೆ. ರಾಜಸ್ಥಾನ ಸುತ್ತಮುತ್ತಲಿನ ರಾಜ್ಯಗಳಾದ ಬಿಹಾರ, ಮಧ್ಯ ಪ್ರದೇಶ, ಗುರಜರಾತ್, ಪಂಜಾಬ್, ಹರಿಯಾಣ, ದೆಹಲಿ, ಜಾರ್ಖಂಡ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ವೈಪರೀತ್ಯ ಪರಿಣಾಮದಿಂದ ಆಗಸ್ಟ್ 01ರವರೆಗೆ ಧಾರಾಕಾರ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕರ್ನಾಟಕ ಸೇರಿ ವಿವಿಧೆಡೆ ಭಾರೀ ಮಳೆ

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿ ಮೇಲಿನ ಸ್ಟ್ರಫ್ ಕಾರಣಕ್ಕೆ, ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಕರಾವಳಿ, ಕೇರಳ, ತಮಿಳುನಾಡು, ಒಡಿಶಾ, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳು, ಗೋವಾ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಗರಿಷ್ಟ 115 ಮಿಲಿ ಮೀಟರ್ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಈ ಭಾಗಗಳಿಗೆ ಇಂದು 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಮಂಗಳವಾರದ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+