ಬೀಫ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

ಗೋ ಹತ್ಯಾ ಕಾನೂನನ್ನು ವಿರೋಧಿಸಿದ್ದ ಐಐಟಿ ಮದ್ರಾಸ್ ನ ಕೆಲ ವಿದ್ಯಾರ್ಥಿಗಳು ಮೇ 28ರಂದು ಭಾನುವಾರ ರಾತ್ರಿ ತಮ್ಮ ಕ್ಯಾಂಪಸ್ಸಿನಲ್ಲಿ ಬೀಫ್ ಫೆಸ್ಟ್ ಆಯೋಜಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬನ ಮೇಲೆ

ಚೆನ್ನೈ, ಮೇ 30: ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾನೂನನ್ನು ವಿರೋಧಿಸಿ ಚೆನ್ನೈನಲ್ಲಿರುವ ಮದ್ರಾಸ್ ಐಐಟಿಯಲ್ಲಿ ಕೆಲ ವಿದ್ಯಾರ್ಥಿಗಳ ಗುಂಪು ಆಯೋಜಿಸಿದ್ದ ಬೀಫ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆಯಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಆರ್. ಸೂರಜ್ ಎಂದು ಗುರುತಿಸಲಾಗಿದೆ. ಬೀಫ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದನ್ನು ಗಮನಿಸಿದ್ದ ವಿರೋಧಿ ಗುಂಪಿನ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಆ ಯುವಕನನ್ನು ಗುರುತಿಸಿ ಹಲ್ಲೆ ಮಾಡಿದ್ದಾರೆ.[ಬೀಫ್ ಫೆಸ್ಟ್ : ಕವಯಿತ್ರಿಗೆ ಮುಸ್ಲಿಂರಿಂದಲೇ ಮಂಗಳಾರತಿ]

IIT Student Thrashed For Joining 'Beef Fest' In Chennai

ಮದ್ರಾಸ್ ಹೈ ಕೋರ್ಟ್ ನ ಮಧುರೈ ಪೀಠವು ಕೇಂದ್ರ ಸರ್ಕಾರದ ಗೋ ಹತ್ಯೆ ಕಾಯ್ದೆಗೆ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಈ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.[ಚೆನ್ನೈ ಐಐಟಿ ಕ್ಯಾಂಪಸ್ಸಿನಲ್ಲಿ ನಡೀತು ಬೀಫ್ ಫೆಸ್ಟ್!]

ಕೇಂದ್ರದ ನೀತಿಯನ್ನು ವಿರೋಧಿಸಿ, ಭಾನುವಾರ (ಮೇ 28) ರಾತ್ರಿ ಐಐಟಿ ಕ್ಯಾಂಪಸ್ಸಿನಲ್ಲಿ ಪ್ರೊಗ್ರೆಸಿವ್ ಸ್ಟೂಡೆಂಟ್ಸ್ ಎಂಬ ಸಂಘಟನೆಗೆ ಸೇರಿದ ಸುಮಾರು 80 ವಿದ್ಯಾರ್ಥಿಗಳು ಬೀಫ್ ಫೆಸ್ಟ್ ಆಯೋಜಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+