ದವಸಧಾನ್ಯಗಳನ್ನು ಸ್ಯಾನಿಟೈಸ್ ಮಾಡುವುದು ಹೇಗೆ? ಇಲ್ಲಿದೆ ಪರಿಹಾರ

ನವದೆಹಲಿ, ಏಪ್ರಿಲ್ 9: ಎಲ್ಲೆಲ್ಲೂ ಕೊರೊನಾ ಭಯವೇ ಕಾಡುತ್ತಿದೆ. ನಿಮಗೆ ಕೊರೊನಾ ಬರದಂತೆ ತಡೆಯಲು ಮಾಸ್ಕ್, ಕೈಗವಸುಗಳನ್ನು ಧರಿಸುತ್ತೀರಿ, ಆದರೆ ದಿನಸಿ, ದವಸಧಾನ್ಯಗಳನ್ನು ರೋಗಾಣು ಮುಕ್ತ ಮಾಡುವುದು ಹೇಗೆ ಎಂಬುದರ ಕುರಿತು ಆಲೋಚನೆ ಮಾಡಿದ್ದೀರಾ..

ಕೊರೊನಾದಿಂದಾಗಿ ಪದೇ ಪದೇ ಸೋಪು ಅಥವಾ ಹ್ಯಾಂಡ್‌ವಾಶ್‌ಗಳಿಂದ ಕೈತೊಳೆದುಕೊಳ್ಳುತ್ತೇವೆ. ತರಕಾರಿ, ಹಣ್ಣುಗಳನ್ನು ಬಿಸಿನೀರಿನಿಂದ ತೊಳೆದು ಬಳಕೆ ಮಾಡುತ್ತೇವೆ ಹಾಗೆಯೇ ದವಸಧಾನ್ಯಗಳನ್ನು ಶುಚಿ ಮಾಡಲು ಕೂಡ ಐಐಟಿ ಡಿವೈಸ್‌ ಒಂದನ್ನು ತಯಾರು ಮಾಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಲ್ಟ್ರಾ ವೈಲೆಟ್ ಜೆರ್ಮಿಸೀಡಲ್ ಇರಾಡಿಯೇಷನ್ ಟೆಕ್ನಾಲಜಿಯನ್ನು ಕಂಡು ಹಿಡಿದಿದೆ.

ಟ್ರಂಕ್ ಗಾತ್ರದ ಸಾಧನವನ್ನು ಸಿದ್ಧಪಡಿಸಿದೆ. ಈ ಟ್ರಂಕ್‌ನಲ್ಲಿ ನೇರಳಾತೀತ ರೋಗಾಣುಹಾರಕ ಪ್ರದೀಪನ ತಂತ್ರಜ್ಞಾನವನ್ನು ಅಳವಡಿಸಿದೆ. ದೇಶದಲ್ಲಿ ಕೊರೊನಾ ವೈರಸ್‌ನಿಂದ 199 ಮಂದಿ ಮೃತಪಟ್ಟಿದ್ದಾರೆ, 6412 ಮಂದಿ ಸೋಂಕಿತರಿದ್ದಾರೆ.

ವೈರಾಣು, ಸೂಕ್ಮಾಣುಗಳಿಂದ ಮುಕ್ತವಾಗಲಿದೆ

ವೈರಾಣು, ಸೂಕ್ಮಾಣುಗಳಿಂದ ಮುಕ್ತವಾಗಲಿದೆ

ದವಸಧಾನ್ಯ , ನೋಟುಗಳು, ವಾಚ್ ಮತ್ತಿತರೆ ಸಾಧನಗಳನ್ನು ಈ ಟ್ರಂಕ್ ಗಾತ್ರದ ಸಾಧನದಲ್ಲಿ ಕೆಲ ಸೆಕೆಂಡುಗಳ ಕಾಲ ಇರಿಸುವುದರಿಂದ ಅವೆಲ್ಲವೂ ಎಲ್ಲಾ ಬಗೆಯ ವೈರಾಣು, ಸೂಕ್ಷ್ಮಾಣುಗಳಿಂದ ಮುಕ್ತವಾಗಲಿದೆ. ಹಾಗಾಗಿ ಮನೆಯೊಳಗೆ ಕೊವಿಡ್ 19 ನಂತ ಸೋಂಕುಗಳ ಪ್ರವೇಶವನ್ನು ತಡೆಯಬಹುದು.

ಸಾಧನವನ್ನು ಮನೆಯ ಬಾಗಿಲ ಬಳಿ ಅಳವಡಿಸಬಹುದು

ಸಾಧನವನ್ನು ಮನೆಯ ಬಾಗಿಲ ಬಳಿ ಅಳವಡಿಸಬಹುದು

ಟ್ರಂಕ್ ಗಾತ್ರದ ಈ ಸಾಧನವನ್ನು ಮನೆಗಳ ಬಾಗಿಲಿನಲ್ಲಿ ಅಳವಡಿಸಬಹುದು . ಪ್ರತಿಯೊಂದು ವಸ್ತುವನ್ನು ಇದರಲ್ಲಿ ಇರಿಸಿ, ವೈರಾಣು ಮತ್ತು ಸೂಕ್ಷ್ಮಾಣು ಮುಕ್ತಗೊಳಿಸಿ ಮನೆಯೊಳಗೆ ಕೊಂಡೊಯ್ಯಬಹುದು ಎಂದು ತಿಳಿಸಿದೆ.

ಸಾಧನದಲ್ಲಿ ಯಾವ್ಯಾವ ವಸ್ತುಗಳನ್ನಿಡಬಹುದು

ಸಾಧನದಲ್ಲಿ ಯಾವ್ಯಾವ ವಸ್ತುಗಳನ್ನಿಡಬಹುದು

ವಾಚ್‌, ಮೊಬೈಲ್, ಕರೆನ್ಸಿ ನೋಟುಗಳು, ಹಾಲಿನ ಪ್ಯಾಕೇಟ್‌ಗಳು, ತರಕಾರಿ, ದವಸಧಾನ್ಯಗಳನ್ನಿಡಬಹುದು ಕೆಲವೇ ನಿಮಿಷಗಳಲ್ಲಿ ಅವು ರೋಗಾಣುಗಳಿಂದ ಮುಕ್ತಿ ಹೊಂದುತ್ತವೆ.

500 ರೂಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

500 ರೂಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

ಈ ಸಾಧನವು ಕೇವಲ 500 ರೂ.ಗಳಲ್ಲಿ ಲಭ್ಯವಿದೆ. ಈ ವಸ್ತುಗಳನ್ನು ರೋಗಾಣುವಿನಿಂದ ಮುಕ್ತಗೊಳಿಸಲು ಸಾಧನಕ್ಕೆ 30 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಒಂದು ವಸ್ತುವನ್ನು ಶುಚಿಗೊಳಿಸಲು 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+