ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ICSE Class 10 ಪರೀಕ್ಷಾ ಫಲಿತಾಂಶ 2022: 4 ವಿದ್ಯಾರ್ಥಿಗಳಿಗೆ ಶೇ 99.8 ಅಂಕ

|
Google Oneindia Kannada News

ನವದೆಹಲಿ, ಜುಲೈ 17: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) 10 ನೇ ತರಗತಿಯ ಇಂಡಿಯನ್ ಸರ್ಟಿಫಿಕೇಟ್ ಆಫ್ ಸ್ಕೂಲ್ ಎಕ್ಸಾಮ್ (ICSE) ಫಲಿತಾಂಶವನ್ನು ಜುಲೈ 17ರಂದು ಸಂಜೆ 5 ಗಂಟೆಗೆ ಪ್ರಕಟಿಸಿದೆ. ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್ - cisce.org ನಲ್ಲಿ ಶೀಘ್ರದಲ್ಲೇ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆಯಾಗಲಿದೆ.

ICSE 10ನೇ ತರಗತಿ ಬೋರ್ಡ್ ಫಲಿತಾಂಶಗಳು 2022ರ ಪ್ರಕಾರ 4 ವಿದ್ಯಾರ್ಥಿಗಳು ಶೇಕಡಾ 99.8 ಅಂಕಗಳೊಂದಿಗೆ ಉನ್ನತ ಶ್ರೇಣಿಯನ್ನು ಹಂಚಿಕೊಂಡಿದ್ದಾರೆ, 34 ಮಂದಿ ಶೇಕಡಾ 99.6 ರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ICSE ಬೋರ್ಡ್ 2020 ಮತ್ತು 2021 ರಲ್ಲಿ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ. 2020ರಲ್ಲಿ 2,15,036 ವಿದ್ಯಾರ್ಥಿಗಳಲ್ಲಿ, ಒಟ್ಟು 2,06,525 ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. 2021ರಲ್ಲಿ, ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇ 99.98 ರಷ್ಟಿತ್ತು.

ICSE 10ನೇ ತರಗತಿಯ ಫಲಿತಾಂಶಗಳು 2019ರಲ್ಲಿ ಜೂಹಿ ರೂಪೇಶ್ ಕಜಾರಿಯಾ ಮತ್ತು ಮುಕ್ತಸರ್‌ನ ಮನ್ಹರ್ ಬನ್ಸಾಲ್ ಅವರು ಶೇ 99.60 ರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ICSE Class 10 Result 2022 declared; 4 students share top rank with 99.8% marks

ICSE ಬೋರ್ಡ್ ಕಾರ್ಯದರ್ಶಿ ಗೆರ್ರಿ ಅರಾಥೂನ್ ಪ್ರತಿಕ್ರಿಯಿಸಿ, ICSE 10ನೇ ತರಗತಿಯ ಫಲಿತಾಂಶಗಳು 2022ವನ್ನು ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಅಂಕಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಅಂತಿಮ ಸ್ಕೋರ್‌ನಲ್ಲಿ ಎರಡೂ ಸೆಮಿಸ್ಟರ್‌ಗಳು ಸಮಾನ ತೂಕವನ್ನು ಹೊಂದಿವೆ'' ಎಂದಿದ್ದಾರೆ.

ಮಂಡಳಿಯ ಕಾರ್ಯದರ್ಶಿ ಮಾತನಾಡಿ, ''ಪ್ರತಿಯೊಂದು ವಿಷಯಗಳು ಮತ್ತು ಪತ್ರಿಕೆಗಳಲ್ಲಿ ಅಂತಿಮ ಅಂಕಗಳನ್ನು ತಲುಪಲು ಸೆಮಿಸ್ಟರ್ 1, ಸೆಮಿಸ್ಟರ್ 2 ಮತ್ತು ಪ್ರಾಜೆಕ್ಟ್ (ಆಂತರಿಕ ಮೌಲ್ಯಮಾಪನ) ಅಂಕಗಳನ್ನು ಸೇರಿಸಲಾಗಿದೆ'' ಎಂದು ಹೇಳಿದರು.

ICSE ಸೆಮಿಸ್ಟರ್ 2 ರ ಪರೀಕ್ಷೆಗಳು ಏಪ್ರಿಲ್ 25, 2022 ರಂದು ನಡೆಸಲಾಗಿತ್ತು. ಫಲಿತಾಂಶಗಳನ್ನು ಮೊದಲು ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಕಳುಹಿಸಲಾಗಿದೆ. ನಿಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಅದನ್ನು ನಿಮ್ಮ ಶಾಲೆಗಳಿಂದ ನೇರವಾಗಿ ಪರಿಶೀಲಿಸಬಹುದು.

ವಿದ್ಯಾರ್ಥಿಗಳು ICSE 10 ನೇ ತರಗತಿ ಫಲಿತಾಂಶ 2022 ಅನ್ನು ಮೊಬೈಲ್‌ನಲ್ಲಿ ಪರಿಶೀಲಿಸಬಹುದು. ಇದಕ್ಕಾಗಿ, ನೀವು ನಿಮ್ಮ ಯೂನಿಕ್ ಐಡಿಯನ್ನು 09248082883 ಗೆ ಕಳುಹಿಸಬಹುದು.

ICSE, ISC ಸೆಮಿಸ್ಟರ್ 2 ಫಲಿತಾಂಶಗಳು 2022 ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ

  • ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ - results.cisce.org ಮತ್ತು cisce.org
  • ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ICSE/ ISC ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಯೂನಿಕ್ ಐಡಿ, ನಿಮ್ಮ index ಸಂಖ್ಯೆ ಮತ್ತು ಇತರ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ
  • ನೀವು ಈಗ ICSE, ISC ಸೆಮಿಸ್ಟರ್ 2 ಫಲಿತಾಂಶಗಳು ಪರದೆಯ ಮೇಲೆ ಕಾಣಿಸಿಕೊಳ್ಳುವುದನ್ನು ನೋಡುತ್ತೀರಿ
  • ICSE, ISC ಸೆಮಿಸ್ಟರ್ 2 ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಿ.
  • ಭವಿಷ್ಯದಲ್ಲಿ ನಿಮಗೆ ಅಗತ್ಯವಿರುವಂತೆ ಫಲಿತಾಂಶದ ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ
  • ನೇರ ಲಿಂಕ್ - cisceresults.trafficmanager.net/

CISCE 2023 ರ ಶೈಕ್ಷಣಿಕ ವರ್ಷದ ಕೊನೆಯಲ್ಲಿ ICSE ತರಗತಿ 10 ಮತ್ತು ISC 12 ನೇ ತರಗತಿಗೆ ಕೇವಲ ಒಂದು ಪರೀಕ್ಷೆಯನ್ನು ನಡೆಸುತ್ತದೆ. ಇದಲ್ಲದೆ, ಕೌನ್ಸಿಲ್ ವಾರ್ಷಿಕ ಪರೀಕ್ಷೆಯನ್ನು ಫೆಬ್ರವರಿ ಮತ್ತು ಮಾರ್ಚ್, 2023 ರಲ್ಲಿ ನಡೆಸಲು ಪ್ರಸ್ತಾಪಿಸಿದೆ.

English summary
The Council for the Indian School Certificate Examinations (CISCE) has declared the result for the Indian Certificate of School Exam (ICSE) for Class 10 today at 5 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X