ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ಎಂಇಗಳಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಆಪ್: ಐಸಿಐಸಿಐನಿಂದ ಹೊಸ ಇನ್‌ಸ್ಟಾಬಿಜ್ ಆಪ್ ಬಿಡುಗಡೆ

Google Oneindia Kannada News

Recommended Video

ಎಂಎಸ್ಎಂಇಗಳಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಆಪ್: ಐಸಿಐಸಿಐನಿಂದ ಹೊಸ ಇನ್‌ಸ್ಟಾಬಿಜ್ ಆಪ್ ಬಿಡುಗಡೆ

ದೇಶದ ಖಾಸಗಿ ವಲಯದ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಇದು ವಿಶೇಷವಾಗಿ ಎಂಎಸ್ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಮತ್ತು ಸ್ವಯಂ ಉದ್ಯೋಗಿ ಗ್ರಾಹಕರಿಗೆ ಬ್ಯಾಂಕಿಂಗ್ ವಹಿವಾಟುಗಳನ್ನು ಡಿಜಿಟಲ್ ಮತ್ತು ತ್ವರಿತವಾಗಿ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಐಸಿಐಸಿಐ ತನ್ನ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು'ಇನ್‌ಸ್ಟಾಬಿಜ್' (InstaBIZ)ಎಂದು ಹೆಸರಿಸಿದೆ. ಹೆಸರೇ ಸೂಚಿಸುವಂತೆ ಇದು ತ್ವರಿತವಾಗಿ(instatnt) ಕಾರ್ಯನಿರ್ವಹಿಸಲಿದೆ. ಗ್ರಾಹಕರು ತಮ್ಮ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 115 ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು ಸೇವೆಗಳನ್ನು ಡಿಜಿಟಲ್ ಮತ್ತು ಸುರಕ್ಷಿತ ರೀತಿಯಲ್ಲಿ ಪಡೆಯಬಹುದಾಗಿದೆ. ಇನ್‌ಸ್ಟಾಬಿಜ್ ಒದಗಿಸುತ್ತಿರುವ ಹಲವಾರು ಸೇವೆಗಳು ಉದ್ಯಮದಲ್ಲಿ ಮೊದಲಿಗವಾಗಿದಲ್ಲದೆ ತಕ್ಷಣದಲ್ಲಿ ಲಭ್ಯವಿವೆ. ಇದರೊಂದಿಗೆ, ಎಂಎಸ್‌ಎಂಇಗಳು ವರ್ಧಿತ ಅನುಕೂಲತೆ ಮತ್ತು ಉತ್ಪಾದಕತೆಯನ್ನು ಆನಂದಿಸಬಹುದು. ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ಪ್ರಯಾಣದಲ್ಲಿರುವಾಗದಲ್ಲೇ ಪೂರ್ಣಗೊಳಿಸಬಹುದು!

ICICI launches ‘InstaBIZ’, India’s first most comprehensive digital banking platform for MSMEs

ಇದು ವ್ಯವಹಾರಗಳಿಗಾಗಿ ಸಮಗ್ರ ಡಿಜಿಟಲ್ ಪ್ಲಾಟ್‌ಫಾರ್ಮ್ ಸೇವೆಗಳ ಅನುಕೂಲತೆಯನ್ನು ಸಂಪೂರ್ಣವಾಗಿ ಡಿಜಿಟಲ್ ರೀತಿಯಲ್ಲಿ ಒದಗಿಸುತ್ತದೆ. ಅಲ್ಲದೇ ತ್ವರಿತ ಓವರ್‌ಡ್ರಾಫ್ಟ್ ಸೌಲಭ್ಯ (15 ಲಕ್ಷ ರೂ.ವರೆಗೆ) ನಡೆಸಬಹುದು. ಬಿಸಿನೆಸ್ ಲೋನ್, ಸುಲಭವಾದ ಬೃಹತ್ ಸಂಗ್ರಹ, ಬಹು ಡಿಜಿಟಲ್ ವಿಧಾನಗಳ ಮೂಲಕ ಫಂಡ್ ಪಾವತಿ, ಸ್ವಯಂಚಾಲಿತ ಬ್ಯಾಂಕಿಂಗ್ ಮತ್ತು ಇತರ ಒಳ ಮತ್ತು ಹೊರಗಿನ ಹಣ ರವಾನೆಯಂತಹ ರಫ್ತು-ಆಮದು ವಹಿವಾಟುಗಳನ್ನು ಕೈಗೊಳ್ಳಬಹುದು.
ಇದಲ್ಲದೆ, ಚಲನ್ ಸಂಖ್ಯೆಯನ್ನು ಬಳಸಿಕೊಂಡು ಜಿಎಸ್ಟಿ ತ್ವರಿತ ಪೇಮೆಂಟ್ ಅನ್ನು ಸಕ್ರಿಯಗೊಳಿಸಿದ ಮೊದಲ ಡಿಜಿಟಲ್ ಬ್ಯಾಂಕಿಂಗ್ ವೇದಿಕೆಯಾಗಿದೆ. ಪಾಯಿಂಟ್-ಆಫ್-ಸೇಲ್ (ಪಿಒಎಸ್) ಯಂತ್ರ ಮತ್ತು ತ್ವರಿತ ವಿಮಾ ಪಾಲಿಸಿ ಸೇವೆಗಳಿಗೂ ಇನ್‌ಸ್ಟಾಬಿಜ್ ಸೂಕ್ತವಾಗಿದೆ. ಬ್ಯಾಂಕ್ ಗ್ರಾಹಕರಲ್ಲದ ಎಂಎಸ್‌ಎಂಇಗಳು 'ಇನ್‌ಸ್ಟಾಬಿಜ್' ಅನ್ನು ಡೌನ್‌ಲೋಡ್ ಮಾಡಿಕೊಂಡು, ಹಲವಾರು ಸೇವೆಗಳ ಅನುಕೂಲವನ್ನು ಆನಂದಿಸಬಹುದು.
ಪ್ರಮುಖವಾಗಿ, ಗ್ರಾಹಕರು ತಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಕೆವೈಸಿ ವಿವರಗಳನ್ನು ಅಪ್‌ಲೋಡ್ ಮಾಡುವ ಮೂಲಕ ರೂ. 10 ಲಕ್ಷದವರೆಗೆ ಓವರ್‌ಡ್ರಾಫ್ಟ್ ಸೌಲಭ್ಯದ ತ್ವರಿತ ಸೇವೆಯನ್ನು ಪಡೆಯಬಹುದು. ಚಾಲ್ತಿ ಖಾತೆಗೆ ಅರ್ಜಿ ಸಲ್ಲಿಸಬಹುದು ಮತ್ತು ಖಾತೆ ಸಂಖ್ಯೆಯನ್ನು ಕಸ್ಟಮೈಸ್ ಮಾಡಬಹುದು. ಅದನ್ನು ತಕ್ಷಣದಲ್ಲೇ ಡಿಸ್ಪ್ಲೆ ಮಾಡಲಾಗುತ್ತದೆ. ಮೇಲಿನ ಎಲ್ಲಾ ಡಿಜಿಟಲ್ ಸೇವೆಗಳ ಮೂಲಕ, ಇನ್‌ಸ್ಟಾಬಿಜ್ ದೇಶದ ಅತ್ಯಂತ ವಿಸ್ತಾರವಾದ ಮತ್ತು ಏಕೈಕ ಡಿಜಿಟಲ್ ಬ್ಯಾಂಕಿಂಗ್ ವೇದಿಕೆಯಾಗಿದೆ. ಅಲ್ಲದೇ ಜಾಗತಿಕವಾಗಿ ಸ್ವಯಂ ಉದ್ಯೋಗಿ ಮತ್ತು ಎಂಎಸ್‌ಎಂಇ ಗ್ರಾಹಕರಿಗೆ 'ಒಂದೇ ಸ್ಥಳದಲ್ಲಿ' ಸಮಗ್ರ ಸೇವೆಗಳನ್ನು/ಪರಿಹಾರಗಳನ್ನು ಒದಗಿಸುವ ಪುಷ್ಪಗುಚ್ಚವಾಗಿದೆ. ಭಾರತದಲ್ಲಿ ಎಂಎಸ್‌ಎಂಇ ಮತ್ತು ಸ್ವ-ಉದ್ಯೋಗ ವಿಭಾಗವು ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದು, ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಸ್ವಯಂ ಉದ್ಯೋಗಿ ವಿಭಾಗದ ಮುಖ್ಯಸ್ಥ ಪಂಕಜ್ ಗಾಡ್ಗಿಳ್ ಹೇಳಿದ್ದಾರೆ.
ವ್ಯಾಪಾರ ಮಾಡುವ ಮತ್ತು ಡಿಜಿಟಲೀಕರಣ ಎಂಎಸ್‌ಎಂಇ ವ್ಯವಹಾರಗಳ ಬೆಳವಣಿಗೆಗೆ ಪ್ರಮುಖ ನಿಯತಾಂಕಗಳಾಗಿವೆ ಎಂದು ನಾವು ನಂಬುತ್ತೇವೆ. ಈ ಪ್ರಯತ್ನಕ್ಕಾಗಿ ದೇಶದ ಮೊದಲ ಡಿಜಿಟಲ್ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಬಿಜ್' ಅನ್ನು ಮೊಬೈಲ್ ಆಪ್ ಮತ್ತು ವೆಬ್ ಪೋರ್ಟಲ್ ಆಗಿ ನಾವು ಪ್ರಾರಂಭಿಸಿದ್ದೇವೆ. ವಹಿವಾಟಿನ ಡಿಜಿಟಲೀಕರಣದ ಅವಶ್ಯಕತೆಗಳ ಬಗ್ಗೆ ದೀರ್ಘ ಮತ್ತು ವ್ಯಾಪಕವಾದ ಸಂಶೋಧನೆಯ ಫಲವಾಗಿ 'ಇನ್ಸ್ಟಾಬಿಜ್' ದೇಶದ ಬ್ಯಾಂಕುಗಳಲ್ಲಿ ಲಭ್ಯವಿರುವ ಅತ್ಯಂತ ವ್ಯಾಪಕವಾದ ಡಿಜಿಟಲ್ ಪ್ಲಾಟ್‌ಫಾರ್ಮ್ ಎಂದು ನಾವು ನಂಬುತ್ತೇವೆ ಎಂದು ಗ್ಯಾಡ್ಗಿಲ್ ಹೇಳಿದ್ದಾರೆ.
ಒನ್ ಸಿಂಗಲ್ ಡಿಜಿಟಲ್ (one single digital) ಪ್ಲಾಟ್‌ಫಾರ್ಮ್‌ನಲ್ಲಿ ಆಗಿರುವ ಇನ್‌ಸ್ಟಾಬಿಜ್ ಸುಮಾರು 115 ಸೇವೆಗಳನ್ನು-ಬ್ಯಾಂಕಿಂಗ್ ವಹಿವಾಟುಗಳನ್ನು ಕೈಗೊಳ್ಳಲು ಇದು ಅವಕಾಶ ನೀಡುತ್ತದೆ. ವಹಿವಾಟುಗಳಿಗಾಗಿ ಶಾಖೆಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಬ್ಯಾಂಕಿನ ಗ್ರಾಹಕರಲ್ಲದವರಿಗೂ ತ್ವರಿತ ತೆರಿಗೆ ಪಾವತಿ ಹಾಗು ಇನ್ನಿತರ ಸೇವೆಗಳನ್ನು ಒದಗಿಸುತ್ತದೆ. ಇನ್‌ಸ್ಟಾಬಿಜ್ ಡಿಜಿಟಲ್ ಪ್ಲಾಟ್‌ಫಾರ್ಮ್ ಸೇವೆಯು ಎಂಎಸ್‌ಎಂಇಗಳಿಗೆ ಸುಲಭವಾದ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಕಾಗದ ಬಳಕೆಯಿಂದ ಮುಕ್ತಗೊಳಿಸುತ್ತದೆ. ಒಟ್ಟಾರೆ ಉತ್ಪಾದಕತೆ ಮತ್ತು ದಕ್ಷತೆಯನ್ನು ಸುಧಾರಿಸುವ ಮೂಲಕ ಗ್ರಾಹಕರ ವ್ಯವಹಾರದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ICICI launches ‘InstaBIZ’, India’s first most comprehensive digital banking platform for MSMEs

'ಇನ್‌ಸ್ಟಾಬಿಜ್' ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಇತರ ವೈಶಿಷ್ಟ್ಯಗಳು:
- ಒಂದು ವ್ಯೂ ಡ್ಯಾಶ್‌ಬೋರ್ಡ್ ಮತ್ತು ಬ್ಯಾಂಕ್ ಖಾತೆಯ ಸ್ವಯಂಚಾಲಿತ ಹೊಂದಾಣಿಕೆ.
- ಎಂಎಸ್‌ಎಂಇಗಳಿಗೆ ಈ ಅಪ್ಲಿಕೇಶನ್ ಮಾರಾಟದ ಸಂಪೂರ್ಣ ಅವಲೋಕನ ಒದಗಿಸುತ್ತದೆ, ಲಭ್ಯವಿರುವ ನಗದು, ಪಾವತಿಸಿದ ಬಿಲ್‌ಗಳು, ಸಂಗ್ರಹಿಸಿದ ಇನ್‌ವಾಯ್ಸ್‌ಗಳನ್ನು ಒದಗಿಸುತ್ತದೆ. ಇದರಿಂದಾಗಿ 24x7 ಅನುಕೂಲಕರ ಮತ್ತು ಸಮಯೋಚಿತ ವ್ಯವಹಾರ ನಿರ್ಧಾರವನ್ನು ಸಕ್ರಿಯಗೊಳಿಸುತ್ತದೆ. ವೇದಿಕೆ ಮೂಲಕ ತ್ವರಿತವಾಗಿ ಇನ್‌ವಾಯ್ಸ್‌, ಪೇಮೆಂಟ್ ಮತ್ತು ಸಂಗ್ರಹಗಳನ್ನು ಮಾಡಲು ಶಕ್ಯವಾಗುತ್ತದೆ.

ಬಹು ಉದ್ಯೋಗಿಗಳಿಗೆ ಅವಕಾಶ:
ಕೆಲಸದ ಅವಶ್ಯಕತೆಗಳಿಗೆ ಅನುಗುಣವಾಗಿ ಹಣಕಾಸಿನ ವಹಿವಾಟು ಮಿತಿಗಳೊಂದಿಗೆ ಅನೇಕ ಉದ್ಯೋಗಿಗಳಿಗೆ ಸೇವೆ ಒದಗಿಸಲು ಇನ್‌ಸ್ಟಾಬಿಜ್ ಎಂಎಸ್‌ಎಂಇಗಳನ್ನು ಅನುಮತಿಸುತ್ತದೆ. ಇದು ಅನುಕೂಲಕರವಾಗಿ ಮತ್ತು ಸುರಕ್ಷಿತವಾಗಿ ನಿರ್ದಿಷ್ಟ ವಹಿವಾಟುಗಳನ್ನು ಕೈಗೊಳ್ಳಲು ಶಕ್ತಗೊಳಿಸುತ್ತದೆ.

ನೆಟ್‌ವರ್ಕಿಂಗ್ ಮತ್ತು ವ್ಯವಹಾರ ಪ್ರಚಾರ:
ವ್ಯಾಪಾರಿಗಳು ಇನ್ ಬಿಲ್ಟ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಬಳಸಿಕೊಂಡು ತಮ್ಮ ಬೆಳವಣಿಗೆಯನ್ನು ಹೆಚ್ಚಿಸಬಹುದು. ವಿಶೇಷವಾಗಿ ಇನ್‌ಸ್ಟಾಬಿಜ್ ಪ್ಲಾಟ್‌ಫಾರ್ಮ್ ಅನ್ನು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗಾಗಿ ಮಾಡಲಾಗಿದ್ದು, ಉದ್ಯಮಿಗಳನ್ನು ಸಂಬಂಧಿತ ವ್ಯಾಪಾರ ಅವಕಾಶಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಇದನ್ನು ಗ್ಲೋಬಲ್ ಲಿಂಕರ್ ನಡೆಸುತ್ತಿದೆ.
ಗ್ರಾಹಕರು 'ಇನ್‌ಸ್ಟಾಬಿಜ್' ಪ್ಲಾಟ್‌ಫಾರ್ಮ್ ಮೂಲಕ ಪ್ರಮೋಷನ್ ಗಳನ್ನು ಮಾಡಬಹುದು. ಜೊತೆಗೆ ಪ್ರಚಾರಕ್ಕಾಗಿ ಸಂಬಂಧಿತ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ನೋಟಿಫಿಕೆಶನ್ ಗಳನ್ನು ಕಳುಹಿಸಬಹುದು. ಗೂಗಲ್ ಪ್ಲೇ ಸ್ಟೋರ್‌ನಿಂದ 'InstaBIZ' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದು ಶೀಘ್ರದಲ್ಲೇ ಆಪಲ್ ಆಪ್ ಸ್ಟೋರ್‌ನಲ್ಲಿಯೂ (Apple App Store) ಲಭ್ಯವಾಗಲಿದೆ. ಐಸಿಐಸಿಐ ಬ್ಯಾಂಕಿನ 'ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್' ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡುವ ಮೂಲಕ ಕೂಡ ಇನ್‌ಸ್ಟಾಬಿಜ್ ಅನ್ನು ಪ್ರವೇಶಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X