ಡೂನ್ ಪುಸ್ತಕ ಉತ್ಸವದಲ್ಲಿ ಗರ್ವಾಲಿ- ಕುಮಾವೋನಿ ಸಾಹಿತ್ಯಕ್ಕೆ ಒತ್ತು: 26 ಕೃತಿಗಳ ಬಿಡುಗಡೆ

ಉತ್ತರಾಖಂಡ: ಸಾಹಿತ್ಯ ಮತ್ತು ಸಂಸ್ಕೃತಿಯ ಆಚರಣೆಯ ಭಾಗವಾರುವ 'ಡೂನ್ ಪುಸ್ತಕ ಉತ್ಸವ 2026' ಉತ್ತರಾಖಂಡಿನ ಐತಿಹಾಸಿಕ ಪೆರೇಡ್ ಮೈದಾನದಲ್ಲಿ ಆರಂಭವಾಗಿದೆ. ಈ ಸಾಹಿತ್ಯ ಉತ್ಸವದಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ (NBT) ಗರ್ವಾಲಿ ಮತ್ತು ಕುಮಾವೋನಿವು ತಲಾ 13ರಂತೆ ಒಟ್ಟು 26 ಹೊಸ ಹೊತ್ತಿಗೆಗಳನ್ನು (ಕೃತಿ) ಬಿಡುಗಡೆ ಮಾಡಿವೆ. ಇಂದಿನ ಉತ್ಸವ, ಅನಾವರಣಗೊಂದ ಕೃತಿಗಳು ಉತ್ತರಾಖಂಡದ ಶ್ರೀಮಂತ ಭಾಷಾ ಪರಂಪರೆಯನ್ನು ಸಾರಿ ಹೇಳುತ್ತವೆ.

ಉತ್ಸವವು ಡೆಹ್ರಾಡೂನ್‌ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಾಹಿತ್ಯ ಕೇಂದ್ರವನ್ನು ಪ್ರತಿಬಿಂಬಿಸುವಂತಿದೆ. ಸದರಿ ಉತ್ಸವದಲ್ಲಿ ಭಾರತದಾದ್ಯಂತ ಎಲ್ಲ ಪ್ರಕಾಶಕರಿಂದ 300 ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿಗೆ ಅವಕಾಶ ಮಾಡಕೊಡಲಾಗಿತ್ತು. ಮಕ್ಕಳಿಗಾಗಿ ವೈವಿಧ್ಯಮಯ ಪ್ರದರ್ಶನಗಳು ನಡೆದವು. ಶೈಕ್ಷಣಿಕ ದೈನಂದಿನ ಕಲಿಕಾ ಚಟುವಟಿಕೆಗಳಂತೆ ಕಂಡು ಬಂತು.

Doon Book Festival 2026

ಕಳೆದ ವಾರ ಏಪ್ರಿಲ್ 4 ರಂದು ಉತ್ಸವವನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉದ್ಘಾಟಿಸಿದರು. ಅವರೊಂದಿಗೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಇತರ ಗಣ್ಯರು ಗರ್ವಾಲಿ ಮತ್ತು ಕುಮಾವೋನಿ ಕೃತಿಗಳನ್ನು ಜಗತ್ತಿಗೆ ಅನಾವರಣಗೊಳಿಸಿದರು. ಬಿಡುಗಡೆಗೊಂಡ ಪುಸ್ತಕಗಳು ಉತ್ತರಾಖಂಡ ರಾಜ್ಯದ ಅನೇಕ ಬರಹಗಾರರು, ಅನುವಾದಕರು ಮತ್ತು ಭಾಷಾ ತಜ್ಞರನ್ನು ಒಟ್ಟುಗೂಡಿಸಿದ ಎನ್‌ಬಿಟಿ ಉಪಕ್ರಮದ ಫಲಿತಾಂಶವಾಗಿದೆ.

ಹಿಂದಿನ ವರ್ಷದ (2025) ವಿಶೇಷ ಕಾರ್ಯಾಗಾರವನ್ನು ಆಧರಿಸಿ ಸಾಹಿತ್ಯಾಸಕ್ತ ಮಕ್ಕಳ ಪ್ರಮುಖ ಸಾಹಿತ್ಯ ಕೃತಿಗಳನ್ನು ಗರ್ವಾಲಿ ಮತ್ತು ಕುಮೌನಿ ಭಾಷೆಗಳಿಗೆ ಅನುವಾದಿಸಿದ್ದಾರೆ. ಅದೆಲ್ಲವು ಉತ್ಸವದಲ್ಲಿ ಪಾಲ್ಗೊಂಡವರನ್ನು ಆಕರ್ಷಿಸಿತು. ಸ್ಥಳೀಯ ಭಾಷೆಗಳು ರಾಜ್ಯದ ಸಾಂಸ್ಕೃತಿಕ, ಸಾಹಿತ್ಯದ ಅವಿಭಾಜ್ಯ ಅಂಗವಾಗಿವೆ. ಇಂತಹ ಕಾರ್ಯಕ್ರಮಗಳಿಂದ ಮಾತೃಭಾಷೆಗಳಲ್ಲಿ ಉತ್ತಮ ಕೃತಿಗಳನ್ನು ಸಾಹಿತ್ಯಾಸಕ್ತರಿಗೆ ಒದಗಿಸಲಾಗುತ್ತದೆ.

ಬಿಡುಗಡೆಯಾದ ಗರ್ವಾಲಿ ಭಾಷೆಯ ಕೃತಿಗಳಲ್ಲಿ 'ಚೌರಿ-ಚೌರಾ ಜನ್ ಕ್ರಾಂತಿ ಕೊ ನಯೋ ಸಬೆರೊ, ನನ್ನ ಹೈರಾ ಚಖುಲಾ, ಉಮ್ಮೀದೈ ಕಿರಣ್, ಗೈರಾ ಸಾಗರ ಅಜೂಬಾ ಮತ್ತು ಆದ್ಮಿ ಅರ್ ಛೈಲ್ ಅರ್ ಹೌರಿ ಕಹಾನಿ ಸೇರಿವೆ. ಕುಮೌನಿ ಶೀರ್ಷಿಕೆಗಳಲ್ಲಿ ಮಾತಿ ಮೈರ್ ದೇಶೆ ಕಿ, ಅಭಿಮಾನೈ ಹಾರ್, ಬಧನೈ ಜಾನಿ ಕಾನ್, ಖಾಟು ಶ್ಯಾಮಕ್ ಅನ್ಸುನಿ ಕಹಾನಿ ಮತ್ತು ಗುಲಾಬ್ ಕಾ ದಗ್ದು' ಕೃತಿಗಳು ಇವೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಜೊತೆ ಹೊಂದಾಣಿಕೆ

ಕಲಿಕೆ ದೃಷ್ಟಿಯಿಂದ ಸ್ಥಳೀಯ ಭಾಷೆಗಳಿಗೆ ಒತ್ತು ಕೊಡುವ ಉಪಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ದೃಷ್ಟಿಕೋನಕ್ಕೆ ಪೂರಕವಾಗಿದೆ. ಬಹುಭಾಷೆಗಳಲ್ಲಿ ಶಿಕ್ಷಣ ಕಲಿಸುತ್ತದೆ. ಅದರಲ್ಲೂ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡುತ್ತದೆ. ಔಪಚಾರಿಕವಾಗಿ ಶಿಕ್ಷಣದಲ್ಲಿ ಬಳಸುವ ಭಾಷೆಗಳ ಮಧ್ಯೆದ ಅಂತರ ಕಡಿಮೆ ಮಾಡುತ್ತದೆ. ಆರಂಭಿಕ ಸಾಕ್ಷರತೆ ಬಲಪಡಿಸುತ್ತದೆ ಎಂದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ಡೂನ್ ಲಿಟ್ ಫೆಸ್ಟ್

ಗುರುವಾರ ಪುಸ್ತಕ ಬಿಡುಗಡೆ ಆಗಿದ್ದು, ಅದಕ್ಕೆ ಪೂರಕವೆಂಬಂತೆ ಕಳೆದ ಏಪ್ರಿಲ್ 5 ರಂದು 'ಡೂನ್ ಲಿಟ್ ಫೆಸ್ಟ್' ಕಾರ್ಯಕ್ರಮ ಆರಂಭಿಸಲಾಗಿದೆ. ಇದರಲ್ಲಿ ಸಂವಾದ ಮತ್ತು ವಿಚಾರ ವಿನಿಮಯಕ್ಕೆ ಕ್ರಿಯಾತ್ಮಕತೆಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ನಿತಿನ್ ಸೇಠ್, ಕುಲಪ್ರೀತ್ ಯಾದವ್, ಅಖಿಲೇಂದ್ರ ಮಿಶ್ರಾ, ಆಚಾರ್ಯ ಪ್ರಶಾಂತ್, ಶುಭಾಂಶು ಶುಕ್ಲಾ ಮತ್ತು ಸತೀಶ್ ದುವಾ ಸೇರಿ ವಿವಿಧ ಭಾಷಣಕಾರು ಪಾಲ್ಗೊಂಡಿದ್ದರು.

ಉತ್ಸವದಲ್ಲಿ ಸಿನೆಮಾ ಮತ್ತು ಸಮಕಾಲೀನ ಸಾಹಿತ್ಯದಿಂದ ನಾಯಕತ್ವ, ದೇಶಭಕ್ತಿ ಮತ್ತು ವಿಕಸನಗೊಳ್ಳುತ್ತಿರುವ ಮಾನವ-ಯಂತ್ರ ಸಂಬಂಧಗಳವರೆಗೆ ಅನೇಕ ವಿಷಯಗಳ ಕುರಿತು ಚರ್ಚೆ ಆಯಿತು. ಮಾಹಿತಿಗಳು ವಿಚಾರ ವಿನಿಮಯಗೊಂಡವು. ಪುಸ್ತಕಗಳು, ಸಂಭಾಷಣೆಗಳು ಮತ್ತು ಸಂಸ್ಕೃತಿಗಳು ಒಂದಾಗುತ್ತಿದ್ದಂತೆ, ಡೂನ್ ಪುಸ್ತಕ ಉತ್ಸವವು ಭಾರತದ ಬಹುಭಾಷಾ ಸಾಹಿತ್ಯ ಪರಂಪರೆ ಬೆಳವಣಿಗೆಗೆ ಸಹಕಾಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+