Get Updates
Get notified of breaking news, exclusive insights, and must-see stories!

US-Israel Iran War: ಇರಾನ್ - ಅಮೆರಿಕ ಕದನ ವಿರಾಮಕ್ಕೆ ಇಸ್ರೇಲ್ ಅಡ್ಡಗಾಲು: ಲೆಬನಾನ್‌ನಲ್ಲಿ ಮಕ್ಕಳು ಸೇರಿ 250 ಜನ ಬಲಿ

US-Israel Iran War: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ - ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎರಡು ವಾರಗಳ ಕದನ ವಿರಾಮವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನದಲ್ಲಿ ನಾಳೆ ಏಪ್ರಿಲ್ 10ರ ಶುಕ್ರವಾರ ಇರಾನ್ ಮತ್ತು ಅಮೆರಿಕದ ನಡುವೆ ಶಾಶ್ವತ ಕದನ ವಿರಾಮ ಅಥವಾ ಶಾಂತಿ ಒಪ್ಪಂದ ಏರ್ಪಡಬೇಕಾಗಿತ್ತು. ಆದರೆ ಏಕಾಏಕಿ ಲೆಬನಾನ್‌ನ ಮೇಲೆ ಇಸ್ರೇಲ್ ಭಾರೀ ಬಾಂಬ್ ದಾಳಿ ನಡೆಸಿದೆ.

ಇದು ನಾಳೆ ನಡೆಯಲಿರುವ ಶಾಂತಿ ಒಪ್ಪಂದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಕದನ ವಿರಾಮಕ್ಕೆ ಇರಾನ್ ವಿಧಿಸಿದ್ದ 10 ಷರತ್ತುಗಳಲ್ಲಿ ಲೆಬನಾನ್‌ನ ಮೇಲೆ ದಾಳಿ ಮಾಡಬಾರದು ಎನ್ನುವುದು ಸಹ ಸೇರಿತ್ತು. ಆದರೆ ಇದೀಗ ಇಸ್ರೇಲ್ - ಲೆಬನಾನ್‌ ಮೇಲೆ ದಾಳಿ ಮಾಡಿರುವುದ ಹಿಂದೆ ಕದನವಿರಾಮಕ್ಕೆ ಇಸ್ರೇಲ್‌ಗೆ ಇಷ್ಟವಿಲ್ಲ. ಹೀಗಾಗಿಯೇ ಅದು ಲೆಬನಾನ್ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ.

US-Israel Iran War

ಇಸ್ರೇಲ್ ಲೆಬನಾನ್ ಮೇಲಿನ ದಾಳಿ ಖಂಡಿಸಿ ಇರಾನ್‌ ಮತ್ತೆ ಹಾರ್ಮಜ ಕೊಲ್ಲಿಯಲ್ಲಿ / ಹಾರ್ಮಜ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದೆ. ಏಪ್ರಿಲ್ 10ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂತಿ ಮಾತುಕತೆಗೆ ಇಸ್ರೇಲ್ ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ. ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಇರಾನ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದೆ. ಇದು ಅನುಮಾನಕ್ಕೆ ಕಾರಣವಾಗಿದೆ.

ಲೆಬನಾನ್‌ನಲ್ಲಿ ಯುದ್ಧವಿರಾಮದ ಹೊರತಾಗಿಯೂ ಇಸ್ರೇಲಿ ದಾಳಿಯಿಂದಾಗಿ 250 ಜನರ ಮೃತಪಟ್ಟಿದ್ದಾರೆ. ಇದರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಇಸ್ರೇಲ್ ದಾಳಿಯನ್ನು ಖಂಡಿಸಿ, ಲೆಬನಾನ್‌ನಲ್ಲಿ ರಾಷ್ಟ್ರೀಯ ಶೋಕಾಚರಣೆ ದಿನ ಘೋಷಣೆ ಮಾಡಲಾಗಿದೆ. ಲೆಬನಾನ್ ಮೇಲೆ ಇಸ್ರೇಲ್ ತನ್ನ ಅತ್ಯಂತ ಮಾರಕ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದ ನಂತರ ಪ್ರಾದೇಶಿಕ ಕದನ ವಿರಾಮ ವಿಚಾರವು ಗೊಂದಲಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಹೆಜ್ಬೊಲ್ಲಾ ಜೊತೆಗಿನ ಸಂಘರ್ಷ ಉಲ್ಬಣಗೊಂಡ ನಂತರದ ರಕ್ತಸಿಕ್ತ ದಿನ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಲೆಬನಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಬುಧವಾರದ ದಾಳಿಯಲ್ಲಿ ಕನಿಷ್ಠ 182 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ, ಹಿಂದಿನ ವರದಿಗಳು ಇತ್ತೀಚಿನ ಮಾಹಿತಿಯ ಪ್ರಕಾರ ಒಟ್ಟು ಸಾವಿನ ಸಂಖ್ಯೆ 250 ಕ್ಕಿಂತ ಹೆಚ್ಚಾಗಿದೆ. ರಾಜಧಾನಿ ಬೈರುತ್ ಸೇರಿದಂತೆ ಹಲವು ಸ್ಥಳಗಳಿಗೆ ಬಾಂಬ್‌ಗಳು ಅಪ್ಪಳಿಸಿದ್ದು, ಆಸ್ಪತ್ರೆಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಲೆಬನಾನ್ ರಾಷ್ಟ್ರೀಯ ಶೋಕಾಚರಣೆ ದಿನವನ್ನು ಘೋಷಿಸಿದೆ. ದೇಶದ ಧ್ವಜಗಳನ್ನು ಅರ್ಧಕ್ಕೆ ಇಳಿಸಲಾಯಿತು ಮತ್ತು ಸಾರ್ವಜನಿಕ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಇಸ್ರೇಲ್‌ನ ಕೊಲ್ಲುವ ಯಂತ್ರವನ್ನು ನಿಲ್ಲಿಸಲು ಹಾಗೂ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರವು ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಪ್ರಧಾನಿ ನವಾಫ್ ಸಲಾಮ್ ಅವರು ಹೇಳಿದ್ದಾರೆ.

US-Israel Iran War: ಇಸ್ರೇಲ್ ನಡೆಗೆ ಜಾಗತಿಕ ಆಕ್ರೋಶ

ಇನ್ನು ಲೆಬನಾನ್‌ನ ಮೇಲೆ ಇಸ್ರೇಲ್‌ ನಡೆಸಿರುವ ದಾಳಿಯನ್ನು ಜಾಗತಿಕವಾಗಿ ಹಲವು ದೇಶಗಳು ಖಂಡಿಸಿವೆ. ಈ ದಾಳಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಗೆ ಸಂಬಂಧಿಸಿರುವ ಹಾಗೂ ಈಗಾಗಲೇ ದುರ್ಬಲವಾಗಿರುವ ಕದನ ವಿರಾಮವನ್ನು ಕುಸಿಯುವ ಅಪಾಯವಿದೆ ಎಂದು ಹೇಳಲಾಗಿದೆ.

ಚೀನಾ ಸಂಯಮ ಕಾಪಾಡಿಕೊಳ್ಳುವಂತೆ ಒತ್ತಾಯಿಸಿದೆ. ಲೆಬನಾನ್‌ನ ಸಾರ್ವಭೌಮತ್ವವನ್ನು ಉಲ್ಲಂಘಿಸಬಾರದು ಎಂದು ಎಚ್ಚರಿಸಿದೆ ಮತ್ತು ನಾಗರಿಕ ಜೀವಗಳ ರಕ್ಷಣೆಗೆ ಕರೆ ನೀಡಿದೆ. ಪ್ರಾದೇಶಿಕ ಪರಿಸ್ಥಿತಿಯನ್ನು ಶಾಂತಿಯುತವಾಗಿ ಇರಿಸಬೇಕು ಎಂದೂ ಹೇಳಲಾಗಿದೆ. ವಿಶ್ವಸಂಸ್ಥೆಯು ಈ ದಾಳಿಗಳನ್ನು ಖಂಡಿಸಿದ್ದು, ನಾಗರಿಕರನ್ನು ಗುರಿಯಾಗಿಸಬಾರದು ಎಂದು ಹೇಳಿದೆ. ಜನನಿಬಿಡ ಪ್ರದೇಶಗಳಲ್ಲೇ ದಾಳಿ ಮಾಡಲಾಗಿದ್ದು, ಪರಿಸ್ಥಿತಿ ಹದಗೆಟ್ಟಿದೆ.

ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ

ಇನ್ನು ಇನ್ನೇನು ಮಧ್ಯಪ್ರಾಚ್ಯದಲ್ಲಿನ ಯುದ್ಧ ನಿಂತೇ ಹೋಗಲಿದೆ ಎನ್ನುವ ಸಂದರ್ಭದಲ್ಲಿಯೇ ಲೆಬನಾನ್‌ನ ಮೇಲೆ ಇಸ್ರೇಲ್ ತೀವ್ರ ದಾಳಿಯನ್ನು ನಡೆಸಿದೆ. ಇದರಿಂದ ಭಾರತದ ಮೇಲೆಯೂ ನೇರವಾದ ಪರಿಣಾಮ ಬೀರುವ ಸಾಧ್ಯತೆ ಇದೆ. ಇರಾನ್ - ಅಮೆರಿಕ, ಇಸ್ರೇಲ್‌ನ ನಡುವೆ ಶಾಂತಿ ಒಪ್ಪಂದ ಆಗದಿದ್ದಾರೆ. ಔಪಚಾರಿಕ ಒಪ್ಪಂದ ಇಲ್ಲದ ಕಾರಣ ಯುದ್ಧ ಮತ್ತೆ ಮುಂದುವರಿಯಲಿದೆ. ಅಮೆರಿಕ ಈ ಪ್ರದೇಶದಲ್ಲಿ ತಟಸ್ಥ ಸ್ಥಿತಿಗೆ ಬಂದರೂ ಇಸ್ರೇಲ್ ಸುಮ್ಮನಿರುವುದಿಲ್ಲ ಎನ್ನಲಾಗಿದ್ದು, ಇದರ ಪರಿಣಾಮ ಭಾರತವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಆಗಲಿದೆ. ಭಾರತ ಸೇರಿ ಇಡೀ ಜಗತ್ತು ಅನುಭವಿಸುತ್ತಿರುವ ಯುದ್ಧ ಸಂಬಂಧಿ ಕಷ್ಟಗಳು ಮತ್ತಷ್ಟು ಕಾಲ ಮುಂದುವರಿಯುತ್ತವೆ ಎಂದೇ ವಿಶ್ಲೇಷಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+