Sabarimala: ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧಕ್ಕೆ ಕೇಂದ್ರ ಬೆಂಬಲ: ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಾದ
ಶಬರಿಮಲ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ. ದೇವಸ್ಥಾನಕ್ಕೆ ಮುಟ್ಟಿನ ವಯಸ್ಸಿನ ಮಹಿಳೆಯರ (ಬಾಲಕಿಯರು ಮತ್ತು ವೃದ್ಧೆಯರನ್ನು ಹೊರತುಪಡಿಸಿದ ಮಹಿಳೆಯರು) ಪ್ರವೇಶದ ನಿರ್ಬಂಧ ವಿಧಿಸಲಾಗಿತ್ತು. ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿದ್ದು, ಸದರಿ ಹೆಂಗಸರಿಗೆ ದೇಗುಲ ಪ್ರವೇಶ ನಿರಾಕರಣೆಯನ್ನು ಕೇಂದ್ರ ಬೆಂಬಲಿಸಿದೆ.
ಈ ಪ್ರಕರಣ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಪ್ರಸ್ತುತ ಪೂಜಾ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಮತ್ತು ಎಲ್ಲಾ ಧರ್ಮಗಳ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಸಲ್ಲಿಕೆಯಾದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಗಮನಕ್ಕೆ ಕೇಂದ್ರದ ಪರ ವಕೀಲರು ಮುಟ್ಟಿನ ಮಹಿಳೆಯರ ನಿಷೇಧದ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಇದು ಒಂದಷ್ಟು ಚರ್ಚೆಯಾಗುತ್ತಿದೆ.

ವರ್ಷಗಳಿಂದಲೂ ಶಬರಿಮಲೆ ದೇವಸ್ಥಾನಕ್ಕೆ ಮಾಸಿಕ ಋತುಚಕ್ರವಾಗುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದಕ್ಕೆ ವರ್ಷಗಳಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಆಗಿವೆ. ಅವುಗಳ ವಿಚಾರಣೆ ವೇಳೆ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಧಾರ್ಮಿಕ ಆಚರಣೆಗಳನ್ನು ಕೇವಲ ಲಿಂಗ ದೃಷ್ಟಿಕೋನದಿಂದ ನೋಡಲಾಗುವುದಿಲ್ಲ ಎಂದು ವಾದ ಮಂಡಿಸಿದ್ದಾರೆ.
ಶಬರಿಮಲೆಯಲ್ಲಿ ಮಹಿಳೆಯರಿಗೆ ಮಾತ್ರವಲ್ಲ, ಕೆಲವು ದೇವಾಲಯಗಳಲ್ಲಿ ಪುರುಷರನ್ನು ಸಹ ನಿಷೇಧಿಸಲಾಗಿದೆ ಅಥವಾ ಪರುಷರು ನಿರ್ದಿಷ್ಟ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಶಬರಿಮಲೆ ವಿಚಾರಕ್ಕೆ ಬರುವುದಾದರೆ ಇಲ್ಲಿನ ದೇವರ ಆಚರಣೆಯು ತಾರತಮ್ಯಕ್ಕಿಂತ ನಂಬಿಕೆಯಲ್ಲಿ ಆಳವಾಗಿ ಬೇರೂರಿದೆ ಎಂದು ವಾದಿಸಿದರು. ಮಾತ್ರವಲ್ಲದೇ ಕೇರಳದ ಕೊಟ್ಟಂಕುಳಂಗರ ಶ್ರೀ ದೇವಿ ದೇವಸ್ಥಾನದ ಆಚರಣೆಯನ್ನು ಉದಾಹರನೇ ಸಮೇತ ವಿವರಿಸಿದರು. ಅಲ್ಲಿ ಪುರುಷರು ಚಮಯವಿಳಕ್ಕು ಹಬ್ಬದ ವೇಳೆ ಮಹಿಳೆಯರಂತೆ ಉಡುಪು ಧರಿಸುತ್ತಾರೆ. ಇದು ಅಲ್ಲಿನ ಧಾರ್ಮಿಕ ಪದ್ಧತಿಗಳ ವೈವಿಧ್ಯತೆಯ ಭಾಗವಾಗಿದೆ ಎಂದು ತಿಳಿಸಿದರು.
ನ್ಯಾಯಪೀಕ್ಕೆ ವಕೀಲ ಮಹ್ತಾ ಮಾಹಿತಿ
ಇಲ್ಲಿ ಗಂಡಸರ ಕುರಿತಾದ ಪ್ರಶ್ನೆಗಳು, ಮಹಿಳಾ ಕೇಂದ್ರಿತ ನಂಬಿಕೆಗಳ ಪ್ರಶ್ನೆಗಳು ಉದ್ಭವಿಸುವುದಿಲ್ಲ. ಶಬರಿಮಲೆ ದೇವಸ್ಥಾನ ನಂಬಿಕೆ ಮೇಲೆ ಇದೆ. ಹೀಗಾಗಿ ಮಹಿಳೆಯರ ಪ್ರವೇಶ ನಿಷೇಧಿಸಿದ್ದು, ಅದನ್ನು ಕೇಂದ್ರವು ಬೆಂಬಲಿಸಿದೆ ಎಂದು ಮಹ್ತಾ ಅವರು, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ, ಎಂ ಎಂ ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ ವರಾಳೆ, ಆರ್ ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವಇದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಪ್ರವೇಶ ನಿಷೇಧ ರದ್ದು
2018ರ ಸುಪ್ರೀಂ ಕೋರ್ಟ್ 4:1 ಬಹುಮತದಡಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿಷೇಧ ರದ್ದುಗೊಳಿಸಿತ್ತು. ಈ ಕ್ರಮ ಅಸಂವಿಧಾನಿಕ ಎಂದು ತಿಳಿಸಿತ್ತು. ಇನ್ನೂ 2019 ರಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಿತ್ತು. ಆಗ ನ್ಯಾಯಪೀಠವು ಧರ್ಮಗಳಿಗೆ ಮಾತ್ರವಲ್ಲದೇ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪೂಜಾ ಸ್ಥಳಗಳಲ್ಲಿ ಲಿಂಗ ತಾರತಮ್ಯದ ಕುರಿತು ಸಾಕಷ್ಟು ಮತ್ತು ವಿಶಾಸಲ ಪ್ರಶ್ನೆಗಳಿವೆ. ಅಂತಹ ವಿಚಾರಗಳಲ್ಲಿ ವೈಯಕ್ತಿಕ ಪ್ರಕರಣಗಳನ್ನು ಮೀರಿ ಆಳವಾದ ಪರೀಕ್ಷೆ ಅವಶ್ಯಕತೆ ಇರುತ್ತದೆ ಎಂಬುದುನ್ನು ವಿವರಿಸಿದ್ದರು.












Click it and Unblock the Notifications