Viral Video: ಹೊಸ ಸ್ಟೈಲ್ ಬಿರಿಯಾನಿ ನೋಡಿ ಡಿಸ್‌ಲೈಕ್ ಬಟನ್ ಒತ್ತಿ ಎಂದ ನೆಟ್ಟಿಗರು!
ಐಸ್‌ಕ್ರೀಮ್ + ಬಿರಿಯಾನಿ ಎರಡೂ ಫೂಡ್ ಅನ್ನು ಇಷ್ಟಪಡುವ ಜನರು ಬೇರೆ ಬೇರೆ ಇದ್ದಾರೆ. ಕೆಲವರಿಗೆ ಐಸ್‌ಕ್ರೀಮ್ ಹಾಗೂ ಬಿರಿಯಾನಿ ಎರಡೂ ಇಷ್ಟವಾಗುತ್ತೆ. ಬಿರಿಯಾನಿ, ನಾನ್‌ವೆಜ್ ಅಥವಾ ಒಳ್ಳೆಯ ಊಟ ಮಾಡಿದ ಮೇಲೆ ಸಿಹಿ ಅಥವಾ ಐಸ್‌ಕ್ರೀಮ್ ತಿನ್ನುವ ಅಭ್ಯಾಸ ಹಲವರಿಗೆ ಇರುತ್ತೆ. ಆದರೆ, ಐಸ್‌ಕ್ರೀಮ್ ಪ್ಲಸ್ ಬಿರಿಯಾನಿ ಅಂದರೆ ಐಸ್‌ಕ್ರೀಮ್ ಬಿರಿಯಾನಿಯ ಬಗ್ಗೆ ನೀವು ಯಾವೊತ್ತಾದರೂ ಕೇಳಿದ್ದೀರಾ. ಸಾಧ್ಯವೇ ಇಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಐಸ್‌ಕ್ರೀಮ್ ಬಿರಿಯಾನಿ ರೆಸಿಪಿ ವೈರಲ್ ಆಗುತ್ತಿದ್ದು, ಜನ ಇದಕ್ಕೆ ಸಖತ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಹಾರದ ಮೇಲೆ ವಿಕೃತಿ ಮೆರೆಯುವುದು ಮುಂದುವರಿದಿದೆ. ಚಾಕಲೆಟ್ ಮಸಾಲೆದೋಸೆಯಿಂದ ಇದೀಗ ಐಸ್‌ಕ್ರೀಮ್ ಬಿರಿಯಾನಿ ಶುರುವಾಗಿದೆ.
ಸೋಷಿಯಲ್ ಮೀಡಿಯಾದ ತುಂಬಾ ಇವೊತ್ತು ಐಸ್‌ಕ್ರೀಮ್ ಬಿರಿಯಾನಿ ವಿಷಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇತ್ತೀಚಿನ ದಿನಗಳಲ್ಲಿ ಭಿನ್ನ ಹಾಗೂ ಆಹಾರ ವಿಕೃತಿ ಮುಂದುರಿದಿದೆ. ಚಾಕಲೇಟ್ ಮಸಾಲೆ ದೋಸೆ, ಜಾಮೂನ್ ಬೋಂಡಾ, ಹೂವಿನ ಬಜ್ಜಿ ಅಂತ ಏನೇನೋ ವಿಚಿತ್ರ ಪ್ರಯೋಗಗಳ ಮುಂದುವರಿದಿದೆ. ಅದೇ ರೀತಿ ಇದೀಗ ಐಸ್‌ಕ್ರೀಮ್ ಬಿರಿಯಾನಿ ವೈರಲ್ ಆಗಿದೆ. ಈ ಆಹಾರವನ್ನು ನೋಡುತ್ತಿದ್ದಂತೆಯೇ ಆಹಾರ ಪ್ರಿಯರು ಕೆಂಡಾಮಂಡಲರಾಗಿದ್ದು, ಬನ್ರೋ ಎಲ್ಲಾ ಡಿಸ್‌ಲೈಕ್ ಬಟನ್ ಒತ್ತೋಣ ಅಂತಿದ್ದಾರೆ. ಈ ಆಹಾರವನ್ನು ನೋಡಿ ಜನ ಅಷ್ಟೊಂದು ರೊಚ್ಚಿಗೆದಿದ್ದಾರೆ.

ಮುಂಬೈ ಮೂಲದ ಹೀನಾ ಕೌಸರ್ (Heena Kausar Rad) ಎನ್ನುವ ಮಹಿಳೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಜನ ಇದಕ್ಕೆ ರಿಯಾಕ್ಟ್ ಮಾಡಲು ಶುರು ಮಾಡಿಕೊಂಡಿದ್ದಾರೆ. ಐಸ್ ಕ್ರೀಮ್ ಮತ್ತು ಬಿರಿಯಾನಿ ಎರಡು ಸೂಪರ್ ಫುಡ್‌ಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಫೂಡ್‌ಗಳನ್ನು ಜನ ಇಷ್ಟಪಡದೆ ಇರುವುದಕ್ಕೆ ಕಾರಣವೇ ಇಲ್ಲ. ಬಿರಿಯಾನಿಗಂತೂ ದೇಶದಾದ್ಯಂತ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ.
ಪ್ರತಿ ವರ್ಷ ಅತಿ ಹೆಚ್ಚು ಆರ್ಡರ್ ಆಗುವ ಊಟಗಳಲ್ಲಿ ಬಿರಿಯಾನಿ ಯಾವಾಗಲೂ ಪ್ರಥಮ ಸ್ಥನದಲ್ಲಿ ಉಳಿದುಕೊಂಡಿರುತ್ತೆ. ಆ ಪರಿ ಜನ ಬಿರಿಯಾನಿನ ಲವ್ ಮಾಡ್ತಾರೆ. ಆದರೆ, ಬಿರಿಯಾನಿನ ಮೊಸರು ಬಜ್ಜಿ ಜೊತೆ ತಿನ್ನೋದು, ಇಲ್ಲ ಶೇರ್ವಾ ಜೊತೆ ತಿನ್ನೋದು ರೂಢಿ. ಐಸ್‌ಕ್ರೀಮ್ ಜೊತೆ ತಿನ್ನೋದನ್ನ ಯಾರೂ ಇಮ್ಯಾಜಿನ್ ಸಹ ಮಾಡಿಕೊಂಡಿರಲಿಕ್ಕಿಲ್ಲ.

ಇದೇ ಕಾರಣಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆಯೇ ಬನ್ನಿ.. ಬನ್ನಿ ಎಲ್ಲಾ ಡಿಸ್‌ಲೈಕ್ ಕಮೆಂಟ್ ಒತ್ತೋಣ ಅಂತ ಜನ ಕಮೆಂಟ್ ಮಾಡ್ತಿದ್ದಾರೆ. ಹೀನಾ ಕೌಸರ್ ಅವರು ಕುಕ್ಕಿಂಗ್ ಕ್ಲಾಸ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆ ಕ್ಲಾಸ್‌ನಲ್ಲಿ ಈ ಆಹಾರವನ್ನು ಪರಿಚಯಿಸಿದ್ದು, ವಿಡಿಯೋ ಮಾಡಿ ಇನ್ಸ್‌ಟಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೃಹತ್ ಬಿರಿಯಾನಿ ಪಾತ್ರೆಗಳ ಪಕ್ಕದಲ್ಲಿ ಕುಳಿತಿರುವ ಹೀನಾ ಕೌಸರ್ ಅವರು ಅದರ ಮೇಲೆ ಸ್ಟ್ರಾಬೆರಿ ಐಸ್ ಕ್ರೀಮ್ ಹಾಕಿದ್ದಾರೆ. ಅದನ್ನು ಸರ್ವ್ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.












Click it and Unblock the Notifications