ಕುಗ್ರಾಮಗಳಿಗೆ ಲಸಿಕೆ ಪೂರೈಸಲು ವಾಯುಪಡೆ ವಿಮಾನಗಳ ಬಳಕೆ

ನವದೆಹಲಿ, ಜನವರಿ 07: ಭಾರತದಲ್ಲಿ ಎರಡು ಕೊರೊನಾ ಸೋಂಕಿನ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ದೊರೆತಿದೆ. ಈ ಲಸಿಕೆಗಳನ್ನು ದೇಶದ ಎಲ್ಲಾ ಕಡೆಗಳಿಗೆ ತಲುಪುವಂತೆ ಮಾಡಲು, ವಾಯುಪಡೆಯ ಸಾರಿಗೆ ವಿಮಾನ C-130j ಹಾಗೂ ಅಟೊನೊವ್-32 ಕಾರ್ಗೊ ವಿಮಾನಗಳನ್ನು ಬಳಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಲಸಿಕೆ ಸಾಗಣೆ ಸಂದರ್ಭ 24 ಗಂಟೆಗಳ ಅವಧಿಯೂ ನಿರ್ದಿಷ್ಟ ತಾಪಮಾನದಲ್ಲಿ ಲಸಿಕೆಯನ್ನು ಇರಿಸಲು ಲಸಿಕೆ ತಯಾರಕರು ಹಾಗೂ ಪೂರೈಕೆದಾರರು ವಿಶೇಷ ಕಂಟೇನರ್ ಗಳನ್ನು ತಯಾರಿಸಿರುವುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಅರುಣಾಚಲ ಪ್ರದೇಶ ಹಾಗೂ ಲಡಾಖ್ ನಂಥ ಸ್ಥಳಗಳನ್ನು ಒಳಗೊಂಡಂತೆ ಲಸಿಕೆಗಳನ್ನು ಕುಗ್ರಾಮಗಳಿಗೆ ಸಾಗಿಸಲು ಭಾರತೀಯ ವಾಯುಪಡೆಯು ವಿಶೇಷ ಮಿಲಿಟರಿ ವಿಮಾನಗಳನ್ನು ಬಳಸುವುದಾಗಿ ತಿಳಿಸಿದೆ.

ವಾಣಿಜ್ಯ ವಿಮಾನ ಸಂಸ್ಥೆಗಳೂ ಲಸಿಕೆ ಸಾಗಣೆ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ಬಿದ್ದರೆ, ಕುಗ್ರಾಮಗಳಿಗೆ ಲಸಿಕೆ ಪೂರೈಸಲು ವಾಯುಪಡೆ ತನ್ನ ಹೆಲಿಕಾಪ್ಟರ್ ಅನ್ನು ಬಳಸುತ್ತದೆ ಎಂದು ತಿಳಿದುಬಂದಿದೆ. ಲಸಿಕೆಗಳ ಸಾಗಣೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ನಿರ್ಧಾರವನ್ನು ಶೀಘ್ರವೇ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

IAFs Transport Aircraft To Supply Covid 19 Vaccines

ಭಾರತದಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ದೊರೆತಿದ್ದು, ಶೀಘ್ರವೇ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಜ.8ರಂದು ರಾಜ್ಯಗಳಲ್ಲಿ ಎರಡನೇ ಸುತ್ತಿನ ಡ್ರೈ ರನ್ ಕೂಡ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+