ಯುದ್ಧ ವಿಮಾನ ಏರುವ ನಾರಿಯರಿಗೆ ಬೀದರ್ ನಲ್ಲಿ ತರಬೇತಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜೂನ್ 10: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ಚದ ಕನಸು ನನಸಾಗುವ ಕಾಲ ಕೂಡಿ ಬಂದಿದೆ. 'ನಾರಿ ಶಕ್ತಿ ಮಂತ್ರ' ಜಪಿಸುವ ಮೋದಿ ಅವರ ಆಸೆಯಂತೆ ಭಾರತೀಯ ವಾಯು ಸೇನೆ(ಐಎಎಫ್)ಯ ಮೂವರು ಮಹಿಳಾ ಪೈಲಟ್ ಗಳು ಯುದ್ಧ ವಿಮಾನ ಏರಲು ಸಜ್ಜಾಗಿದ್ದಾರೆ.

ಕಳೆದ ವರ್ಷ ಹಿಂಡನ್ ಎಎಫ್ ಸ್ಟೇಷನ್ ನಲ್ಲಿ ಐಎಎಫ್ ನ 83ನೇ ವಾರ್ಷಿಕ ಪೆರೇಡ್ ಸಮಾರಂಭದಲ್ಲಿ ಈ ಮಹತ್ವದ ನಿರ್ಣಯವನ್ನು ಪ್ರಧಾನಿ ಮೋದಿ- ಘೋಷಿಸಿದ್ದರು.[ಈ ಸುದ್ದಿ ಇಲ್ಲಿ ಓದಿ]

ಫ್ಲೈಯಿಂಗ್ ಕ್ಯಾಡೆಟ್ಸ್ ಗಳಾದ ಭಾವನಾ ಕಾಂತ್, ಮೋಹನಾ ಸಿಂಗ್ ಹಾಗೂ ಅವನಿ ಚತುರ್ವೇದಿ ಅವರು ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಚಲಿಸಬಲ್ಲ ಪ್ರಥಮ ಪೈಲಟ್ ಗಳಾಗಲಿದ್ದಾರೆ. ಈಗಾಗಲೇ ಈ ಮೂವರು ದಿಟ್ಟ ಮಹಿಳೆಯರ ತರಬೇತಿ ಆರಂಭವಾಗಿದೆ.[ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ವಾಯುಸೇನೆ]

IAF set to induct first 3 women into fighter stream

ಹೈದರಾಬಾದಿನ ದುಂಡಿಗಲ್ ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಜೂನ್ 18 ರಂದು ಮೊದಲ ಬಾರಿಗೆ ಫೈಟರ್ ಶ್ರೇಣಿ ವಿಮಾನಗಳನ್ನೇರಿ ಪ್ರದರ್ಶನ ನೀಡಲಿದ್ದಾರೆ ಎಂದು ಒನ್ ಇಂಡಿಯಾ ಪ್ರತಿನಿಧಿಗೆ ರಕ್ಷಣಾ ಇಲಾಖೆ ಅಧಿಕಾರಿಗಳು ಶುಕ್ರವಾರ (ಜೂನ್ 10) ದಂದು ಹೇಳಿದರು.[ಶಿವಮೊಗ್ಗದ ರಾಜಾರಾಮ್ ಆಗಸದಲ್ಲಿ ಹಾರಿದ ಕಥೆ]

ಕಂಬೈನ್ಡ್ ಗ್ರಾಜುಯೇಷನ್ ಪರೇಡ್ (ಸಿಜಿಪಿ) ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮ ಚಾಲನ ಕೌಶಲ್ಯ ಪ್ರದರ್ಶಿಸಲಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಈ ಪೆರೇಡ್ ವೀಕ್ಷಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ 22 ಮಹಿಳಾ ಟ್ರೈನಿಗಳು ಸೇರಿದಂತೆ 129 ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಿದ್ದಾರೆ.

IAF

ಬೀದರ್ ನಲ್ಲಿ ತರಬೇತಿ: ಜೂನ್ 17 ರಂದು ಈ ಟ್ರೈನಿಗಳ ಪೋಷಕರೊಡನೆ ಸಚಿವ ಮನೋಹರ್ ಅವರು ಸಂವಾದ ಕಾರ್ಯಕ್ರಮ ಕೂಡಾ ನಡೆಸಲಿದ್ದಾರೆ. ಇಲ್ಲಿ ತರಬೇತಿ ಪ್ರದರ್ಶನ ನೀಡಿದ ನಂತರ ಮೂವರು ಪೈಲಟ್ ಗಳು ಕರ್ನಾಟಕದ ಬೀದರ್ ಗೆ ಆಗಮಿಸಲಿದ್ದಾರೆ.

ಬೀದರ್ ನಲ್ಲಿ ಉನ್ನತ ಶ್ರೇಣಿಯ ಯುದ್ಧವಿಮಾನ (Hawk) ಗಳನ್ನು ಚಲಾಯಿಸಲಿದ್ದಾರೆ. ನಂತರ ಮೂರನೇ ಹಾಗೂ ಕೊನೆ ಹಂತದ ತರಬೇತಿ ಸಿಗಲಿದೆ. ಇದಾದ ಬಳಿಕ ಫೈಟರ್ ಪೈಲಟ್ ಗಳಾಗಿ ಮುಂದಿನ ವರ್ಷದೊಳಗೆ ನಿಯೋಜನೆಗೊಳ್ಳಲಿದೆ ಎಂದು ಐಎಎಫ್ ಅಧಿಕಾರಿಗಳು ಹೇಳಿದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Continuing with Prime Minister Narendra Modi's push to empower women in all sectors, the Indian Air Force (IAF) is taking NDA government's Naari Shakthi mantra to next level by commissioning three women pilots into the fighter stream.
Please Wait while comments are loading...