Rahul Gandhi Marriage: ಶೀಘ್ರದಲ್ಲೇ ರಾಹುಲ್ ಗಾಂಧಿ ಮದುವೆ!?
ಲಕ್ನೋ, ಮೇ. 13 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನು ಮದುವೆಯಾಗಿಲ್ಲ. 53 ವರ್ಷದ ರಾಹುಲ್ ಗಾಂಧಿ ಮದುವೆ ಯಾವಾಗ ಎಂಬುದು ಯಾವಾಗಲೂ ಚರ್ಚೆಗೆ ಬರುತ್ತದೆ. ಚುನಾವಣಾ ಪ್ರಚಾರಗಳಲ್ಲಿ, ಸಂದರ್ಶನಗಳಲ್ಲಿಯೂ ಅವರಿಗೆ ಈ ಪ್ರಶ್ನೆಯನ್ನು ಹಲವು ಭಾರಿ ಕೇಳಲಾಗಿದೆ. ಕೆಲವೊಮ್ಮೆ ಅವರು ಉತ್ತರಿಸಿದ್ದಾರೆ. ಮತ್ತೆ ಕೆಲವೊಮ್ಮೆ ನಕ್ಕು ಸುಮ್ಮನಾಗಿದ್ದಾರೆ.
ಈಗ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್ ಗಾಂಧಿ ತಮ್ಮ ಮದುವೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಶೀಘ್ರದಲ್ಲೇ ತಾವು ಮದುವೆ ಆಗುವುದಾಗಿ ರಾಯ್‌ಬರೇಲಿ ಕ್ಷೇತ್ರದಲ್ಲಿ ಹಿಂಟ್ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಖುಷಿಯಾಗಿದ್ದಾರೆ.

ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ ಎಂದ ರಾಹುಲ್ ಗಾಂಧಿ
ಉತ್ತರ ಪ್ರದೇಶದ ತಮ್ಮ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಯಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮದುವೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ "ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ" ಎಂದು ನಗೆ ಚಟಾಕಿ ಹರಿಸಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ಅವರು ಮೇ 13 ರ ಸೋಮವಾರದಂದು ಉತ್ತರ ಪ್ರದೇಶ ಕ್ಷೇತ್ರದಲ್ಲಿ ನಡೆದ ರ್‍ಯಾಲಿಯಲ್ಲಿ ಆವೇಶಭರಿತವಾಗಿ ಭಾಷಣ ಮಾಡುತ್ತಿದ್ದರು. ಈ ವೇಳೆ ಗಂಭೀರ ಸಮಾವೇಶದಲ್ಲಿ ಅವರ ಮದುವೆಯ ಬಗ್ಗೆ ಪ್ರಶ್ನೆ ಬಂದಿದೆ. ಆಗ ರಾಹುಲ್ ಗಾಂಧಿ ನೀವು ಯಾವಾಗಲು ನನಗೆ ಗಂಟು ಹಾಕಲು ಪ್ಲ್ಯಾನ್ ಮಾಡುತ್ತಿರಿ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಸಾಥ್ ಕೊಟ್ಟ ಪ್ರಿಯಾಂಕಾ
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು. ಮೇ 3 ರಂದು ಕಾಂಗ್ರೆಸ್, ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕೆಎಲ್ ಶರ್ಮಾ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಈ ಕ್ಷೇತ್ರಗಳಿಗೆ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಅವರಿಬ್ಬರನ್ನು ಚುನಾವಣಾ ಸ್ಪರ್ಧೆಯಿಂದ ದೂರವಿಟ್ಟಿದೆ.
ಸೋನಿಯಾ ಗಾಂಧಿ ಅವರು 1999 ರಲ್ಲಿ ಅಮೇಥಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2004 ರಲ್ಲಿ ರಾಹುಲ್ ಗಾಂಧಿ ಇಲ್ಲಿಂದ ಆಯ್ಕೆಯಾಗಿದ್ದರು. ಸೋನಿಯಾ ಗಾಂಧಿ ಅವರಿಗಿಂತ ಮೊದಲು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೂರು ಬಾರಿ ರಾಯ್‌ಬರೇಲಿಯನ್ನು ಗೆದ್ದಿದ್ದರು. ಕ್ಷೇತ್ರದಲ್ಲಿ ಇಂದಿರಾ ಗಾಂಧಿ ಅವರ ಪತಿ ಮತ್ತು ಕಾಂಗ್ರೆಸ್ ನಾಯಕ ಫಿರೋಜ್ ಗಾಂಧಿ 1952 ಮತ್ತು 1957 ರಲ್ಲಿ ಎರಡು ಬಾರಿ ಪ್ರತಿನಿಧಿಸಿದ್ದಾರೆ.
ರಾಯ್ ಬರೇಲಿ ಕ್ಷೇತ್ರಕ್ಕೆ ಮೇ 20 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 5,34,918 ಮತಗಳನ್ನು ಗಳಿಸುವ ಮೂಲಕ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ದಿನೇಶ್ ಪ್ರತಾಪ್ ಸಿಂಗ್ ಅವರು 3,67,740 ಮತಗಳನ್ನು ಗಳಿಸಿದ್ದರು.












Click it and Unblock the Notifications