ಲೈಂಗಿಕ ಕಿರುಕುಳ ಅನುಭವಿಸಿದ ಮಲಯಾಳಂ ನಟಿಯ ಸಂದರ್ಶನ

ಲೈಂಗಿಕ ಕಿರುಕುಳದಿಂದ ಜೀವನದಲ್ಲಿ ಹತಾಶೆಗೊಳಗಾಗಿದ್ದರೂ ಮತ್ತೆ ಪುಟಿದೇಳುವ ವಿಶ್ವಾಸವನ್ನು ಮಲಯಾಳಂ ನಟಿ ವ್ಯಕ್ತಪಡಿಸಿದ್ದಾರೆ.

ಕೊಚ್ಚಿ (ಕೇರಳ), ಫೆಬ್ರವರಿ 28: ''ಜೀವನದಲ್ಲಿ ಯಾವ ಹೆಣ್ಣೂ ಬಯಸದ ಸಂಕಷ್ಟವೊಂದನ್ನು ನಾನು ಎದುರಿಸಿದ್ದೇನೆ. ಇದರಿಂದ ಆಘಾತಕ್ಕೊಳಗಾಗಿದ್ದು ನಿಜ. ಆದರೆ, ಇದರಿಂದ ನಾನು ಕುಗ್ಗುವುದಿಲ್ಲ. ಮತ್ತೆ ಪುಟಿದೇಳುತ್ತೇನೆ'' ಎಂದು ಇತ್ತೀಚೆಗೆ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಮಲಯಾಳಂ ನಟಿ ತಿಳಿಸಿದ್ದಾರೆ.

ಡೆಕ್ಕನ್ ಕ್ರೋನಿಕಲ್ ಗೆ ನೀಡಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ಅವರು, ಜೀವನವನ್ನು ಸವಾಲಾಗಿ ಎದುರಿಸುವ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದ್ದಾರೆ.

I will always get up: Kerala actress on assault

ಇತ್ತೀಚೆಗೆ ತ್ರಿಸ್ಸೂರ್ ನಿಂದ ಕೊಚ್ಚಿಗೆ ನಟಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಅವರ ಕಾರಿನ ಚಾಲಕನೇ ನಟಿಯನ್ನು ಅವರನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ನಟಿಯ ಮಾಜಿ ಡ್ರೈವರ್ ಇದ್ದ ಗುಂಪಿನೊಂದಿಗೆ ಸೇರಿಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆನಂತರ ತನಿಖೆ ನಡೆಸಿರುವ ಪೊಲೀಸರು ಎಲ್ಲಾ ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆಯ ನಂತರ ಬಹುದಿನಗಳ ಕಾಲ ಅಜ್ಞಾತವಾಗಿಯೇ ಉಳಿದಿದ್ದ ನಟಿ, ಇದೇ ಮೊದಲ ಬಾರಿಗೆ ಮಾತನಾಡಿರುವ ಅವರು ಏನು ಹೇಳಿದರು? ಇಲ್ಲಿದೆ ನೋಡಿ.

ಇಂಥ ಯಾತನೆ ಅನುಭವಿಸಿರಲಿಲ್ಲ

ಇಂಥ ಯಾತನೆ ಅನುಭವಿಸಿರಲಿಲ್ಲ

ಎಲ್ಲರಂತೆಯೇ ನಾನೂ ಜೀವನದಲ್ಲಿ ವೈಫಲ್ಯ ಹಾಗೂ ಬೇಸರಗಳನ್ನು ಅನುಭವಿಸಿದ್ದೇನೆ. ಆದರೆ, ಜೀವನ ನನ್ನನ್ನು ಎಂದೂ ಮರೆಯಲಾಗದಂಥ ಆಘಾತಕ್ಕೆ ನೂಕಿದೆ ಎಂದು ಆ ನಟಿ ಅಲವತ್ತುಕೊಂಡಿದ್ದಾರೆ.

ಬದುಕಾಯಿತು ಶೋಚನೀಯ

ಬದುಕಾಯಿತು ಶೋಚನೀಯ

ತಮ್ಮ ಪರಿಸ್ಥಿತಿ ಬಗ್ಗೆ ನೆನೆದು ಕಣ್ಣೀರು ಹಾಕಿದ ಅವರು, ''ಇದು ನಿಜಕ್ಕೂ ಶೋಚನೀಯ. ಇದು ನನ್ನ ಜೀವನದ ದೊಡ್ಡ ದುರಂತ. ಇತ್ತೀಚೆಗೆ, ಆ ಮಾನಸಿಕ ಆಘಾತದಿಂದ ಕೊಂಚ ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಇದರಿಂದ ಶೀಘ್ರವೇ ಹೊರಬರುತ್ತೇನೆ'' ಎಂದು ತಿಳಿಸಿದ್ದಾರೆ.

ಆ ಮಾನಸಿಕ ಯಾತನೆ ಯಾರಿಗೂ ಬೇಡ

ಆ ಮಾನಸಿಕ ಯಾತನೆ ಯಾರಿಗೂ ಬೇಡ

ಜೀವನವು ನನ್ನನ್ನು ಏಕಾಏಕಿ ಪ್ರಪಾತವೊಂದಕ್ಕೆ ನೂಕಿತು. ಇಂಥ ಪರಿಸ್ಥಿತಿ ಎದುರಾದೀತು ಎಂದು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಆ ಕಡು ಕಷ್ಟ, ಮಾನಸಿಕ ಹಿಂಸೆಯನ್ನು ನಾನು ಅನುಭವಿಸುವಂತಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬೆಂಬಲವೇ ಜೀವಾಳ

ಬೆಂಬಲವೇ ಜೀವಾಳ

ಆಘಾತಕ್ಕೊಳಗಾಗಿದ್ದ ತಮ್ಮ ಪರವಾಗಿ ನಿಲ್ಲುವ ಮೂಲಕ ತಮಗೆ ಬೆಂಬಲ ಸೂಚಿಸಿದ ಕುಟುಂಬ ಸದಸ್ಯರು, ಬಂಧುಗಳು, ಮಾಧ್ಯಮಗಳು, ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಅನುಕಂಪದ ಸುರಿಮಳೆಯನ್ನೇ ಸುರಿಸಿದ ದೇಶದ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದರು.

ಸಾಂತ್ವನ ನೀಡಿದ ಮನಸ್ಸುಗಳು

ಸಾಂತ್ವನ ನೀಡಿದ ಮನಸ್ಸುಗಳು

ಮಲಯಾಳಂ ಚಿತ್ರರಂಗ ಮಾತ್ರವಲ್ಲದೆ, ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ಬಾಲಿವುಡ್, ನೇತಾರರೂ ನಟಿಯ ನೋವಿಗೆ ಸ್ಪಂದಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+