ಗುಜರಾತಿನ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದ ಮೋದಿ ತಾಯಿ ಹೀರಾಬೆನ್
ಅಹಮದಾಬಾದ್, ಡಿಸೆಂಬರ್ 14: ಇಂದು ಗುಜರಾತ್ ನಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಪಾಲ್ಗೊಂಡಿದ್ದರು. ಸದ್ಯ ಅವರಿಗೀಗ 95 ವರ್ಷ ವಯಸ್ಸು.
ಗಾಂಧಿನಗರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಹೀರಾಬೆನ್, "ನಾನು ಗುಜರಾತಿನ ಒಳಿತಿಗಾಗಿ ದೇವರ ಬಳಿಯಲ್ಲಿ ಪ್ರಾರ್ಥಿಸುತ್ತೇನೆ," ಎಂದು ಹೇಳಿದರು.
ತಮ್ಮ 95ರ ಇಳಿವಯಸ್ಸಿನಲ್ಲೂ ಮನೆಯಿಂದ ಬಂದು ಮತದಾನ ಮಾಡುವ ಮೂಲಕ ಪ್ರಧಾನಿ ತಾಯಿ ಯುವ ಜನಾಂಗಕ್ಕೆ ಮತದಾನ ಮಾಡುವಂತೆ ಉತ್ಸಾಹ ತುಂಬಿದರು.

ಕಳೆದ ಬಾರಿ ಹೀರಾಬೆನ್ ಆಟೋರಿಕ್ಷಾದಲ್ಲಿ ಬಂದು ಮತದಾನ ಮಾಡಿದ್ದರು. ಈ ಬಾರಿ ಅವರು ಕಾರಿನಲ್ಲಿ ಬಂದು ಮತದಾನ ಮಾಡಿ ತೆರಳಿದರು.
PM @narendramodi's mother casts her vote in Vadnagar#GujaratElection2017 pic.twitter.com/WNO7FpxJ0w
— Doordarshan News (@DDNewsLive) December 14, 2017
ಇಂದು ಗುಜರಾತ್ ನ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಮತದಾನ ಡಿಸೆಂಬರ್ 9 ರಂದು ನಡೆದಿದ್ದು ಶೇ. 66.75 ರಷ್ಟು ಜನರು ಮತ ಚಲಾಯಿಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಇದೇ ಡಿಸೆಂಬರ್ 18ರಂದು ಹೊರ ಬೀಳಲಿದೆ.












Click it and Unblock the Notifications