Get Updates
Get notified of breaking news, exclusive insights, and must-see stories!

Hyderabad- Bengaluru Bus: ಅಗ್ನಿ ಕೆನ್ನಾಲಿಗೆಯಿಂದ ಈ ಕಾರಣಕ್ಕೆ ಜೀವ ಉಳಿಸಿಕೊಂಡ 12 ಜನ, ಉಳಿದವರು ಸಜೀವ ದಹನ!

Hyderabad- Bengaluru Bus Accident: ಹೈದರಾಬಾದ್ - ಬೆಂಗಳೂರು ಬಸ್‌ ಅಗ್ನಿ ದುರಂತದಲ್ಲಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಈ ದುರಂತದಲ್ಲಿ 12 ಜನ ಪವಾಡ ದೃಶ್ಯವಾಗಿ ಬದುಕುಳಿದಿದ್ದಾರೆ. ಹೈದರಾಬಾದ್ - ಬೆಂಗಳೂರು ಬಸ್ ದುರಂತವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ದುರಂತದಲ್ಲಿ ಕನ್ನಡಿಗರೂ ಸಹ ಮೃತಪಟ್ಟಿರುವ ಸಾಧ್ಯತೆ ಇದೆ. ಈ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ಅಗ್ನಿ ಕೆನ್ನಾಲಿಗೆಯಿಂದ 12 ಜನ ಪಾರಾಗಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಆಂಧ್ರಪ್ರದೇಶದ ಕರ್ನೂಲು ಬಳಿ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕಾರಣ ಬೆಂಕಿಯ ತೀವ್ರತೆ ಆ ಪ್ರಮಾಣದಲ್ಲಿತ್ತು. ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಕೇವಲ 12 ಜನ ಮಾತ್ರ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆಯ ಬಗ್ಗೆ ಆಂಧ್ರಪ್ರದೇಶ ಪೊಲೀಸರು ಇನ್ನಷ್ಟೇ ನಿಖರ ಮಾಹಿತಿ ನೀಡಬೇಕಾಗಿದೆ.

Hyderabad Bengaluru Bus Inferno 12 Break Free as Dozens Burn Alive

ಕಾವೇರಿ ಟ್ರಾವೆಲ್ಸ್‌ಗೆ ಸೇರಿದ (ಡಿಡಿ01 ಎನ್ 9490) ವೋಲ್ವೋ ಬಸ್ ಕರ್ನೂಲು ಜಿಲ್ಲೆಯ ಚಿನ್ನ ಟೇಕೂರು ಗ್ರಾಮದ ಬಳಿ ಶುಕ್ರವಾರ (ಅಕ್ಟೋಬರ್ 24ರಂದು) ಬೈಕ್‌ಗೆ ಡಿಕ್ಕಿ ಹೊಡೆದು ಈ ದಾರುಣ ದುರಂತ ಸಂಭವಿಸಿತ್ತು. ಪ್ರಯಾಣಿಕರೆಲ್ಲರೂ ಈ ವೇಳೆ ಗಾಢ ನಿದ್ರೆಯಲ್ಲಿದ್ದರು. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಎಸಿ ಬಸ್ ಆಗಿದ್ದರಿಂದ ಹೊಗೆ ಆವರಿಸುತ್ತಿದ್ದಂತೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ ಯಾರಿಗೂ ಏನು ಮಾಡಬೇಕು ಎಂದು ತೋಚಿಲ್ಲ. ಆರಂಭದಲ್ಲಿ ಸಣ್ಣದಾಗಿದ್ದ ಬೆಂಕಿಯನ್ನು ಚಾಲಕ ಹಾಗೂ ಸಹಾಯಕ ನೀರಿನ ಬಾಟಲಿಯಿಂದ ನಂದಿಸುವುದಕ್ಕೆ ಪ್ರಯತ್ನಿಸಿದ್ದಾರಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಪ್ರಾಣ ಉಳಿಸಿಕೊಂಡ 12 ಜನ: ಇನ್ನು ಈ ದುರಂತದಲ್ಲಿ 12 ಜನ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪ್ರಯಾಣಿಕರು ಬಸ್‌ನಿಂದ ಹೊರ ಬರುವುದಕ್ಕೆ ದಾರಿ ನೋಡಿದ್ದಾರೆ, ಕೂಡಲೇ ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಹೊರಗೆ ಹಾರುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಈ ಹಂತದಲ್ಲಿ ಹೆಚ್ಚಿನವರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಬಸ್‌ನಿಂದ ಹೊರಬರಲು ಸಾಧ್ಯವಾಗದ 32 ಜನ ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಸಾವಿನ ಸಂಖ್ಯೆಯ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಾಗಿದೆ.

ಚಂದ್ರಬಾಬು ನಾಯ್ಡು ಟ್ವೀಟ್: ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಕರ್ನೂಲ್ ಜಿಲ್ಲೆಯ ಚಿನ್ನಾ ಟೇಕೂರ್ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ಬೆಂಕಿ ಅಪಘಾತದ ವಿಷಯ ಕೇಳಿ ನನಗೆ ಆಘಾತವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಮತ್ತು ಬಾಧಿತ ಕುಟುಂಬಗಳಿಗೆ ಸರ್ಕಾರಿ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಪರಿಹಾರ ವಿಚಾರಗಳು ಇನ್ನಷ್ಟೇ ನಿಗದಿಯಾಗಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+