ಓಡಿ ಹೋದ ಪತ್ನಿಯ ಪ್ರಿಯಕರನ ಪತ್ನಿಯೊಂದಿಗೆ ಮದುವೆಯಾಗಿ ಸೇಡು ತೀರಿಸಿಕೊಂಡ ಪತಿ
ಬಿಹಾರದ ಪತ್ನಿಯ ಮೇಲೆ ಪತಿ ವಿಚಿತ್ರವಾಗಿ ಸೇಡಿ ತೀರಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪತಿಯೊಬ್ಬ ಪತ್ನಿಯ ಮೇಲೆ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಘಟನೆ ಬಿಹಾರದ ಖಗಾರಿಯಾದಲ್ಲಿ ನಡೆದಿದೆ. ಹೀಗೊಂದು ವಿಲಕ್ಷಣ ಘಟನೆಯೊಂದರಲ್ಲಿ ವಿವಾಹಿತ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಓಡಿಹೋಗಿದ್ದಾಳೆ. ಸೇಡು ತೀರಿಸಿಕೊಳ್ಳಲು ಆಕೆಯ ಪತಿ ಆಕೆಯ ಪ್ರಿಯಕರನ ಹೆಂಡತಿಯನ್ನು ಮದುವೆಯಾಗಿದ್ದಾನೆ.
ರೂಬಿ ದೇವಿ ಎಂಬ ಮಹಿಳೆ 2009 ರಲ್ಲಿ ನೀರಜ್ ಅವರನ್ನು ವಿವಾಹವಾದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ ನೀರಜ್ ಪತ್ನಿ ರೂಬಿ ದೇವಿ ಅವರು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಫೆಬ್ರವರಿ 2022ರಲ್ಲಿ ರೂಬಿ ಮತ್ತು ಮುಖೇಶ್ ಓಡಿಹೋಗಿ ವಿವಾಹವಾದರು. ನೀರಜ್‌ಗೆ ಈ ವಿಷಯ ಗೊತ್ತಾದಾಗ ಸಿಡಿಲೇ ಬಡಿದಂತಾಗಿದೆ. ನಾಲ್ಕು ಮಕ್ಕಳಿರುವ ತಾಯಿ ಹೀಗೆ ಮಾಡುತ್ತಾಳೆಂದು ನೀರಜ್ ಎಮದೂ ಕೂಡ ಊಹಿಸಿರಲಿಲ್ಲ. ನೀರಜ್ ತನ್ನ ಹೆಂಡತಿಯನ್ನು ಅಪಹರಿಸಿದ್ದಕ್ಕಾಗಿ ಮುಖೇಶ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ.

ಸಮಸ್ಯೆಯನ್ನು ಪರಿಹರಿಸಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನಡೆಸಲಾಯಿತು. ಆದರೆ ಮುಖೇಶ್ ರೂಬಿ ದೇವಿಯನ್ನು ಬಿಡಲು ಒಪ್ಪಲಿಲ್ಲ. ಮುಖೇಶ್ ಕೂಡ ಈಗಾಗಲೇ ಮದುವೆಯಾಗಿದ್ದರು. ಮುಖೇಶ್‌ಗೂ ಕೂಡ ಮದುವೆಯಾಗಿ ಎರಡು ಮಕ್ಕಳಿದ್ದಾರೆ.
ಸೇಡು ತೀರಿಸಿಕೊಳ್ಳಲು ನೀರಜ್ ಕಳೆದ ತಿಂಗಳು ಮುಖೇಶ್ ಪತ್ನಿಯನ್ನು ಮದುವೆಯಾಗಿದ್ದಾರೆ. ಕುತೂಹಲಕಾರಿಯಾಗಿ ಮುಖೇಶ್ ಅವರ ಪತ್ನಿಗೂ ರೂಬಿ ಎಂಬ ಹೆಸರು ಇದೆ. ಈ ವಿಚಿತ್ರ ಮದುವೆಯ ಸುದ್ದಿ ನೆಟ್ಟಿಗರು ಮಾತನಾಡುವಂತೆ ಮಾಡಿದೆ.

ಒಬ್ಬ ಬಳಕೆದಾರ, "ಮುಕೇಶ್ ಅವರ ಹೆಂಡತಿಯನ್ನು ಮದುವೆಯಾಗಲು ರೂಬಿ ದೇವಿ ಅವರ ಗಂಡನ ಯೋಜನೆ ಮೊದಲಿನಿಂದಲೂ ಇತ್ತು" ಎಂದು ಬರೆದಿದ್ದಾರೆ. ಇನ್ನೊಬ್ಬರು "ವಿವಾಹಿತರು ಪರಸ್ಪರ ಓಡಿಹೋಗುತ್ತಿದ್ದಾರೆ ಮತ್ತು ಇಲ್ಲಿ ನಾನೇ ಒಂಟಿಯಾಗಿದ್ದೇನೆ" ಎಂದು ಹಾಸಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಅವರ ಮಕ್ಕಳು ತುಂಬಾ ಗೊಂದಲಕ್ಕೊಳಗಾಗುತ್ತಾರೆ" ಎಂದು ಬರೆದಿದ್ದಾರೆ.












Click it and Unblock the Notifications