80 ವಿಶೇಷ ರೈಲುಗಳ ಸಂಚಾರ; ಮುಂಗಡ ಟಿಕೆಟ್‌ಗೆ ಭಾರಿ ಬೇಡಿಕೆ

ನವದೆಹಲಿ, ಸೆಪ್ಟೆಂಬರ್ 11: ಭಾರತೀಯ ರೈಲ್ವೆ ಸೆಪ್ಟೆಂಬರ್ 12ರಿಂದ 80 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು ಜನರು ಮುಗಿಬಿದ್ದಿದ್ದು, ಟಿಕೆಟ್‌ಗೆ ಭಾರಿ ಬೇಡಿಕೆ ಇದೆ.

ರೈಲ್ವೆ 80 ವಿಶೇಷ ರೈಲುಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ. ಬುಧವಾರ 2.4 ಲಕ್ಷ ಟಿಕೆಟ್ ಬುಕ್ ಆಗಿತ್ತು. ಗುರುವಾರ ಸಂಜೆ ತನಕ 4.5 ಲಕ್ಷ ಟಿಕೆಟ್‌ಗಳು ಬುಕ್ ಆಗಿವೆ. ರೈಲು ಸಂಚಾರಕ್ಕೆ ಜನರು ಆಸಕ್ತಿ ತೋರುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ.

ಈಗಾಗಲೇ 230 ರೈಲುಗಳನ್ನು ರೈಲ್ವೆ ಓಡಿಸುತ್ತಿದೆ. ಇದರ ಜೊತೆಗೆ 80 ವಿಶೇಷ ರೈಲುಗಳ ಸಂಚಾರ ಶನಿವಾರದಿಂದ ಆರಂಭವಾಗಲಿದೆ. ತಮ್ಮ ತವರು ರಾಜ್ಯಕ್ಕೆ ಹೋಗಿರುವ ವಲಸೆ ಕಾರ್ಮಿಕರು ವಾಪಸ್ ಆಗಲು ಸಹಕಾರಿಯಾಗಲಿ ಎಂದು ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

Huge Demand For Special Trains Ticket Booking

ಟಿಕೆಟ್ ಬುಕ್ಕಿಂಗ್ ಮೇಲೆ ನಿಗಾ: ರೈಲ್ವೆ ಬೋರ್ಡ್ ಮುಖ್ಯಸ್ಥ ವಿ. ಕೆ. ಯಾದವ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಮುಂಗಡ ಬುಕ್ಕಿಂಗ್‌ ಅನ್ನು ರೈಲ್ವೆ ನಿಗಾವಿಟ್ಟು ಗಮನಿಸುತ್ತಿದೆ" ಎಂದು ಹೇಳಿದ್ದಾರೆ.

"ಯಾವುದಾದರೂ ಮಾರ್ಗದ ರೈಲಿಗೆ ಹೆಚ್ಚು ಬೇಡಿಕೆ ಇದ್ದರೆ, ವೈಟಿಂಗ್ ಲಿಸ್ಟ್‌ನಲ್ಲಿ ಹಲವಾರು ಪ್ರಯಾಣಿಕರು ಇದ್ದರೆ. ಆ ಮಾರ್ಗದಲ್ಲಿ ಈ ರೈಲಿನ ಜೊತೆಗೆ ಕ್ಲೋನ್ ರೈಲು ಓಡಿಸುವುದಾಗಿ" ವಿ. ಕೆ. ಯಾದವ್ ತಿಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದ ಹಲವು ಪರೀಕ್ಷೆಗಳು ನಡೆಯುತ್ತಿವೆ. ಆದ್ದರಿಂದ, ರೈಲ್ವೆ ವಿವಿಧ ರಾಜ್ಯಗಳಿಂದ ವಿಶೇಷ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+