Hubballi-Rameswaram: ಹುಬ್ಬಳ್ಳಿ, ಮಂಗಳೂರಿನಿಂದ ಚಲಿಸುವ ವಿಶೇಷ ರೈಲುಗಳ ಸೇವೆ ವಿಸ್ತರಣೆ, ವೇಳಾಪಟ್ಟಿ
ಹುಬ್ಬಳ್ಳಿ: ಪ್ರಯಾಣಿಕರ ಸಂಚಾರ ದಟ್ಟಣೆ ನೋಡಿಕೊಂಡು, ಅವರಿಗೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆ ವಲಯವು ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ಜಂಕ್ಷನ್‌ನಿಂದ ರಾಮೇಶ್ವರಂ ನಡುವೆಗೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಗಳನ್ನು ವಿಸ್ತರಣೆ ಮಾಡಿದೆ. ಯಾವ ದಿನಾಂಕದವರೆಗೆ ವಿಸ್ತರಣೆ ಆಗಿದೆ. ರೈಲುಗಳ ಸಂಚಾರ ಸಮಯ, ವೇಳಾಪಟ್ಟಿ ವಿವರ ಇಲ್ಲಿದೆ.
ಮುಂದೆ ಸಾಲು ಸಾಲು ಹಬ್ಬಗಳು ಎದುರಾಗುತ್ತಿದ್ದು, ಗಣೇಶ ಹಬ್ಬಕ್ಕೆ ಎರಡು ವಾರ ಬಾಕಿ ಇದೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ರೈಲ್ವೆ ಮಂಡಳಿಯು ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ - ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲುಗಳ (07355/07356 ) ಸೇವೆಯ ಅವಧಿ ವಿಸ್ತರಿಸಲು ಅನುಮೋದನೆ ಕೊಟ್ಟಿದೆ. ಅವಧಿಯಲ್ಲಿ ರೈಲುಗಳಿಂದ ಒಂಬತ್ತು ಟ್ರಿಪ್ ಸೇವೆ ಸಿಗಲಿದ.

ವಿಶೇಷ ರೈಲುಗಳ ವೇಳಾಪಟ್ಟಿ ಹೀಗಿದೆ
* 2026 ಸೆಪ್ಟಂಬರ್ 27 ರವರೆಗೆ ಸಂಚರಿಸಲು ನಿಗದಿಯಾಗಿದ್ದ ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲು (07355) ಸೇವೆಯನ್ನು ಇದೀಗ ಅಕ್ಟೋಬರ್ 04ರಿಂದ ನವೆಂಬರ್ 29ರವರೆಗೆ ವಿಸ್ತರಣೆ ಮಾಡಲಾಗಿದೆ.
* ಅದೇ ರೀತಿ, ಸೆಪ್ಟಂಬರ್ 28 ರವರೆಗೆ ಮಾತ್ರವೇ ಸಂಚರಿಸಬೇಕಿದ್ದ ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ ರೈಲು (07356) ಸೇವೆಯು ಇದೀಗ ಅಕ್ಟೋಬರ್ 05 ರಿಂದ ನವೆಂಬರ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ರೈಲುಗಳು ವಿಸ್ತರಣೆ ಅವಧಿಯಲ್ಲಿ ಪ್ರಸ್ತುತದಲ್ಲಿರುವ ವೇಳಾಪಟ್ಟಿ, ನಿಲ್ದಾಣಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಹೆಚ್ಚುವರಿಯಾಗಿ ಒಂಬತ್ತು ಟ್ರಿಪ್'ಗಳಲ್ಲಿ ಸಂಚರಿಸಲಿವೆ.
ಮಂಗಳೂರು ಸೆಂಟ್ರಲ್-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ರೈಲು
ಇನ್ನು ಕರ್ನಾಟಕ ಕರಾವಳಿ ಹಾಗೂ ತಮಿಳುನಾಡಿನ ಚೆನ್ನವರೆಗಿನ ವಿಶೇಷ ರೈಲು ಸೇವೆಯನ್ನೂ ಸಹ ವಿಸ್ತರಣೆ ಮಾಡಲಾಗಿದೆ. ಮಂಗಳೂರು ಸೆಂಟ್ರಲ್-ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಅವಧಿಯನ್ನು ಹೆಚ್ಚುವರಿ ನಾಲ್ಕು ಟ್ರಿಪ್ ಸೇವೆ ಲಭ್ಯವಾಗುವಂತೆ ವಿಸ್ತರಣೆ ಮಾಡಿದೆ.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಅಧಿಕಾರಿಗಳ ಪ್ರಕಾರ, ಸೋಮವಾರದಂದು ಚಲಿಸುವ ಮತ್ತು ಸೆಪ್ಟೆಂಬರ್ 29 ರವರೆಗೆ ಕಾರ್ಯನಿರ್ವಹಿಸಲು ನಿಗದಿಯಾಗಿದ್ದ ಮಂಗಳೂರು ಸೆಂಟ್ರಲ್-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ವಿಶೇಷ ರೈಲು (06126) ಇದೀಗ ಅಕ್ಟೋಬರ್ 26 ರವರೆಗೆ ಸೇವೆ ನೀಡುವಂತೆ ಅವಧಿ ವಿಸ್ತರಿಸಲಾಗಿದೆ.
ಮರಳಿ ಅದೇ ದಿಕ್ಕಿನಲ್ಲಿ ಪ್ರತಿ ಮಂಗಳವಾರದಂದು ಇದೇ ಸೆಪ್ಟೆಂಬರ್ 29ರವರೆಗೆ ಮಾತ್ರ ಪ್ರಯಾಣಿಸಬೇಕಿದ್ದ ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು (06125) ಅಕ್ಟೋಬರ್ 27 ರವರೆಗೆ ಸೇವೆ ನೀಡುವಂತೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Click it and Unblock the Notifications
