• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರ ಮೊಹಮ್ಮದ್ ನವೀದ್ ಲಷ್ಕರ್ ಸೇರಿದ್ದು ಹೇಗೆ?

By ವಿಕಾಸ್ ನಂಜಪ್ಪ
|

ಬೆಂಗಳೂರು, ಆಗಸ್ಟ್ 7 : 'ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ' ಎಂದು ಹೇಳುತ್ತಿರುವ ಉದಾಂಪುರ್‌ನಲ್ಲಿ ಸೆರೆಸಿಕ್ಕ ಉಗ್ರ ಮೊಹಮ್ಮದ್ ನವೀದ್ ಪಾಕಿಸ್ತಾನದವನು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಪಾಕಿಸ್ತಾನ ಮಾತ್ರ ಇದಕ್ಕೆ ಸಾಕ್ಷಿ ಕೇಳುತ್ತಿದೆ.

ಸೆರೆಸಿಕ್ಕ ದಿನದಿಂದ ತನ್ನ ಹೆಸರು ಕಾಸಿಂ, ಉಸ್ಮಾನ್ ಖಾನ್, ಮೊಹಮ್ಮದ್ ನವೀದ್ ಎಂದು ಹೇಳಿದ್ದ ಉಗ್ರನ ನಿಜವಾದ ಹೆಸರು ಮೊಹಮ್ಮದ್ ನವೀದ್ ಎಂಬುದು ಖಚಿತವಾಗಿದೆ. 'ಮೊಹಮ್ಮದ್ ನವೀದ್ ನನ್ನ ಮಗ, ನಾನೊಬ್ಬ ನತದೃಷ್ಟ ತಂದೆ' ಎಂದು ಆತನ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ['ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ']

ಉದಾಂಪುರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಮೊಹಮ್ಮದ್ ನವೀದ್‌ನನ್ನು ಹೆಚ್ಚಿನ ತನಿಖೆಗಾಗಿ ದೆಹಲಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ನವೀದ್ ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದವನು ಎಂದು ತಿಳಿದುಬಂದಿದೆ. ಆದರೆ, ಆತ ಲಷ್ಕರ್ ಸೇರಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ....[ನವೀದ್ ಬಾಲಾಪರಾಧಿ ಎಂದು ಸಾಬೀತಾದರೆ?]

ನವೀದ್ ತಂದೆಗೆ ಮೂರು ಜನರ ಮಕ್ಕಳು

ಪಾಕಿಸ್ತಾನದ ಫೈಸ್ಲಾಬಾದ್ ಮೂಲದನಾದ ನವೀಬ್ ತಂದೆ ಯೂಸೂಫ್ ಮೊಹಮದ್. ನವೀದ್‌ಗೆ ಇಬ್ಬರು ಸಹೋದರರು. ಒಬ್ಬರು ಉಪನ್ಯಾಸಕರಾಗಿದ್ದರೆ, ಮತ್ತೊಬ್ಬರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೇ ಹೇಳಿದಂತೆ 'ನಾನೊಬ್ಬ ನತದೃಷ್ಟ ತಂದೆ' ಅವರ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಆದ್ದರಿಂದ ನವೀದ್ ಬಂದೂಕು ಹಿಡಿದಿದ್ದ.

ಲಷ್ಕರ್ ಉಗ್ರರು ಮನೆಗೆ ಬಂದಿದ್ದರು

ವಿಚಾರಣೆ ವೇಳೆ ನವೀದ್ ಹೇಳಿದಂತೆ ಲಷ್ಕರ್ ಉಗ್ರರು ಕಳೆದ ಎರಡು ವರ್ಷಗಳಲ್ಲಿ ಹಲವಾರು ಬಾರಿ ಅವರ ಮನೆಗೆ ಬಂದಿದ್ದರು. ಮಕ್ಕಳನ್ನು ಕಳಿಸುವಂತೆ ಯೂಸೂಫ್ ಮೊಹಮ್ಮದ್‌ಗೆ ಹೇಳಿದ್ದರು. ಆದರೆ, ಅವರು ನಿರಾಕರಿಸಿದಾಗ ಬೆದರಿಕೆ ಹಾಕಿದ್ದರು. ಆದ್ದರಿಂದ ಅವರ ಮುಂದೆ ಬೇರೆ ಆಯ್ಕೆಗಳಿರಲಿಲ್ಲ.

ಲಷ್ಕರ್ ನೇಮಕಾತಿ ಮಾಡಿಕೊಳ್ಳುತ್ತದೆ

ಬೇರೆ-ಬೇರೆ ದೇಶಗಳು ಸೇನೆಗೆ ನೇಮಕಾತಿ ಮಾಡಿಕೊಳ್ಳುವಂತೆ ಲಷ್ಕರ್ ಉಗ್ರರು ತಮ್ಮ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತದೆ. ಉಗ್ರರಿಗೆ ಪರೋಕ್ಷ ಬೆಂಬಲ ನೀಡುವ ಗುಪ್ತಚರ ದಳ ಐಎಸ್‍ಐ ಹಾಗೂ ಪಾಕ್‌ ಸೇನೆ ಈ ಬಗ್ಗೆ ಮೌನವಹಿಸಿರುತ್ತವೆ. [ಚಿತ್ರ : ಉದಾಂಪುರ್‌ನಲ್ಲಿ ಮೃತಪಟ್ಟ ಮತ್ತೊಬ್ಬ ಉಗ್ರ]

ಹಣದ ಆಮಿಷ ಒಪ್ಪದಿದ್ದರೆ ಬೆದರಿಕೆ

ಉಗ್ರರು ತಮ್ಮ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವಾಗ ಮೊದಲು ಹಣದ ಆಮಿಷ ಒಡ್ಡುತ್ತಾರೆ. ಅದಕ್ಕೆ ಒಪ್ಪದಿದ್ದರೆ ಬೆದರಿಕೆ ಹಾಕಿ ಯುವಕರನ್ನು ಕರೆದುಕೊಂಡು ಹೋಗುತ್ತಾರೆ.[ಚಿತ್ರ : ಉದಾಂಪುರ್‌ನಲ್ಲಿ ಉಗ್ರ ನವೀದ್ ಸೆರೆ ಹಿಡಿದಿದ್ದು ಇವರು]

ನವೀದ್ ಸೇರಿದ್ದು ಇದೇ ಮಾದರಿಯಲ್ಲಿ

ಬಿಎಸ್‌ಎಫ್ ಪಡೆಗಳ ಮೇಲೆ ದಾಳಿ ಮಾಡಿದ ನವೀದ್ ಲಷ್ಕರ್ ಸೇರಿದ್ದು ಇದೇ ಮಾದರಿಯಲ್ಲಿ. ಉದ್ಯೋಗವಿದಲ್ಲದೇ ಅಲೆದಾಡುತ್ತಿದ್ದ ಆತನನ್ನು ಉಗ್ರರು ಸಂಪರ್ಕಿಸಿದ್ದರು. ಮನೆಗೆ ಬಂದು ಸಂಘಟನೆ ಸೇರುವಂತೆ ಬೆದರಿಕೆ ಹಾಕಿದ್ದರು. [ಚಿತ್ರ : ಉದಾಂಪುರ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪಾಲ್ಗೊಂಡಿದ್ದ ಯೋಧರು]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mohammad Naved father had not much of a choice. The terrorist arrested at Udhampur, Naved who is being questioned by various agencies tells a tale of how it was impossible to say no to a Lashkar-e-Tayiba recruiter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more