ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಸ್ಥ ಟೆಲಿಮೆಡಿಸಿನ್ ಆ್ಯಪ್ ಹೇಗೆ ರೋಗಿಗಳ ಜೀವ ಉಳಿಸಲು ಹಣ ಸಂಗ್ರಹಿಸುತ್ತಿದೆ?

|
Google Oneindia Kannada News

ನವದೆಹಲಿ, ಏಪ್ರಿಲ್ 26: ಭಾರತವು ಕೊರೊನಾ ಸೋಂಕನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ.

ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಮ್ಲಜನಕದ ಕೊರತೆಯಾಗುತ್ತಿದೆ. ಕೋವಿಡ್‌ನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವರಿಗೆ ಕೃತಕ ಆಮ್ಲಜನಕದ ಅವಶ್ಯಕತೆ ತುಂಬಾ ಇದೆ. ಆದರೆ ದೇಶಾದ್ಯಂತ ಬಹುತೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ.

ಸ್ವಸ್ಥ ಅಪ್ಲಿಕೇಷನ್ ಮಿಲಾಪ್, ಕೆಟ್ಟೊ, ಹಾಗೂ ಇಂಪ್ಯಾಕ್ಟ್ ಗುರು ಮೂಲಕ ಧನ ಸಂಗ್ರಹಿಸುತ್ತಿದ್ದು, ದೇಶಾದ್ಯಂತ ಇರುವ ಆಸ್ಪತ್ರೆಗಳಿಗೆ ಆಮ್ಲಜನಕ ಸೇರಿದಂತೆ ಹಲವು ನೆರವು ನೀಡುತ್ತಿದೆ.

ಆಕ್ಸಿಜನ್ ಸಿಲಿಂಡರ್‌ಗಳನ್ನು ಬಹು ತಯಾರಕರು ಹಾಗೂ ಅವುಗಳ ವಿತರಕರಿಂದ ಪಡೆಯಲಾಗುತ್ತದೆ. ಭಾರತದಲ್ಲಿ ಸ್ಥಳೀಯ ಉತ್ಪಾದನೆ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಆದ್ದರಿಂದ ಹೆಚ್ಚಾಗಿ ಆಮದುಮಾಡಿಕೊಳ್ಳಲಾಗುತ್ತಿದೆ.

How Swasth, The Telemedicine App Is Crowdfunding To Help Hospitals Save Lives

ನಮ್ಮ ಅಗತ್ಯ ಸಮಯದಲ್ಲಿ ಯಾರು ಲಭ್ಯತೆ ಹೊಂದಿರುತ್ತಾರೆ ಎಂಬ ಆಧಾರದ ಮೇಲೆ ಯುವೆಲ್, ಬಿಪಿಎಲ್, ಮೆಡ್ಕ್ವಿಪ್, ನಿಡೆಕ್, ಸ್ಯಾನ್ರೈ ಅವರೊಂದಿಗೆ ಸ್ವಸ್ಥ ಕೆಲಸ ಮಾಡುತ್ತಿದೆ.
ಅವರು ಇಲ್ಲಿರುವ ಹಲವು ಮೂಲವನ್ನು ಬಳಸಿಕೊಂಡು ದೇಶಾದ್ಯಂತ ಇರುವ ಆಸ್ಪತ್ರೆಗಳ ಅಗತ್ಯವನ್ನು ಪೂರೈಸಲು ಮುಂದಾಗಿದ್ದಾರೆ, ಸರ್ಕಾರಿ, ಖಾಸಗಿ ಪೂರೈಕೆದಾರರ ಜತೆ ಮಾತನಾಡಿದ್ದಾರೆ.

ಬೇಡಿಕೆ ಮತ್ತು ಪೂರೈಕೆಯ ಹೊಂದಾಣಿಕೆ ಪ್ರಕ್ರಿಯೆಯನ್ನು ಆಧರಿಸಿ ಸಾರ್ವಜನಿಕ ವಲಯದಲ್ಲಿ ಸಾಧ್ಯವಾದಷ್ಟು ಪಾರದರ್ಶಕವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್ ಕೋರಿಕೆಯನ್ನು ಸ್ವೀಕರಿಸಿದ್ದಾರೆ. ಭಾರತದ ಅಂದಾಜು ಅಗತ್ಯ ಸುಮಾರು 2 ಲಕ್ಷದಷ್ಟಿದೆ.

ಈ ಅಭಿಯಾನದಿಂದ ಸುಮಾರು 10 ಮಿಲಿಯನ್ ಡಾಲರ್ ಸಹಾಯಧನ ನಿರೀಕ್ಷಿಸಲಾಗಿದ್ದು ಅದರಿಂದ 10 ಸಾವಿರ ಆಕ್ಸಿಜನ್ ಸಿಲಿಂಡರ್ ಒದಗಿಸುವ ಗುರಿ ಹೊಂದಲಾಗಿದೆ.

ಆರಂಭಿಕ ಅಗತ್ಯಗಳು ಹೀಗಿದೆ: ಪ್ರತಿ ಹೈ ಫ್ಲೋ ಆಕ್ಸಿಜನ್ ಕಾಂನ್ಸನ್‌ಟ್ರೇಟರ್ ಬೆಲೆ 85 ಸಾವಿರವಿದ್ದು, ಕಡಿಮೆ ಹರಿವಿನ ಆಕ್ಸಿಜನ್ ಕಾಂನ್ಸನ್‌ಟ್ರೇಟರ್ ಬೆಲೆ 45 ಸಾವಿರ ರೂ. ಇದೆ.

-ಹೆಚ್ಚು ಹರಿವಿನ ಆಕ್ಸಿಜನ್‌ಗೆ 85 ಸಾವಿರ/ 1130 ಯುಎಸ್ ಡಾಲರ್, ಇದರಿಂದ ತೀವ್ರ ಉಸಿರಾಟ ತೊಂದರೆ ಎದುರಿಸುತ್ತಿರುವ 550 ರೋಗಿಗಳಿಗೆ ಅನುಕೂಲವಾಗಲಿದೆ.
-ಕಡಿಮೆ ಹರಿವಿನ ಆಕ್ಸಿಜನ್ ಸಿಲಿಂಡರ್‌ಗಳು 45 ಸಾವಿರಕ್ಕೆ ಲಭ್ಯವಾಗಲಿದ್ದು, ಸಣ್ಣ ಪ್ರಮಾಣದ ಉಸಿರಾಟದ ತೊಂದರೆ ಹೊಂದಿರುವ 900 ಮಂದಿಗೆ ನೀಡಲಾಗುತ್ತದೆ.

ನೀವು ಹೇಗೆ ಸಹಾಯ ಮಾಡಬಹುದು?: ಭಾರತದ ನಾಗರಿಕರು ಇದರಲ್ಲಿ ತೆರಿಗೆ ಪ್ರಯೋಜನ ಪಡೆದುಕೊಳ್ಳಬಹುದು.
*ಇಂಪ್ಯಾಕ್ಟ್ ಗುರು ಮೂಲಕ ದೇಣಿಗೆ ನೀಡಲು ಈ ಲಿಂಕ್ ಕ್ಲಿಕ್ ಮಾಡಿ https://www.impactguru.com/fundraiser/oxygen
*ಮಿಲಾಪ್ ಮೂಲಕ ದೇಣಿಗೆ ನೀಡಲು ಈ ಲಿಂಕ್ ಕ್ಲಿಕ್ ಮಾಡಿ: https://milaap.org/fundraisers/Donate-for-Oxygen
* ಬೇರೆ ದೇಶದಲ್ಲಿರುವವರು ಪ್ರತ್ಯೇಕವಾಗಿ ದೇಣಿಗೆ ನೀಡಲು ಈ ಲಿಂಕ್ ಬಳಸಿ: ಮಿಲಾಪ್: https://milaap.org/fundraisers/Donate-for-Oxygen., ಅಮೆರಿಕದವರು ದೇಣಿಗೆ ನೀಡಬೇಕಿದ್ದರೆ >$1000 ನೀಡಿದರೆ ತೆರಿಗೆ ರಿಯಾಯಿತಿ ಪಡೆಯಬಹುದು.
ಭಾರತ ಹಾಗೂ ಇತರೆ ದೇಶಗಳಿಂದ ವೈಯಕ್ತಿಕವಾಗಿ ದೇಣಿಗೆ ನೀಡುವವರು: 7,50,000 ರೂ ಅಥವಾ $10000ಕ್ಕೂ ಅಧಿಕ ದೇಣಿಗೆ ನೀಡುವವರು ನೇರವಾಗಿ [email protected] ಗೆ ವರ್ಗಾಯಿಸಬಹುದು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ವಿವಿಧ ಲಾಭರಹಿತ ಸಂಸ್ಥೆಗಳು ಕಾರ್ಪೊರೇಟ್ ವಲಯದಿಂದ ಹಣಕಾಸು ಮತ್ತು ಇತರೆ ನೆರವು ಪಡೆಯುವ ಪ್ರಕ್ರಿಯೆಯನ್ನು ಸರಳವಾಗಿ ವ್ಯಾಖ್ಯಾನಿಸಬಹುದು.

ಸಂಸ್ಥೆ ಆಧಾರಿತ ಅಥವಾ ಸಿಎಸ್‌ಆರ್ ಫಂಡಿಂಗ್: ಭಾರತ ಅಥವಾ ಇತರೆ ದೇಶಗಳಿಂದ ಕೊಡಗು ನೀಡಲು ದಯವಿಟ್ಟು ನೇರವಾಗಿ [email protected]ವರ್ಗಾಯಿಸಬಹುದಾಗಿದೆ.

ದೀರ್ಘಾವಧಿ ಪಾಲುದಾರರು: ಮೂಲ ಉತ್ಪನ್ನಗಳ ಮೂಲಕ ಭಾರತಾದ್ಯಂತ ಡಿಜಿಟಲ್ ಆರೋಗ್ಯ ಪರಿಕರಗಳ ಅಳವಡಿಕೆಯನ್ನು ವೇಗಗೊಳಿಸುವಲ್ಲಿ ನೀವು ದೀರ್ಘಾವಧಿ ಕಾರ್ಯಾಚರಣೆಯಲ್ಲಿ ಸ್ವಸ್ಥ ಆಪ್ ಜತೆ ಪಾಲುದಾರರಾಗಬಹುದು.

ಕೆಲವೊಂದು ಪ್ರಶ್ನೆಗಳಿಗೆ ಉತ್ತರ
-ಆಮ್ಲಜನಕಗಳು ಯಾವಾಗ ಪೂರೈಕೆದಾರರನ್ನು ತಲುಪುತ್ತದೆ?
ಈಗಾಗಲೇ ವಿತರಣಾ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ, ಹಲವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ, ಹಾಗೆಯೇ ಹಣ ಸಂಗ್ರಹಿಸುವ ಕಾರ್ಯ ಮುಂದುವರೆಯಲಿದೆ. ಪ್ರತಿ ಒಂದು ವಾರಕ್ಕೊಮ್ಮೆ ಆಮ್ಲಜನಕದ ಕೊರತೆ ಎಷ್ಟಿದೆ ಎಂದು ತಿಳಿದುಕೊಂಡು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತದೆ.

ಲಾಜಿಸ್ಟಿಕ್ಸ್ ಬಗ್ಗೆ ಮಾಹಿತಿ
ಲಾಜಿಸ್ಟಿಕ್ಸ್ ಎರಡು ಅಂಶವನ್ನು ಹೊಂದಿದೆ, ಒಂದು ಭಾರತಕ್ಕೆ ಆಮದು ಮತ್ತೊಂದು ಅಗತ್ಯವಿರುವ ನಿಜವಾದ ಸ್ಥಳವನ್ನು ತಲುಪುವುದು. ಹೆಚ್ಚಿನ ಪೂರೈಕೆದಾರರನ್ನು ಈ ಎರಡನ್ನೂ ನಿಭಾಯಿಸುತ್ತಿದ್ದಾರೆ. ಭಾರತಕ್ಕೆ ಆಮ್ಲಜನಕ ಸರಬರಾಜು ಮಾಡಲು ಲಾಜಿಸ್ಟಿಕ್ ಕಂಪನಿಗಳು ವಿಮಾನಯಾನ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ. ದೂರದ ಪ್ರದೇಶಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಪರ್ಕವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇದೀಗ ಅವರು ಮಹಾರಾಷ್ಟ್ರದ ಗಾಡ್ಚಿರೋಲಿ, ಕರ್ನಟಕದ ಚಿಕ್ಕಬಳ್ಳಾಪುರ, ಒಡಿಶಾದ ಗಾಂಜಾ, ಛತ್ತೀಸ್‌ಗಢದ ಬಿಲಾಸ್ಪುರ್ ಮುಂತಾದ ಪ್ರದೇಶಗಳಿಗೆ ಪೂರೈಕೆ ಮಾಡಿದ್ದಾರೆ.

ನಾವು ನೀಡುವ ಹಣ ಫಲಾನುಭವಿಗಳನ್ನು ತಲುಪಿದೆ ಎಂದು ತಿಳಿಯುವುದು ಹೇಗೆ?
ಸ್ವೀಕರಿಸಿದ ಬೇಡಿಕೆ, ವಿನಂತಿಗಳು, ಸರಬರಾಜು ಸಂಗ್ರಹಣೆ ಮತ್ತು ಹೊಂದಾಣಿಕೆ ಪ್ರಕ್ರಿಯೆ ಎಲ್ಲವೂ ಪಾರದರ್ಶಕವಾಗಿರುತ್ತದೆ. ಒಟ್ಟು ಮೊತ್ತವಷ್ಟು ಹಣವನ್ನು ಎಲ್ಲಿ ಬಳಸಲಾಗುತ್ತಿದೆ ಎಂಬುದನ್ನು ನೀವು ವೀಕ್ಷಿಸಬಹುದು.

English summary
As India is battling the resurging of COVID cases, Hospitals and healthcare providers are running out of resources in the fight against COVID-19 and the situation on the ground is dire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X