ಪಠಾಣ್ ಕೋಟ್‌ ವಾಯುನೆಲೆಗೆ ಉಗ್ರರು ನುಗ್ಗಿದ್ದು ಹೇಗೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜನವರಿ 02 : ಪಂಜಾಬ್‌ನ ಪಠಾಣ್ ಕೋಟ್‌ ವಾಯುನೆಲೆ ಮೇಲೆ ಶನಿವಾರ ಮುಂಜಾನೆ ಉಗ್ರರು ದಾಳಿ ಮಾಡಿದ್ದಾರೆ. ಮುಂಜಾನೆ 3 ಗಂಟೆಗೆ ಆರಂಭವಾದ ಉಗ್ರರ ಜೊತೆಗಿನ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ.

ಶನಿವಾರ ಮುಂಜಾನೆ 3 ಗಂಟೆಗೆ ವಾಯುನೆಲೆಗೆ ನುಗ್ಗಲು ಯತ್ನಿಸಿದ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡುವ ಮೂಲಕ ಗುಂಡಿನ ಚಕಮಕಿ ಆರಂಭವಾಯಿತು. ಸುಮಾರು 6 ಮಂದಿ ಶಸ್ತ್ರ ಸಜ್ಜಿತ ಯೋಧರು ವಾಯುನೆಲೆಗೆ ನುಗ್ಗಿದ್ದಾರೆ ಎಂದು ಅಂದಾಜಿಸಲಾಗಿದೆ. [ವಾಯುನೆಲೆ ಮೇಲೆ ಉಗ್ರರ ದಾಳಿ]

punjab

10 ರಿಂದ 15 ಅಡಿ ಎತ್ತರವಿರುವ ಗೋಡೆಯನ್ನು ಹಾರಿ ವಾಯುನೆಲೆಗೆ ಪ್ರವೇಶಿಸಲು ಉಗ್ರ ಪ್ರಯತ್ನ ನಡೆಸುತ್ತಿರುವಾಗ ಸಂದರ್ಭದಲ್ಲಿ ಭದ್ರತಾ ಪಡೆಗಳು ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದರು. ತಕ್ಷಣ ಉಳಿದ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸುತ್ತಾ ವಾಯುನೆಲೆಗೆ ನುಗ್ಗಿ ಅಡಗಿ ಕುಳಿತರು.

ವಾಯುನೆಲೆಯ ಆಡಳಿತ ಕಚೇರಿಗೆ ನುಗ್ಗಲು ಉಗ್ರರು ನಡೆಸಿದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದವು. ಉಗ್ರರು ನುಗ್ಗಿರುವ ಮಾಹಿತಿಯನ್ನು ತಕ್ಷಣ ಸೇನೆಗೆ ತಿಳಿಸಲಾಯಿತು. ಸೇನೆ ಸಂಪೂರ್ಣ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಉಗ್ರರನ್ನು ಮಟ್ಟಹಾಕುವ ಕಾರ್ಯಾಚರಣೆಯನ್ನು ಆರಂಭಿಸಿದರು.

ವಾಯುನೆಲೆಯ ಸುತ್ತಲಿನ ಗೇಟ್‌ಗಳ ಮೂಲಕ 6 ಉಗ್ರರು ಒಳ ನುಗ್ಗಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗಿನ ಕಾರ್ಯಾಚರಣೆ ವೇಳೆ 4 ಉಗ್ರರನ್ನು ಹೊಡೆದುರುಳಿಸಲಾಗಿದೆ. ಇನ್ನೂ ಗುಂಡಿನ ಚಕಮಕಿ ನಡೆಯುತ್ತಿದ್ದು. ಸ್ವ್ಯಾಟ್ ತಂಡ (Special Weapons and Tactics Team) ಉಗ್ರರಿಗಾಗಿ ಶೋಧ ನಡೆಸುತ್ತಿದೆ. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The terrorists who attacked the Pathankot air force station were first detected at 3 AM when they tried to gain entry into the premises. The first terrorist was killed as he was gaining entry into the area.
Please Wait while comments are loading...