100 ರೂ. ಪೆಟ್ರೋಲ್‌ಗೆ ಭಾರತೀಯರು ಪಾವತಿಸುವ ತೆರಿಗೆ ಹಣ ಎಷ್ಟು?

ಬೆಂಗಳೂರು, ಮಾರ್ಚ್ 22: ಭಾರತದಲ್ಲಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಆಗಿದೆ. ಇದರ ಬೆನ್ನಲ್ಲೇ ದೇಶದಲ್ಲಿ 137 ದಿನಗಳ ನಂತರ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ.

ಮಾರ್ಚ್ 22ರಂದು ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ 95.41 ರೂಪಾಯಿ ಆಗಿದ್ದ ಪೆಟ್ರೋಲ್ ದರ ಮಂಗಳವಾರ 96.21 ರೂಪಾಯಿ ಆಗಿದೆ. ಅದೇ ರೀತಿ ಪೆಟ್ರೋಲ್ ದರ 86.67 ರೂಪಾಯಿಯಿಂದ 87.47 ರೂಪಾಯಿಗೆ ಏರಿಕೆ ಆಗಿದೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ತೆರಿಗೆ ಅನ್ನು ವಿಧಿಸುತ್ತದೆ. ಅದರ ಹೊರತಾಗಿ ರಾಜ್ಯ ಸರ್ಕಾರಗಳೂ ಸಹ ಹೆಚ್ಚುವರಿ ತೆರಿಗೆ ಅನ್ನು ಹಾಕುತ್ತದೆ. ಅಗತ್ಯ ವಸ್ತು ಆಗಿರುವ ಇಂಧನದ ಮೇಲೆ ಸರ್ಕಾರಗಳು ಹಾಕುವ ತೆರಿಗೆಯು ಗ್ರಾಹಕರ ಜೇಬಿಗೆ ಹಾಕುವ ಕತ್ತರಿ ಅಂತಾಗುತ್ತಿವೆ. ಹಾಗಿದ್ದರೆ 100 ರೂಪಾಯಿ ಪೆಟ್ರೋಲ್ ಖರೀದಿಸುವ ಗ್ರಾಹಕರು ಎಷ್ಟು ರೂಪಾಯಿ ತೆರಿಗೆಯನ್ನು ತಮಗೆ ಅರಿವಿಲ್ಲದಂತೆ ಪಾವತಿಸುತ್ತಿದ್ದಾರೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

Recommended Video

      ಜನಸಾಮಾನ್ಯರಿಗೆ ಡಬಲ್ ಶಾಕ್:ಪೆಟ್ರೋಲ್,ಡೀಸೆಲ್,ಗ್ಯಾಸ್ ಸಿಲಿಂಡರ್ ರೇಟ್ ಏರಿಕೆ | Oneindia Kannada

      ನೀವು ಖರೀದಿಸುವ 100 ರೂ. ಪೆಟ್ರೋಲ್ ಮೇಲೆ ತೆರಿಗೆ ಎಷ್ಟು?

      ಭಾರತದಲ್ಲಿ ನೀವು ಖರೀದಿಸುವ 100 ರೂಪಾಯಿ ಪೆಟ್ರೋಲ್ ಮೇಲೆ ಒಟ್ಟು 45.30 ರೂಪಾಯಿ ಹಣವನ್ನು ತೆರಿಗೆ ಆಗಿ ಕಟ್ಟುತ್ತಿದ್ದೀರಿ. ಈ ಒಟ್ಟು 45 ರೂಪಾಯಿ ತೆರಿಗೆಯಲ್ಲಿ ಕೇಂದ್ರ ಸರ್ಕಾರಕ್ಕೆ 29 ರೂಪಾಯಿ ತೆರಿಗೆ ಹೋದರೆ, 16 ರೂಪಾಯಿ ತೆರಿಗೆಯು ರಾಜ್ಯ ಸರ್ಕಾರಗಳಿಗೆ ಹೋಗುತ್ತದೆ. ಈ ಅಂಕಿ-ಅಂಶವು ಕೇವಲ ದೆಹಲಿಯೊಂದಕ್ಕೆ ಸಂಬಂಧಿಸಿದ್ದಾಗಿದೆ.

      ರಾಜ್ಯ ಮತ್ತು ಕೇಂದ್ರದಿಂದ ತೆರಿಗೆ ವಿಧಿಸುವ ನೀತಿ ಹೀಗಿದೆ

      ರಾಜ್ಯ ಮತ್ತು ಕೇಂದ್ರದಿಂದ ತೆರಿಗೆ ವಿಧಿಸುವ ನೀತಿ ಹೀಗಿದೆ

      ಕೇಂದ್ರ ಸರ್ಕಾರವು ಇಂಧನದ ಮೇಲೆ ಒಂದು ರೀತಿಯಾಗಿ ತೆರಿಗೆಯನ್ನು ವಿಧಿಸಿದರೆ, ರಾಜ್ಯದಿಂದ ರಾಜ್ಯಗಳಿಗೆ ಈ ತೆರಿಗೆಗಳು ಭಿನ್ನವಾಗಿರುತ್ತವೆ. ಒಂದು ರಾಜ್ಯದಲ್ಲಿ ಹೆಚ್ಚು ತೆರಿಗೆ ವಿಧಿಸಿದರೆ, ಇನ್ನು ಕೆಲವು ರಾಜ್ಯದಲ್ಲಿ ಕಡಿಮೆ ತೆರಿಗೆಯನ್ನು ವಿಧಿಸಲಾಗುತ್ತಿದೆ. ಪೆಟ್ರೋಲಿಯಂ ಪ್ಲಾನಿಂಗ್ & ಅನಾಲಿಸಿಸ್ ಸೆಲ್, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರ ಅಬಕಾರಿ ಸುಂಕವನ್ನು ಇಂಧನದ ಮೇಲೆ ಪ್ರತಿ ಲೀ.ಗೆ 27.9 ರೂಪಾಯಿ ನಿಗದಿಪಡಿಸಲಾಗಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ವ್ಯಾಟ್ ತೆರಿಗೆ ಬದಲಾಗುತ್ತದೆ. ಮಹಾರಾಷ್ಟ್ರದಲ್ಲಿ ಶೇ.25 ವ್ಯಾಟ್ ಮತ್ತು 10.21 ರೂಪಾಯಿ ಜೊತೆ ಕೇಂದ್ರದ ಅಬಕಾರಿ ಸುಂಕವನ್ನು ವಿಧಿಸಲಾಗುತ್ತಿದೆ. ಮುಂಬೈ, ಥಾಣೆ, ಅಮರಾವತಿ ಮತ್ತು ಔರಂಗಾಬಾದ್‌ಗಳಲ್ಲಿ ಇದರ ಜೊತೆ ಹೆಚ್ಚುವರಿಯಾಗಿ ಶೇ.1ರಷ್ಟು ವ್ಯಾಟ್ ಅನ್ನು ವಿಧಿಸಲಾಗುತ್ತಿದೆ.

      ಇಂಧನದ ಮೇಲೆ ಅತಿಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳು ಯಾವುವು?

      ಇಂಧನದ ಮೇಲೆ ಅತಿಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳು ಯಾವುವು?

      ಭಾರತದಲ್ಲಿ ಅತಿಹೆಚ್ಚು ತೆರಿಗೆ ವಿಧಿಸುವ ರಾಜ್ಯಗಳು ಯಾವುವು ಹಾಗೂ ಈ ರಾಜ್ಯಗಳಲ್ಲಿ 100 ರೂಪಾಯಿ ಪೆಟ್ರೋಲ್ ಖರೀದಿಸಿದವರು ಎಷ್ಟು ಹಣವನ್ನು ತೆರಿಗೆ ಆಗಿ ಪಾವತಿಸುತ್ತಿದ್ದಾರೆ ಎಂಬುದರ ಪಟ್ಟಿಯನ್ನು ಮುಂದೆ ನೀಡಲಾಗಿದೆ.

      ಮಹಾರಾಷ್ಟ್ರ - 52.5 ರೂ.

      ಆಂಧ್ರ ಪ್ರದೇಶ - 52.4 ರೂ.

      ತೆಲಂಗಾಣ - 51.6 ರೂ.

      ರಾಜಸ್ಥಾನ - 50.8 ರೂ.

      ಮಧ್ಯಪ್ರದೇಶ - 50.6 ರೂ.

      ಕೇರಳ - 50.2 ರೂ.

      ಬಿಹಾರ - 50.0 ರೂ.

      ಭಾರತದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?

      ಭಾರತದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?

      ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 96.21ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 87.47 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 110.82 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.00 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.16 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.19 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.51 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 90.62 ರೂಪಾಯಿ ನಿಗದಿಯಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 101.42 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+