ರಾಮ್ ರಹೀಮ್‌ ಸಿಂಗ್‌ಗೆ 20 ವರ್ಷಗಳ ಶಿಕ್ಷೆಯಾಗಿದ್ದು ಹೇಗೆ?

ಚಂಡೀಗಢ, ಆಗಸ್ಟ್ 29 : 2002ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿಯಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಸಿಂಗ್‌ಗೆ ಇಪತ್ತು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್ ರಹೀಮ್ ಸಿಂಗ್‌ಗೆ ಮೊದಲು 10 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಮೊದಲ ತೀರ್ಪು ಮಧ್ಯಾಹ್ನ 3.30ಕ್ಕೆ ಪ್ರಕಟಗೊಂಡಾಗ ಹತ್ತು ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು.

Recommended Video

      Gurmeet Ram Rahim Singh, Secret Behind His Popularity | Oneindia Kannada
      ram rahim singh

      ನ್ಯಾಯಮೂರ್ತಿಗಳು ಎರಡನೇ ತೀರ್ಪು ಪ್ರಕಟಿಸಿದಾಗ ಪುನಃ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಎರಡು ಪ್ರಕರಣಗಳಲ್ಲಿ ರಾಮ್ ರಹೀಮ್ ಸಿಂಗ್ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿದೆ. ಅಂದರೆ ಒಟ್ಟು 20 ವರ್ಷಗಳ ಶಿಕ್ಷೆಯನ್ನು ಅನುಭವಿಸಬೇಕು.

      ಎರಡನೇ ತೀರ್ಪು ಪ್ರಕಟಗೊಂಡ ಮೇಲೆ ಶಿಕ್ಷೆಯ ಪ್ರಮಾಣದ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಕ್ಕಿತು. ಎರಡು ಪ್ರಕರಣದಲ್ಲಿ ಒಟ್ಟು ಇಪತ್ತು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಮೊದಲ ಪ್ರಕರಣದ ಹತ್ತು ವರ್ಷ ಮುಗಿದ ಬಳಿಕ, ಎರಡನೇ ಪ್ರಕರಣದ ಶಿಕ್ಷೆ ಆರಂಭವಾಗುತ್ತದೆ.

      ರೋಹ್ಟಕ್ ಜೈಲಿನಲ್ಲಿಯೇ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳು ರಾಮ್ ರಹೀಮ್ ಸಿಂಗ್ ಗೆ 30ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ. ಶುಕ್ರವಾರ (ಆಗಸ್ಟ್ 25) ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ನೀಡಲಾಗಿತ್ತು. ಸೋಮವಾರ (ಆಗಸ್ಟ್ 28) ಶಿಕ್ಷೆಯನ್ನು ಪ್ರಕಟಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+