ODI World Cup 2023: ಭಾರತ-ಪಾಕಿಸ್ತಾನ ಪಂದ್ಯ: ಅಹಮದಾಬಾದ್ ಹೋಟೆಲ್ ಕೊಠಡಿ ದರ ಹತ್ತು ಪಟ್ಟು ಹೆಚ್ಚಳ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಗಳವಾರ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಘೋಷಿಸಿದೆ. ಅಕ್ಟೋಬರ್ 15 ರಂದು ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದು,1.32 ಲಕ್ಷ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಪಂದ್ಯವನ್ನು ನೋಡಬಹುದಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಅಭಿಮಾನಿಗಳು ಅಹಮದಾಬಾದ್‌ಗೆ ಬರಲಿದ್ದಾರೆ. ಈ ಬೆನ್ನಲ್ಲೇ ಅಹಮದಾಬಾದ್‌ನಲ್ಲಿ ಐಷಾರಾಮಿ ಹೋಟೆಲ್ ಕೊಠಡಿಗಳ ಬಾಡಿಗೆ ದರ ಗಗನಕ್ಕೇರಿದೆ.

 India-Pakistan World Cup Match

ಈಗಾಗಲೇ ನಗರದಲ್ಲಿರುವ ಪ್ರತಿಷ್ಠಿತ ಹೋಟೆಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು ಸಹಜವಾಗಿಯೇ ಬೆಲೆ ದುಬಾರಿಯಾಗಿದೆ. ಅಲ್ಲದೆ ಹಲವು ಹೋಟೆಲ್‌ಗಳಲ್ಲಿ ಈಗಾಗಲೇ ರೂಮ್‌ಗಳನ್ನು ಬುಕ್ ಮಾಡಲಾಗುತ್ತಿದೆ. ಅನೇಕ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದು ಕೊಠಡಿ ಬಾಡಿಗೆ ಈಗಾಗಲೇ 1 ಲಕ್ಷ ರೂಪಾಯಿ ಮುಟ್ಟಿದೆ. ಸಾಮಾನ್ಯ ದಿನಗಳಲ್ಲಿ ಇದೇ ಕೊಠಡಿ ಬಾಡಿಗೆ 10 ಸಾವಿರ ರೂಪಾಯಿ ಆಸುಪಾಸಿನಲ್ಲಿರುತ್ತದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ

ಅಹಮದಾಬಾದ್ ನಗರದಲ್ಲಿ ಸಾಮಾನ್ಯ ದಿನಗಳಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಠಡಿ ಬಾಡಿಗೆ 5ರಿಂದ 8 ಸಾವಿರ ರೂ. ಅಕ್ಟೋಬರ್ 15ಕ್ಕೆ 40,000 ರೂ.ಗೆ ಜಿಗಿದಿದ್ದು, ಕೆಲವೆಡೆ 1 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.

ಹೋಟೆಲ್ ಬುಕಿಂಗ್ ಪೋರ್ಟಲ್ 'booking.com' ಪ್ರಕಾರ, ಜುಲೈ 2 ಕ್ಕೆ ನಗರದ ಐಟಿಸಿ ಹೋಟೆಲ್‌ಗಳ ವೆಲ್‌ಕಮ್ ಹೋಟೆಲ್‌ನಲ್ಲಿ ಒಂದು ಡೀಲಕ್ಸ್ ರೂಮ್‌ನ ಬಾಡಿಗೆ 5,699 ರೂ. ಆದರೆ, ಅದೇ ಹೋಟೆಲ್ ಅಕ್ಟೋಬರ್ 15 ರಂದು ಒಂದು ದಿನ ಉಳಿಯಲು ಬಯಸಿದರೆ 71,999 ರುಪಾಯಿ ನೀಡಬೇಕಾಗುತ್ತದೆ.

ಎಸ್‌ಜಿ ಹೆದ್ದಾರಿಯಲ್ಲಿರುವ ನವೋದಯ ಅಹಮದಾಬಾದ್ ಹೋಟೆಲ್, ಈಗ ದಿನಕ್ಕೆ ಸುಮಾರು 8,000 ರೂಪಾಯಿಗಳನ್ನು ವಿಧಿಸುತ್ತದೆ, ಅಕ್ಟೋಬರ್‌ನಲ್ಲಿ ಪಂದ್ಯದ ದಿನದಂದು ಪ್ರತಿ ದಿನದ ಕೊಠಡಿ ಬಾಡಿಗೆಯನ್ನು 90,679 ರೂಪಾಯಿಗಳಲ್ಲಿ ತೋರಿಸುತ್ತಿದೆ.

ಅದೇ ರೀತಿ, ಎಸ್‌ಜಿ ಹೆದ್ದಾರಿಯಲ್ಲಿರುವ ಪ್ರೈಡ್ ಪ್ಲಾಜಾ ಹೋಟೆಲ್ ಅಕ್ಟೋವರ್ 15ರಂದು ಒಂದು ದಿನದ ಬಾಡಿಗೆಯನ್ನು 36,180 ರೂ.ಗೆ ಹೆಚ್ಚಿಸಿದೆ. ಸಬರಮತಿ ರಿವರ್‌ಫ್ರಂಟ್‌ನಲ್ಲಿರುವ ಕಾಮಾ ಹೋಟೆಲ್‌ನಲ್ಲಿ ಈಗ ತಂಗಿದರೆ 3,000 ರೂಪಾಯಿ ಬಾಡಿಗೆ ಇದ್ದು ಭಾರತ-ಪಾಕಿಸ್ತಾನ ಪಂದ್ಯದ ದಿನ ಇಲ್ಲಿ ತಂಗಲು ಒಂದು ದಿನಕ್ಕೆ 27,233 ರೂಪಾಯಿ ಪಾವತಿಸಬೇಕು.

ಹಲವು ಹೋಟೆಲ್‌ಗಳು ಆಗಲೇ ಭರ್ತಿ

ಅಭೂತಪೂರ್ವ ಬೇಡಿಕೆಯಿಂದಾಗಿ, ನಗರದ ಎಲ್ಲಾ ಪಂಚತಾರಾ ಹೋಟೆಲ್‌ಗಳಾದ ಮ್ಯಾರಿಯಟ್, ಹಯಾಟ್ ಮತ್ತು ತಾಜ್ ಸ್ಕೈಲೈನ್ ಅಹಮದಾಬಾದ್‌ನಿಂದ ಐಟಿಸಿ ನರ್ಮದಾ, ಕೋರ್ಟ್‌ಯಾರ್ಡ್‌ನಲ್ಲಿ ಅಕ್ಟೋಬರ್ 15 ರಂದು ಕೊಠಡಿಗಳೆಲ್ಲಾ ಬುಕ್ ಆಗಿವೆ.

ಗುಜರಾತ್‌ನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ (ಎಚ್‌ಆರ್‌ಎ) ಪದಾಧಿಕಾರಿಗಳ ಪ್ರಕಾರ, ಬೇಡಿಕೆಗೆ ಅನುಗುಣವಾಗಿ ಹೋಟೆಲ್‌ಗಳು ಬೆಲೆಗಳನ್ನು ಹೆಚ್ಚಿಸಿವೆ, ಹೆಚ್ಚಾಗಿ ಅನಿವಾಸಿ ಭಾರತೀಯರು (ಎನ್‌ಆರ್‌ಐ), ಬೇರೆ ರಾಜ್ಯಗಳ ಶ್ರೀಮಂತ ಕ್ರಿಕೆಟ್ ಅಭಿಮಾನಿಗಳು ತಂಗಲಿದ್ದಾರೆ.

ಐಷಾರಾಮಿ ಹೋಟೆಲ್‌ಗಳ ದರಗಳು ಮಾತ್ರ ದುಬಾರಿಯಾಗಿದ್ದು ಸಾಮಾನ್ಯ ಹೋಟೆಲ್ ಮತ್ತು ಲಾಡ್ಜ್‌ಗಳಲ್ಲಿ ಸದ್ಯ ಬೆಲೆ ಏರಿಕೆ ಏನು ಕಂಡುಬಂದಿಲ್ಲ, ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಮಾರಾಟವಾದ ಬಳಿಕ ಹೋಟೆಲ್‌ಗಳಲ್ಲಿ ಮತ್ತಷ್ಟು ಬೇಡಿಕೆ ಬರಲಿದ್ದು, ಸಾಮಾನ್ಯ ಹೋಟೆಲ್, ಲಾಡ್ಜ್‌ಗಳ ದರವೂ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+