Hosur-Bommasandra Metro: ಕರ್ನಾಟಕ - ತಮಿಳುನಾಡು; ಹೊಸೂರು-ಬೊಮ್ಮಸಂದ್ರ ಮೆಟ್ರೋದ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ವಿಜಯ್ ಮನವಿ

Hosur-Bommasandra Metro: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಹೊಸೂರು ಹಾಗೂ ಕರ್ನಾಟಕದ ಬೊಮ್ಮಸಂದ್ರ ಮೆಟ್ರೋ ಮಾರ್ಗಕ್ಕೆ ಅನುಮೋದನೆ ಕೊಡುವಂತೆ ಕೋರಿದ್ದಾರೆ. ಈ ವಿಷಯವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಚೆನ್ನೈನಲ್ಲಿ ಇಂದು ವೇದಿಕೆ ಹಂಚಿಕೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಹೊಸೂರು-ಬೊಮ್ಮಸಂದ್ರ ಮೆಟ್ರೋ ಮಾರ್ಗಕ್ಕೆ ಅನುಮೋದನೆ ನೀಡುವಂತೆ ಕೋರಿದ್ದಾರೆ.

Hosur-Bommasandra Metro Tamil Nadu CM Vijay Urges PM Modi to Approve Metro Link Between Karnataka TN

ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 11ರ ಭಾನುವಾರ ಚೆನ್ನೈ ಮೆಟ್ರೋ ರೈಲು ಹಂತ II ರ 15 ಕಿ.ಮೀ. ಪೂನಮಲ್ಲಿ ಬೈಪಾಸ್-ವಡಪಳನಿ ಮಾರ್ಗವನ್ನು ಉದ್ಘಾಟಿಸಿದರು ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ರೈಲು ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು, 2026ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಡುವೆ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ.

ಈ ಯೋಜನೆಗಳು ಖಂಡಿತವಾಗಿಯೂ ಈ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತವೆ. ಗೋದಾವರಿ-ಕಾವೇರಿ ಸಂಪರ್ಕ ಯೋಜನೆಯು ದಕ್ಷಿಣ ರಾಜ್ಯಗಳಲ್ಲಿ ಜಲಸಂಪನ್ಮೂಲಗಳನ್ನು ವೃದ್ಧಿಸುವ ಪ್ರಮುಖ ಅವಕಾಶವನ್ನು ಕಲ್ಪಿಸುತ್ತದೆ. ಭಾರತ ಸರ್ಕಾರವು ಆದ್ಯತೆ ನೀಡಿ ಅದನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವಿಜಯ್ ತಮಿಳುನಾಡಿನ ಚೆನ್ನೈ ಹೊಸ ಮೆಟ್ರೋ ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟಿಕೆಟ್ ಖರೀದಿಸಿದರು ಮತ್ತು ವಿಜಯ್ ಮತ್ತು ಇತರ ಅಧಿಕಾರಿಗಳೊಂದಿಗೆ ರೈಲು ಹತ್ತುವ ಮೊದಲು ಟಿಕೆಟ್ ಕೌಂಟರ್‌ನಲ್ಲಿ ಉದ್ಯೋಗಿಯೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಇದ್ದರು.

ಹೊಸದಾಗಿ ಉದ್ಘಾಟಿಸಲಾದ ಎರಡನೇ ಹಂತದ ಕಾರಿಡಾರ್ 4 ರ ಭಾಗವಾಗಿದೆ. 11 ಎತ್ತರದ ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗವು ಚೆನ್ನೈನ ಪಶ್ಚಿಮ ಉಪನಗರಗಳು ಮತ್ತು ನಗರ ಕೇಂದ್ರದ ನಡುವಿನ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದೆ, ಜೊತೆಗೆ ದೈನಂದಿನ ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಹೊಸದಾಗಿ ಪ್ರಾರಂಭವಾಗಿರುವ ಮೆಟ್ರೋ ಮಾರ್ಗವು 3.7 ಕಿ.ಮೀ. ಡಬಲ್-ಡೆಕ್ಕರ್ ರಚನೆ ಮತ್ತು ಚಾಲಕರಹಿತ ರೈಲು ಕಾರ್ಯಾಚರಣೆಗಳನ್ನು ನಡೆಸುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಈ ಮಾರ್ಗದಲ್ಲಿರುವ 11 ನಿಲ್ದಾಣಗಳೆಂದರೆ ಪೂನಮಲ್ಲಿ ಬೈಪಾಸ್, ಪೂನಮಲ್ಲಿ ಬಸ್ ನಿಲ್ದಾಣ, ಪೂನಮಲ್ಲಿ ಸರ್ಕಾರಿ ಆಸ್ಪತ್ರೆ, ಕರಯಂಚಾವಡಿ, ಕುಮನಂಚವಾಡಿ, ಕಟ್ಟುಪಕ್ಕಂ, ಇಯಪ್ಪಂತಂಗಲ್, ತೆಲ್ಲಿಯರಾಗರಂ, ಪೋರೂರ್ ಬೈಪಾಸ್, ಪೋರೂರ್ ಜಂಕ್ಷನ್ ಮತ್ತು ವಡಪಳನಿ ಎನ್ನುವ ನಿಲ್ದಾಣಗಳಿವೆ.

ಪ್ರಧಾನಿ ಮೋದಿ ಚೆನ್ನೈ ಭೇಟಿ: 13,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

13,000 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು, ಕರ್ನಾಟಕ - ತಮಿಳುನಾಡು; ಹೊಸೂರು-ಬೊಮ್ಮಸಂದ್ರ ಮೆಟ್ರೋ ಯೋಜನೆಗೆ ಅನುಮೋದನೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+