ಛೀ.. ಛೀ ಮಲ್ಲಿಕಾರ್ಜುನ "ಖರ್ಗೆ ಮಾತು ಅಸಹ್ಯ" ಎಂದ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಫೂಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೇ ಛೇ..ಛೇ ಇದೆಂತಹ ಅಸಹ್ಯಕರ ಹಾಗೂ ಅವಮಾನಕರವಾಗಿ ಭಾಷಣ ಮಾಡಿದ್ದೀರಿ ಎಂದು ಹೇಳಿದ್ದಾರೆ. ಇಷ್ಟಕ್ಕು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಮಿತ್‌ ಶಾ ಅವರು ಈ ರೀತಿ ಯಾಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಗೃಹ ಸಚಿವ ಅಮಿತ್ ಅವರು ಮಲ್ಲಿಕಾರ್ಜನ ಖರ್ಗೆ ಮೇಲೆ ತೀವ್ರ ಕೆಂಡಾಮಂಡಲಾಗಿದ್ದಾರೆ. ಈ ರೀತಿ ಅಮಿತ್‌ ಶಾ ಕೆಂಡಾಮಂಡಲರಾಗುವುದಕ್ಕೆ ಕಾರಣವಾಗಿರುವುದು ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತು. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದರೆ, ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಬಂದ ಕೂಡಲೇ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಭಾಷಣದಲ್ಲಿ ನಾನು ಇಷ್ಟೊಂದು ಬೇಗ ಸಾಯಲ್ಲ ಬಿಡ್ರಿ, ಆ ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸಿದ ಮೇಲೆಯೇ ನಾನು ಸಾಯುವುದು ಎಂದಿದ್ದರು. ಇದಕ್ಕೆ ಸೋಷಿಯಲ್‌ ಮೀಡಿಯಾ ಸೇರಿದಂತೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಅಮಿತ್‌ ಶಾ ಅವರು ಮಲ್ಲಿಕಾರ್ಜುನ ಖರ್ಗೆಯ ಮೇಲೆ ಕೆಂಡಾಮಂಡಲರಾಗಿದ್ದಾರೆ.

Home Minister Amit Shah is furious with AICC president Mallikarjuna Kharge

ಖರ್ಗೆ ಬಗ್ಗೆ ಅಮಿತ್‌ ಶಾ ಹೇಳಿದ್ದೇನು ?

ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗರಂ ಆಗಿರುವ ಅಮಿತ್‌ ಶಾ ಅವರು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ. ರೀ ಸ್ವಾಮಿ ಏನ್ರಿ ನಿಮ್ಮ ಮಾತು ಎಂದಿದ್ದಾರೆ. ಭಾನುವಾರ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ಮಾತನಾಡಿರುವುದು ಅಸಹ್ಯಕರ ಹಾಗೂ ಅವಮಾನಕರವಾಗಿದೆ. ಮೋದಿ ಅವರು ಬಗ್ಗೆ ಅವರು ಮಾತನಾಡಿರುವ ಮಾತುಗಳು ಅತ್ಯಂತ ಅಸಹ್ಯಕರವಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನವಶ್ಯಕವಾಗಿ ಪ್ರಸ್ತಾಪಿಸಿದ್ದಾರೆ. ಮೋದಿ ಅವರ ಬಗ್ಗೆ ಮಾತನಾಡುವುದರಿಲ್ಲಿ ಖರ್ಗೆ ಅವರು, ಅವರ ಪಕ್ಷದ (ಕಾಂಗ್ರೆಸ್‌) ನಾಯಕರನ್ನೂ ಮೀರಿಸಿದ್ದಾರೆ. ಅವರ ಭಾಷಣವು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅವಮಾನಕರವಾಗಿತ್ತು. ಈ ವಿಷಯದಲ್ಲಿ ಅವರು ತಮ್ಮ ಪಕ್ಷದ ನಾಯಕರನ್ನು ಮತ್ತು ತಮ್ಮ ಪಕ್ಷವನ್ನು ಮೀರಿ ಮಾತನಾಡಿದ್ದಾರೆ. ಇದು ದ್ವೇಷದ ಪ್ರದರ್ಶನವಲ್ಲದೆ ಮತ್ತಿನ್ನೇನು ಅಲ್ಲ. ಖರ್ಗೆ ಅವರ ಅನಾರೋಗ್ಯ ಸಮಸ್ಯೆಯಲ್ಲಿ ಕಾರಣವೇ ಇಲ್ಲದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವವರೆಗೆ ನಾನು ಸಾಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ವೈಯಕ್ತಿಕ ಆರೋಗ್ಯ ಸಮಸ್ಯೆಯ ವಿಷಯಕ್ಕೆ ಅನಗತ್ಯವಾಗಿ ಪ್ರಧಾನಿ ಮೋದಿಯನ್ನು ಎಳೆದು ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

Home Minister Amit Shah is furious with AICC president Mallikarjuna Kharge

ಮೋದಿ ಕಂಡರೆ ಅಷ್ಟೊಂದು ಭಯವೇ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರೆ ಕಾಂಗ್ರೆಸ್‌ ನಾಯಕರಿಗೆ ಇಷ್ಟೊಂದು ಭಯವೇ ಎಂದು ಖರ್ಗೆ ಅವರಿಗೆ ಅಮಿತ್‌ ಶಾ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಎಷ್ಟು ದ್ವೇಷ ಹಾಗೂ ಭಯ ಇದೆ ಎನ್ನುವುದಕ್ಕೆ ಖರ್ಗೆ ಅವರ ಮಾತುಗಳೇ ಸಾಕ್ಷಿಯಾಗಿದೆ. ಮೋದಿ ಅವರ ಬಗ್ಗೆ ಕಾಂಗ್ರೆಸ್‌ ಅವರು ಮೂರುವೊತ್ತು ಯೋಚಿಸುತ್ತಿದ್ದಾರೆ ಎಂದು ಖರ್ಗೆ ಮಾತಿನಿಂದ ತಿಳಿಯುತ್ತದೆ ಎಂದು ಶಾ ಹೇಳಿದ್ದಾರೆ. ಇರಲಿ, ಮಲ್ಲಿಕಾರ್ಜುನ ಖರ್ಗೆ ಅವರು ಆಯುಆರೋಗ್ಯವಾಗಿ ಇರಲಿ ಎಂದು ಮೋದಿ ಅವರು ಪ್ರಾರ್ಥಿಸುತ್ತಿದ್ದಾರೆ. ನಾನು ಸಹ ಪ್ರಾರ್ಥಿಸುತ್ತೇನೆ. ನಾವೆಲ್ಲರೂ ಅವರು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಬೇಕೆಂದು ಪ್ರಾರ್ಥಿಸುತ್ತೇವೆ. ಅವರು ಹಲವು ವರ್ಷಗಳ ಕಾಲ ಬದುಕಲಿ ಮತ್ತು 2047ರ ವಿಕಸಿತ ಭಾರತವನ್ನು ನೋಡಲಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+