School Holiday: ಫೆಬ್ರವರಿ 14ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ
Holiday: ಸಾಮಾನ್ಯವಾಗಿ ಹಬ್ಬಗಳು, ವಿಶೇಷ ಕಾರ್ಯಮಗಳ ಸಮಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಹಾಗೆಯೇ ಇದೀಗ ದೇಶದ ಈ ಭಾಗಗಳಲ್ಲಿ 2025ರ ಫೆಬ್ರವರಿ 12 ರಿಂದ 14ರ ವರೆಗೆ ಶಾಲಾಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಪ್ರತೀ ದಿನವೂ ಕೊಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಬರೀ ದೇಶ ಅಲ್ಲದೆ, ವಿದೇಶಗಳಿಂದ ಭಕ್ತರು ಆಗಮಿಸುತ್ತಲೇ ಇದ್ದಾರೆ. ಆದ್ದರಿಂದ ಪ್ರಯಾಗರಾಜ್ ಸುತ್ತಮುತ್ತ ಮಾತ್ರವಲ್ಲದೆ, ಹಲವು ಜಿಲ್ಲೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸುತ್ತಲೇ ಇದೆ. ಇದರ ಜೊತೆಗೆ ರವಿದಾಸ್ ಜಯಂತಿ ಹಿನ್ನೆಲೆ ಉತ್ತರ ಪ್ರದೇಶ ಹಾಗೂ ನವದೆಹಲಿಯ ಕೆಲ ಭಾಗದ ಶಾಲೆಗಳಿಗೆ ಫೆಬ್ರವರಿ 12ರಿಂದ ಫೆಬ್ರವರಿ 14ರ ವರೆಗೆ ರಜೆ ಘೋಷಣೆ ಮಾಡಲಾಗಿದೆ.

ಮಹಾ ಕುಂಭ ಮೇಳದಲ್ಲಿ ಜನಸಾಗರ ನೆರೆಯುತ್ತಿರುವ ಹಿನ್ನೆಲೆ ಪ್ರಯಾಗ್‌ರಾಜ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶಾಲೆಗಳನ್ನು ಕ್ಲೋಸ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ನು ಫೆಬ್ರವರಿ 12ರಂದು ರವಿದಾಸ್ ಜಯಂತಿ ಹಿನ್ನೆಲೆ ನವದೆಹಲಿಯಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಹಾಗೆಯೇ ಪ್ರಯಾಗ್‌ರಾಜ್, ವಾರಣಾಸಿ, ಅಯೋಧ್ಯೆ ಮತ್ತು ಮಿರ್ಜಾಪುರ ಸೇರಿ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ 14ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಹಾ ಕುಂಭಮೇಳಕ್ಕೆ ಪ್ರತಿದಿನವೂ ಜನಸಾಗರವೇ ಹರಿದುಬರುತ್ತಿದೆ. ಆದ್ದರಿಂದ ಪ್ರಯಾಗ್‌ರಾಜ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶಾಲೆಗಳನ್ನು ತಾತ್ಕಾಲಿಕವಾಗಿ ಕ್ಲೋಸ್ ಮಾಡಲು ಆದೇಶಿದೆ. ಅಷ್ಟೇ ಅಲ್ಲದೆ, ಐಐಟಿ ರೂರ್ಕಿ ಅವರು ಸಹ ಮಹಾ ಕುಂಭ ಮೇಳಕ್ಕೆ ಹರಿದುಬರುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್‌ರಾಜ್‌ನಲ್ಲಿ ನಿಗದಿಪಡಿಸಿದ್ದ ಗೇಟ್ ಪರೀಕ್ಷಾ ಕೇಂದ್ರವನ್ನು ವಾರಣಾಸಿಗೆ ಸ್ಥಳಾಂತರಿಸಲಾಗಿದೆ.
ಇಂದು (ಫೆಬ್ರವರಿ 12) ಸಂತ ರವಿದಾಸ್ ಜಯಂತಿ ಹಿನ್ನೆಲೆ ದೆಹಲಿಯ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ. ಫೆಬ್ರವರಿ 13ರಿಂದ ಎಂದಿನಂತೆ ಈ ಭಾಗದಲ್ಲಿ ಶಾಲೆಗಳು ಮತ್ತೆ ನಡೆಯುತ್ತವೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳೆ ಹಿನ್ನೆಲೆ ನೆರೆಯುವ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ವಾರಣಾಸಿ ಆಡಳಿತವು 1 ರಿಂದ 8ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ಫೆಬ್ರವರಿ 14ರ ವರೆಗೆ ರಜೆ ಘೋಷಣೆ ಮಾಡಿದೆ.
ಈ ಸಮಯದಲ್ಲಿ ಆನ್‌ಲೈನ್ ಮೂಲಕ ಕ್ಲಾಸ್‌ಗಳು ಮುಂದುವರೆಯುತ್ತವೆ. ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಡಾ.ಅರವಿಂದ್ ಕುಮಾರ್ ಪಾಠಕ್ ಅವರು ನಗರ ಪ್ರದೇಶದ 99 ಪರಿಷದೀಯ ಶಾಲೆಗಳಲ್ಲಿ ಆನ್‌ಲೈನ್ ಪಾಠಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೆಯೇ ಅಯೋಧ್ಯೆಯಲ್ಲಿಯೂ ಶಾಲೆಗಳಿಗೆ ಫೆಬ್ರವರಿ 14ರ ವರೆಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಪ್ರಕಾರ, 12ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಈ ಅವಧಿಯಲ್ಲಿ ಬಂದ್ ಆಗಿರಲಿವೆ.
ಮಿರ್ಜಾಪುರ ಜಿಲ್ಲೆಯಲ್ಲೂ ನರ್ಸರಿಯಿಂದ 8ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಫೆಬ್ರವರಿ 14ರ ಕ್ಲೋಸ್ ಮಾಡಲು ಆದೇಶಿಸಲಾಗಿದೆ. ಇನ್ನು ಫೆಬ್ರವರಿ 15 ಸರ್ಕಾರಿ ರಜೆ ಇದ್ದು, ಫೆಬ್ರವರಿ 17ರಿಂದ ಪ್ರಯಾಗ್‌ರಾಜ್, ವಾರಣಾಸಿ, ಅಯೋಧ್ಯೆ ಮತ್ತು ಮಿರ್ಜಾಪುರದ ಹೆಚ್ಚಿನ ಶಾಲೆಗಳು ಮತ್ತೆ ತೆರೆಯುತ್ತವೆ. ಜನಸಂದಣಿ ನಿಯಂತ್ರಣಕ್ಕೆ ಬರೆದಿದ್ದರೆ, ರಜಾದಿನಗಳ ಅವಧಿಯನ್ನ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ಆಡಳಿತ ತಿಳಿಸಿದೆ.












Click it and Unblock the Notifications